• January 15, 2025

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್(ರಿ) ಉಜಿರೆ ತಂಡದಿಂದ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾ ಸಾಮಾಗ್ರಿ, ಸಮವಸ್ತ್ರ ವಿತರಣೆ

 ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್(ರಿ) ಉಜಿರೆ ತಂಡದಿಂದ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾ ಸಾಮಾಗ್ರಿ, ಸಮವಸ್ತ್ರ ವಿತರಣೆ

 

ಬೆಳ್ತಂಗಡಿ : ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ) ಉಜಿರೆ ಇವರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾ ಸಾಮಾಗ್ರಿ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮ ಸೆ.24 ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಬ್ಯಾಂಕ್ ಆಫ್ ಬರೋಡ ವಿಭಾಗೀಯ ಮುಖ್ಯಸ್ಥರು ಮತ್ತು ಜನರಲ್ ಮ್ಯಾನೇಜರ್ ಶ್ರೀಮತಿ ಗಾಯತ್ರಿ ಆರ್ ನೆರವೇರಿಸಿದರು. ಕಾರ್ಯಕ್ರಮದ ಉಜಿರೆ ಜರ್ನಾದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ಟುನ್ನಯ ಅಧ್ಯಕ್ಷೆತೆ ವಹಿಸಿದ್ದರು. ಬೆಳ್ತಂಗಡಿ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ಧನರಾಜ್, ಉಜಿರೆ ಎಸ್.ಡಿ.ಎಂ ಸೊಸೈಟಿ ಐಟಿ ಮತ್ತು ಹಾಸ್ಟೆಲ್ ಗಳ ಸಿಇಒ ಪೂರಣ್ ವರ್ಮ, ಬೆಳ್ತಂಗಡಿ ವಕೀಲರಾದ ಬಿ.ಕೆ ಧನಂಜಯ್ ರಾವ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು.

ಉಜಿರೆಯ ಉದ್ಯಮಿಗಳಾದ ಮೋಹನ್ ಶೆಟ್ಟಿಗಾರ್, ಭಾರತ್ ಐರನ್ ಇಂಡಸ್ಟ್ರಿಯ ಮಾಲಕ ಪಾಂಡುರಂಗ ಬಾಳಿಗಾ, ಇಂಡಿಯನ್ ಅರ್ಥ್ ಮೂವರ್ಸ್ ನ ರಾಘವೇಂದ್ರ ಬೈಪಾಡಿತ್ತಾಯ, ಲಕ್ಷ್ಮಣ್, ಕರುಣಾಕರ್ ನಾಯಕ್, ಮಾಜಿ ತಾಲೂಕ್ ಪಂಚಾಯತ್ ಸದಸ್ಯ ಶಶಿಧರ್ ಕಳ್ಮಂಜ, ಉಜಿರೆ ಎಸ್ ಡಿ ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜಯಕುಮಾರ್ ಶೆಟ್ಟಿ ಪ್ರಕಾಶ್ ಗೌಡ ಅಪ್ರಮೇಯ, ಎಸ್ ಡಿ ಎಂ ಕಾಲೇಜಿನ ಶಾರೀರಿಕ ಶಿಕ್ಷಕ ರಮೇಶ್, ರವಿ ಚಕ್ಕಿತಾಯ, ದಿಶಾ ಫುಡ್ ಕಾರ್ನರ್ ಅರುಣ್ ಕುಮಾರ್, ರೇಷ್ಮಾ ಮೋಹನ್ ಕುಮಾರ್, ಸುರಕ್ಷಾ ಮೆಡಿಕಲ್ ಶ್ರೀಧರ ಕೆ. ವಿ., ಶ್ರೀಧರ ಕಳ್ಮಂಜ, ಅಜಿತ್ ಕೊಕ್ರಾಡಿ, ಬದುಕು ಕಟ್ಟೋಣ ತಂಡದ ಕಾರ್ಯಕರ್ತರು, ಕ್ರೀಡಾ ಪಟು ಗಳು, ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.

ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ) ತಂಡದ ಸಂಚಾಲಕರಾದ ಕೆ.ಮೋಹನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಿ.ರಾಜೇಶ್ ಪೈ ವಂದಿಸಿದರು.ವಿಜಯ ಅತ್ತಾಜೆ ಕಾರ್ಯಕ್ರಮ ನಿರೂಪಿಸಿದರು.

Related post

Leave a Reply

Your email address will not be published. Required fields are marked *

error: Content is protected !!