ಶಿಬಾಜೆ: ಕಾಡಿನಲ್ಲಿ ದಾರಿ ತಪ್ಪಿ ಬದುಕಿ ಬಂದ 6 ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ: ಕಾಡಂಚಿನಿಂದ ಕೇಳಿದ ಕೂಕಲು ಶಬ್ದ ಇವರ ಪತ್ತೆಗೆ ಸಹಕಾರಿಯಾಯಿತೆ?
ಬೆಳ್ತಂಗಡಿ : ಶಿಬಾಜೆಯಲ್ಲಿ ವ್ಯಕ್ತಿಯೋರ್ವರು ಕಣ್ಮರೆಯಾಗಿ ಆರು ದಿನಗಳ ಬಳಿಕ ಬದುಕಿ ಬಂದಿರುವ ಘಟನೆ ನಡೆದಿದೆ.
ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ , ಪರಿಸರ ಪ್ರೇಮಿ ದಿನೇಶ್ ಹೊಳ್ಳ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಕಾಡಿನಲ್ಲಿ ದಾರಿ ತಪ್ಪಿದ್ದ ವೃದ್ದನನ್ನು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಮನೆಗೆ ಕರೆ ತರಲಾಯಿತು.
ಕಟ್ಟಿಗೆ ತರಲು ಕಾಡಿಗೆ ಹೊರಟಿದ್ದ ವಾಸು ರಾಣ್ಯಗೆ ಕಾಡಿನಲ್ಲಿ ಯಾರೋ ಕೃದಂತಾಗಿ ಬಳಿಕ ಕಾಡಿನಲ್ಲಿ ದಾರಿ ತಪ್ಪಿ ಬಳಿಕ ಬರೀ ನೀರು ಕುಡಿದು ಬದುಕಿದ್ದರು ಎನ್ನಲಾಗಿದ್ದು ನಾಪತ್ತೆಯಾಗಿದ್ದ 5 ದಿನಗಳ ಬಳಿಕ ಕಾಡಿನಿಂದ ಕೇಳಿಸಿದ ಸಣ್ಣ ಕೂಕಲು ಶಬ್ದವೇ ಅವರನ್ನು ಮರಳಿ ಕರೆತರಲು ಸಾಧ್ಯವಾಗಿಸಿದ್ದು ಎಂದು ಹೇಳುತ್ತಾರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸ್ವಯಂಸೇವಕರು