ಧನುಶ್ರೀ ಬಾನವಾಳಿಕರ್ ರಾಷ್ಟ್ರ ಮಟ್ಟದ ಆಹ್ವಾನಿತ ತಂಡಗಳ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಪ್ರಥಮ ಸ್ಥಾನ
ಬೆಳೆಯುತ್ತಿರುವ ಜಗತ್ತಿನಲ್ಲಿ ಓಡುತ್ತಿರುವ ಜನ ಜೀವನದಲ್ಲಿ ನಮ್ಮ ದೇಹದ ಆರೋಗ್ಯ ಹಾಗೂ ಆತ್ಮ ಸ್ಥೈರ್ಯವನ್ನು ಕಾಪಾಡಿಕೊಳ್ಳುವುದು ಒಂದು ಅತ್ಯಮೂಲ್ಯ ಕಾರ್ಯವಾಗಿದೆ. ಈ ದಿನಗಳಲ್ಲಿ ದೇಹದ ಆರೋಗ್ಯ ಹಾಗೂ ದೃಡತೆಗಾಗಿ ವ್ಯಾಯಾಮ ಎರಡು ಮುಖ್ಯವಾಗಿದೆ ಈ
ಎರಡು ಆಯಾಮಗಳನ್ನು ಬಲಪಡಿಸುವ ಒಂದು ಕ್ರೀಡೆ ಎಂದರೆ ಅದು ಕರಾಟೆ. ಕರಾಟೆ ಇಂದ ನಮಗೆ ಸ್ವ ರಕ್ಷಣೆಯ ಕಲೆಯು ತಿಳಿಯುತ್ತದೆ ಹಾಗೆಯೇ ದೈರ್ಯವು ಬಂದು ನಮ್ಮ ದೇಹಕ್ಕೆ ಆರೋಗ್ಯ ಹಾಗೂ ದೃಡತೆಯು ಬರುತ್ತದೆ ಈ ಒಂದು ಕಲೆಯು ಕರಗತ ಮಾಡಿಕೊಳ್ಳುವುದು ಈ ಸಮಯದಲ್ಲಿ ಅಗತ್ಯ ಅದರಲ್ಲಿಯೂ ಮಹಿಳೆಯರಿಗೆ ಅತ್ಯಮೂಲ್ಯ.
ಕರಾಟೆ ಒಂದು ಕಲೆಯು ಹೌದು ಹಾಗೂ ಕ್ರೀಡೆಯು ಹೌದು ಕ್ರೀಡೆಯ ಆಯಾಮದಲ್ಲಿ ಕರಾಟೆ ಸ್ಪರ್ಧೆಗಳು ನಡೆಯುತ್ತಾ ಇರುತ್ತದೆ ಇಂತಹ ಒಂದು ಸ್ಪರ್ಧೆಯಲ್ಲಿ ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಧನುಶ್ರೀ ಬಾನವಾಳಿಕರ್ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಶೈನ್ ಸ್ಪೋರ್ಟ್ಸ್ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಆಹ್ವಾನಿತ ತಂಡಗಳ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಗೈದಿದ್ದಾ ರೆ.
ಇವರು ರೇಷ್ಮಾ ಮತ್ತು ರಮಾಕಾಂತ್ ಬಾನವಳಿಕರ್ ದಂಪತಿಯ ಪುತ್ರಿಯಾಗಿದ್ದು ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದು ಬುಡೋಕಾನ್ ಕರಾಟೆ ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್ ಇದರ ಮುಖ್ಯ ಶಿಕ್ಷಕರಾದ ರೆಂಷಿ.ವಾಮನ್ ಪಾಲನ್ ಹಾಗೂ ಪ್ರಜ್ವಲ್ ಶೆಟ್ಟಿ ಬಳಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.
ಇವಳ ಸಾಧನೆಗೆ ಶಾಲಾ ಮುಖ್ಯಸ್ಥರಾದ ರೆ|| ಫಾದರ್ ಲಿಝೋ ಚಾಕೋ ಖಜಾಂಚಿ ಶ್ರೀ ಕೆ. ಸಿ. ವರ್ಗೀಸ್, ಪ್ರಾಂಶುಪಾಲರಾದ ಥೆರೇಸಾ ಫರ್ನಾಂಡೀಸ್ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಮುಂದಿನ ಸಾಧನೆಗೆ ಹಾರೈಸಿದರು.
ಕಡಿಮೆ ಅವಧಿಯಲ್ಲಿ ತರಬೇತಿ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಧನುಶ್ರಿ ಯನ್ನು ಶಾಲಾ ಶಿಕ್ಷಕರು , ತರಬೇತುದಾರರು , ಪಾಲಕ ಪೋಷಕರು ,ವಿದ್ಯಾರ್ಥಿಗಳು ಅಭಿನಂದಿಸಿದರು.