ಕನ್ಯಾಡಿ: ಚಾತುರ್ಮಾಸ್ಯ ವೃತಾಚರಣೆಯಲ್ಲಿ ವಾಲಿಸುಗ್ರೀವ ಕಾಳಗ ತಾಳಮದ್ದಳೆ: ಭಜನಾ ಕಾರ್ಯಕ್ರಮ
ಕನ್ಯಾಡಿ: ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ 26 ನೇ ದಿನದ ಚಾತುರ್ಮಾಸ್ಯ ವೃತಾಚರಣೆಯಲ್ಲಿ ಆ.7 ರಂದು ವಿನಾಯಕ ಭಜನಾ ಮಂಡಳಿ ಅಂಡಿಂಜೆ, ತೆಕ್ಕಾರು, ಹೊನ್ನಾವರ ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ ಹಾಗೂ ಶ್ರೀ ದುರ್ಗಾಂಬ ಕಲಾ ಸಂಗಮ , ಶ್ರೀ ಕ್ಷೇತ್ರ ಶರವೂರು ಆಲಂಕಾರು ಇವರಿಂದ ವಾಲಿಸುಗ್ರೀವ ಕಾಳಗ ತಾಳಮದ್ದಳೆ ಜರುಗಿತು.
ಶ್ರೀ ಗೋಪಾಲಕೃಷ್ಣ ಭಟ್ ನೈಮಿಷ, ಶ್ರೀ ಕುಸುಮಾಧರ ಆಚಾರ್ಯ ಇವರ ಭಾಗವತಿಕೆಯಲ್ಲಿ, ಚಂದ್ರ ದೇವಾಡಿಗ ನಗ್ರಿ, ಶ್ರೀ ಹರಿ ದೇವಾಡಿಗ, ಮೋಹನ ಶರವೂರು ಇವರ ಚೆಂಡೆ ಮದ್ದಳೆಯಲ್ಲಿ, ಅರ್ಥದಾರಿಗಳಾಗಿ ಶ್ರೀರಾಮ ನಾಗಿ ಗಣರಾಜ ಕುಂಬ್ಳೆ, ವಾಲಿಯಾಗಿ ಚಂದ್ರ ಶೇಖರ ಅಲಂಕಾರು, ಹನುಮಂತನಾಗಿ ಪಿ ರಾಘವೇಂದ್ರ ಪ್ರಸಾದ್ ಭಟ್, ಸುಗ್ರೀವಾ ದಿವಾಕರ್ ಆಚಾರ್ಯ, ತಾರೆಯಾಗಿ ನಾರಾಯಣ ಭಟ್, ಕೆ ಚಂದ್ರಶೇಖರ್ ಅಲಂಕಾರು ಇವರ ಸಂಯೋಜನೆಯಲ್ಲಿ ಅದ್ಭುತವಾಗಿ ವಾಲಿಸುಗ್ರೀವ ಕಾಳಗ ತಾಳಮದ್ದಳೆ ಜರುಗಿತು.
ಈ ಸಂದರ್ಭದಲ್ಲಿ ಶಿರಸಿ ತಾಲೂಕು ಆರ್ಯ ಈಡಿಗ ನಾಮದಾರಿ ಬಿಲ್ಲವ ಅಭಿವೃದ್ಧಿ ಸಂಘದ ಅಧ್ಯಕ್ಷರು ಭೀಮಣ್ಣ ನಾಯ್ಕ್, ಭಟ್ಕಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ವೀರಪ್ಪ ಗರದಿಕ್ಕರ್, ಹಳೇ ಕೋಟೆ ಹನುಮಂತ ದೇವಸ್ಥಾನ ಶಾರದಾ ಹೊಳೆ ಶಿರಾಲಿ ಕೃಷ್ಣ ನಾಯ್ಕ್ ಮತ್ತು ನಾಗೇಂದ್ರ ತಂಡ, ಉದಯ ಎಂ ನಾಯ್ಕ್ ಮತ್ತು ಮನೆಯವರು ಕೊಪ್ಪಲ್ ಕೇರಿ ಹೊನ್ನಾವರ, ರಾಮಕ್ಷೇತ್ರ ಸೇವಾ ಸಮಿತಿ ಟಿ ಟಿ ನಾಯ್ಕ್ ಕಾರ್ಯ ದರ್ಶಿ ಹೊನ್ನಾವರ, ವೀರ ವಿಠಲ ದೇವಸ್ಥಾನ ಕರ್ಕಿ ಕೊಡಿ, ವಾಮನ ನಾಯ್ಕ್ ಸಂಚಾಲಕರಿಂದ ಗುರುಪಾದುಕ ಪೂಜೆಯನ್ನು ನೆರವೇರಿಸಿದರು.
ಈ ವೇಳೆ ಭಜನಾ ತಂಡ, ಗಣ್ಯಾಥಿ ಗಣ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.