ಬೆಳಾಲು ಗ್ರಾಮದ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ
ಬೆಳಾಲು: ಬೆಳಾಲು ಗ್ರಾಮದ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿ,ಮಹಿಳಾ ಸೇವಾ ಸಮಿತಿ,ವರಮಹಾಲಕ್ಷ್ಮೀ ಪೂಜಾ ಸಮಿತಿಯ ಆಶ್ರಯದಲ್ಲಿ ಆ.5 ರಂದು 8 ನೇ ವರ್ಷದ ವರಮಹಾಲಕ್ಷ್ಮೀ ವೃತ ಪೂಜೆಯೂ ದುರ್ಗಾಪ್ರಸಾದ್ ಕೆರ್ಮುಣ್ಣಾಯ ಮತ್ತು ಗಿರೀಶ್ ಬಾರಿತ್ತಾಯ ಪಾರಳ ಇವರ ಪೌರೋಹಿತ್ಯ ದಲ್ಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜೀವಂದರ ಕುಮಾರ್ ಬೆಳಾಲು ಗುತ್ತು,ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ನೋಟರಿ ವಕೀಲರು, ಉಪಾಧ್ಯಕ್ಷರಾದ ದಿನೇಶ್ ಪೂಜಾರಿ ಉಪ್ಪಾರು,ಮಹಿಳಾ ಸಮಿತಿ ಅಧ್ಯಕ್ಷೆ ಹೇಮಲತಾ ಶ್ರೀನಿವಾಸ ಗೌಡ ,ಮಹಿಳಾ ಸಮಿತಿ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಊರ ಭಕ್ತರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಮಹಿಳಾ ಸದಸ್ಯರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.