• December 9, 2024

ಉಡುಪಿ : ಕೊರಗಜ್ಜನ ಮಹಿಮೆಯಿಂದ ಕಳೆದುಕೊಂಡಿದ್ದ ದ್ವಿಚಕ್ರ ವಾಹನ ವಾಪಾಸ್: ಕೊರಗಜ್ಜನ ಕಾರ್ಣಿಕ ನೆನೆದು ಪ್ರತೀ ನಿತ್ಯ ದೈವಸ್ಥಾನವನ್ನು ಸ್ವಚ್ಛತೆ ಮಾಡುತ್ತಿರುವ ಪ್ರವೀಣ್

 ಉಡುಪಿ : ಕೊರಗಜ್ಜನ ಮಹಿಮೆಯಿಂದ ಕಳೆದುಕೊಂಡಿದ್ದ ದ್ವಿಚಕ್ರ ವಾಹನ ವಾಪಾಸ್: ಕೊರಗಜ್ಜನ ಕಾರ್ಣಿಕ ನೆನೆದು ಪ್ರತೀ ನಿತ್ಯ ದೈವಸ್ಥಾನವನ್ನು ಸ್ವಚ್ಛತೆ ಮಾಡುತ್ತಿರುವ ಪ್ರವೀಣ್

 

ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ದ ಸಾವಿರಾರು ವರ್ಷಗಳ ಐತಿಹ್ಯವಿರುವ ಅನಂತೇಶ್ವರ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಉಡುಪಿಯ ನಗರ ಗ್ರಾಮಕ್ಕೆ ಸಂಬಂಧಪಟ್ಟ ದೈವಸ್ಥಾನ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನ ಉಡುಪಿ.

ಈ ದೈವಸ್ಥಾನದಲ್ಲಿ ಪ್ರಮುಖ ದೈವಗಳಾದ ಬೊಬ್ಬರ್ಯ ಕಾಂತೇರಿ ಜುಮಾದಿ ಹಾಗೂ ಬಂಟ ಪಿಲಿಚಂಡಿ ಹಾಗೂ ಬಂಟ ಮತ್ತು ವರಮೂರ್ತಿ ಪಂಜುರ್ಲಿ ಕಲ್ಕುಡ ಕೊರಗಜ್ಜ ದೈವಗಳು ಪ್ರಧಾನವಾಗಿದ್ದು, 9 ದೈವಗಳಿಗೂ ಒಂದೊಂದು ಮೂಲ ಇತಿಹಾಸವಿದ್ದು ಕಾರ್ಣಿಕವನ್ನು ಮೆರೆಯುತ್ತಿದೆ. ಅದೆಷ್ಟೋ ಭಕ್ತರ ಕಣ್ಣೀರನ್ನು ಒರೆಸಿದ ಉದಾಹರಣೆಗಳಿವೆ ಅಂತಹದ್ದೆ ಉದಾಹರಣೆ ಪ್ರವೀಣ್ ಸೇರಿಗಾರ್.
ಉಡುಪಿಯ ಕಿನ್ನಿಮುಲ್ಕಿ ನಿವಾಸಿ ಪ್ರವೀಣ್ ಸೇರಿಗಾರ್

ಇಲ್ಲಿಯ ಕಿನ್ನಿಮುಲ್ಕಿ ನಿವಾಸಿ ಪ್ರವೀಣ್ ಎಂಬವರ ದ್ವಿಚಕ್ರ ವಾಹನವು ಕಳೆದು

ಹೋಗಿದ್ದ ವೇಳೆ ಈ ದೈವಸ್ಥಾನಕ್ಕೆ ಬಂದು ಭಕ್ತಿಯಿಂದ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿ ಚಕ್ಕುಲಿ ಬೀಡ ಲಿಕ್ಕರ್ ಬಾಟಲಿಯನ್ನು ಹರಕೆಯಾಗಿ ತೀರಿಸುತ್ತೇನೆ ಕಳವಾಗಿದ್ದ ಗಾಡಿಯನ್ನು ಮರಳಿ ಹಿಂಪಡಿಸು ಎಂದು ಪ್ರಾರ್ಥನೆ ಸಲ್ಲಿಸಿದ ನಂತರದ ವೇಳೆಯಲ್ಲಿ 15 ದಿನದಲ್ಲಿ ದ್ವಿಚಕ್ರ ವಾಹನವು ಗೋವಾದಲ್ಲಿ ಸಿಕ್ಕಿದೆ ಎಂಬ ಮಾಹಿತಿ ಪೊಲೀಸ್ ಮುಖಾಂತರ ದೂರವಾಣಿ ಕರೆಗೆ ಬರುತ್ತದೆ.

ತದನಂತರ‌ ದೈವಸ್ಥಾನಕ್ಕೆ ಭೇಟಿ ನೀಡಿ ಹರಕೆಯನ್ನು ತೀರಿಸಿ ಸಂಜೆ ದಿನನಿತ್ಯ ನಿನ್ನ ಆಲಯದಲ್ಲಿ ಸ್ವಚ್ಛತೆಯನ್ನು ಮಾಡುತ್ತೇನೆಂದು ಹೇಳಿ ಇದೀಗ ಪ್ರತೀ ನಿತ್ಯ ಸಂಜೆ ಸ್ವಚ್ಛತೆಯನ್ನು ಮಾಡುತ್ತಾರೆ.

Related post

Leave a Reply

Your email address will not be published. Required fields are marked *

error: Content is protected !!