• September 8, 2024

Tags :Ujire

General ಕಾರ್ಯಕ್ರಮ ಕ್ರೀಡೆ ಸ್ಥಳೀಯ

ಉಜಿರೆ ಧ. ಮಂ. ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

. ಉಜಿರೆ: ವ್ಯಾಯಾಮದ ಕೊರತೆಯಿಂದ ಹೃದಯಾಘಾತದ ಸಾಧ್ಯತೆ ಹೆಚ್ಚಿದ್ದು, ಯುವಜನತೆ ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳುವ ಅಗತ್ಯವಿದೆ ಎಂದು ಉಜಿರೆ ಧ. ಮಂ. ಕಾಲೇಜಿನ ಎಸ್.ಡಿ.ಎಂ. ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಹೆಚ್. ಅಭಿಪ್ರಾಯಪಟ್ಟರು. ಅವರು (ಆ.29) ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಘಟಕಗಳು ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. “ಈಗಿನ ಆಹಾರ ಪದ್ಧತಿ ಮತ್ತು ಜೀವನ ಶೈಲಿಗೆ ವ್ಯಾಯಾಮ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ 18 ವರ್ಷದ ಯುವಜನತೆ […]Read More

EDUCATION ಕಾರ್ಯಕ್ರಮ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ 9 ಹಾಗೂ ಹತ್ತನೇ ತರಗತಿಯ

ಉಜಿರೆ:ಆ.29 ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಒಂಬತ್ತನೆ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಎಸ್.ಡಿ.ಎಮ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಎಸ್.ಡಿ.ಎಮ್ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಆಯೋಜಿಸಿದ ಇಂಟರಾಕ್ಟಿವ್ ಕರಿಯರ್ ಕಾರ್ಯಗಾರ ನಡೆಯಿತು. ಎಸ್.ಡಿ.ಎಮ್.ಇ ಸೊಸೈಟಿ ಸಹಯೋಗದಲ್ಲಿ ನಡೆದ ಕಾರ್ಯಗಾರವನ್ನು ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀಯುತ ಡಾ. ಸತೀಶ್ಚಂದ್ರ ಎಸ್ ಇವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಅಧಿವೇಶನವು CAFY ಮತ್ತು […]Read More

ಕಾರ್ಯಕ್ರಮ ಧಾರ್ಮಿಕ ರಾಜ್ಯ ಸ್ಥಳೀಯ

ಸೆ.1:ವಿ.ಹಿ.ಪ ಬೆಳ್ತಂಗಡಿ ಪ್ರಖಂಡ, ವಿ.ಹಿ.ಪ ಸ್ಥಾಪನಾ ದಿನಾಚರಣೆ ಹಾಗೂ ಷಷ್ಠಿ ಪೂರ್ತಿ ಸಮಾರೋಪ

ಉಜಿರೆ: ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ, ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆ ಹಾಗೂ ಷಷ್ಠಿ ಪೂರ್ತಿ ಸಮಾರೋಪ ಸಂಭ್ರಮ ಪ್ರಯುಕ್ತ ಸೆಪ್ಟೆಂಬರ್ 1 ರಂದು ಬೃಹತ್ ಹಿಂದೂ ಸಮಾವೇಶವು ಶ್ರೀ ಶಾರದಾ ಮಂಟಪ ಉಜಿರೆಯಲ್ಲಿ ಜರುಗಲಿದ್ದು ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಬಿಡುಗಡೆಗೊಳಿಸಿದರು. ಬೆಳಾಲು ಕ್ರಾಸ್ ನಿಂದ ಹೊರಟು ಉಜಿರೆಯ ಶಾರದಾ ಮಂಟಪದವರೆಗೆ ವಿಶೇಷ ಆಕರ್ಷಣೀಯ ವೈಭವ ಪೂರ್ಣ ಭವ್ಯ ಮೆರವಣಿಗೆಯಿಂದ […]Read More

ಕ್ರೈಂ ಸಮಸ್ಯೆ ಸ್ಥಳೀಯ

ಉಜಿರೆ: ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ

ಉಜಿರೆ: ಉಜಿರೆ ಗ್ರಾಮದ ನಿವಾಸಿ ಸುರೇಶ್ (40) ಎಂಬ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಬಾಬು ಮುಗೇರ ಇವರ ಪುತ್ರ ಎಂದು ತಿಳಿದುಬಂದಿದ್ದು, ನಿರ್ಮಾಣ ಹಂತದಲ್ಲಿರುವ ಮನೆಯ ಕೋಣೆಯ ಒಳಗೆ ನೇಣು ಬಿಗಿದುಕೊಂಡಿದ್ದಾರೆ. ನಿಖರ ಕಾರಣ ತಿಳಿದುಬರಬೇಕಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆRead More

ಸ್ಥಳೀಯ

ಉಜಿರೆ ಶ್ರೀ ಧ.ಮಂ.ಸ್ವಾ.ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಭಟ್ಟ ಪ್ರಾಧ್ಯಾಪಕರಾಗಿ ವೃತ್ತಿ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಮತ್ತು ಕಲಾನಿಕಾಯದ ಡೀನ್ ಡಾ. ಶ್ರೀಧರ ಭಟ್ಟ ಇವರಿಗೆ ಪ್ರಾಧ್ಯಾಪಕರಾಗಿ ವೃತ್ತಿ ಪದೋನ್ನತಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಅಧ್ಯಾಪಕರಾಗಿ ಕಳೆದ ಮೂರು ದಶಕಗಳಿಂದ ಸೇವೆಯನ್ನು ಸಲ್ಲಿಸುತ್ತಿರುವ ಡಾ.ಶ್ರೀಧರ ಭಟ್ಟ ಇವರ ಸರ್ವಾಂಗೀಣ ಕೊಡುಗೆಯನ್ನು ಪರಿಗಣಿಸಿ, ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯು ಇವರಿಗೆ ವೃತ್ತಿ ಪದೋನ್ನತಿಯನ್ನು ಮಂಜೂರು ಮಾಡಿದೆ.ಡಾ ಶ್ರೀಧರ ಭಟ್ಟ ಇವರು ಉಜಿರೆಯ ಪ್ರತಿಷ್ಠಿತ ಶ್ರೀಧರ್ಮಸ್ಥಳ […]Read More

ಕಾರ್ಯಕ್ರಮ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಉಜಿರೆ : ಆ15.”ವರ್ಷದ ಪ್ರತಿಯೊಂದು ದಿನವೂ ಸ್ವಾತಂತ್ರ್ಯ ದಿನ ಆಚರಿಸುವ ಹಾಗೆ ನಮ್ಮ ಜೀವನವನ್ನು ತ್ಯಾಗ ಮಾಡಿರುವವರನ್ನು ನಾವು ಪ್ರತಿದಿನವೂ ನೆನೆಯಲೇ ಬೇಕು. ದೇಶದ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು.” ಎಂದು ಉಜಿರೆ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಪಿ.ಹೆಚ್ ಪ್ರಕಾಶ್ ಶೆಟ್ಟಿ ಮೊಚ್ಚ ಇವರು ಹೇಳಿದರು. ಇವರು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಆಚರಿಸಿದ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಆಗಮಿಸಿ, ಧ್ವಜಾರೋಹಣ ನಡೆಸಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. […]Read More

ಸಮಸ್ಯೆ ಸ್ಥಳೀಯ

ಉಜಿರೆ: ವಿಪರೀತ ಮಳೆಗೆ ಹಾನಿಯಾದ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಹರೀಶ್

ಉಜಿರೆ : ಉಜಿರೆ ಗ್ರಾಮದ ಯಳಚಿತ್ತಾಯ ನಗರ ನಿವಾಸಿ ಜಗದೀಶ್ ಆಚಾರ್ಯ ಅವರ ಮನೆಗೆ ಇತ್ತೀಚೆಗೆ ಬಂದ ವಿಪರೀತ ಮಳೆಗೆ ಗುಡ್ಡ ಕುಸಿದು ವಾಸ್ತವ್ಯ ಮನೆಗೆ ಹಾನಿಯಾಗಿತ್ತು.ಹಾಗೂ ಲಕ್ಷ್ಮಣ ಇವರ ಮನೆಯ ಹಿಂಭಾಗ ಗುಡ್ಡ ಕುಸಿದು ಅಪಾಯದ ಮುನ್ಸೂಚನೆಯಲ್ಲಿದೆ.ಆಗಸ್ಟ್ 14 ರಂದು ಸ್ಥಳಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಿಲ್ಲಾ […]Read More

ಕಾರ್ಯಕ್ರಮ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಅಕೊಲೆಡ್ಸ್ ತರಗತಿಗಳಿಗೆ ಚಾಲನೆ

ಉಜಿರೆ : ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಇಂಗ್ಲಿಷ್ ಭಾಷಾ ಸಂವಹನ ವೃದ್ಧಿಯ ಬೆಳವಣಿಗೆಗಾಗಿ ಆಯೋಜಿಸಿರುವ ಅಕೊಲೆಡ್ಸ್ ತರಗತಿಯ ಉದ್ಘಾಟನ ಕಾರ್ಯಕ್ರಮ ನಡೆಯಿತು. 2024-25ನೇ ಶೈಕ್ಷಣಿಕ ಸಾಲಿನ ಶಾಲಾ ವಿದ್ಯಾರ್ಥಿಗಳಿಗೆ ಅಕೊಲೆಡ್ಸ್ ತರಗತಿಗಳನ್ನು ನಡೆಸಲಿರುವ ಮಂಗಳೂರಿನ ಅಕೊಲೆಡ್ಸ್ ಅಕಾಡೆಮಿಯ ಸಿ.ಇ.ಒ ಕೃಷ್ಣಪ್ರಸಾದ್ ಅಡಪ್ಪ ಇವರು ದೀಪ ಪ್ರಜ್ವಲಿಸುವ ಮೂಲಕ ತರಗತಿಗೆ ಚಾಲನೆ ನೀಡಿದರು. ವೇದಿಕೆಯಲ್ಲಿ ಮಂಗಳೂರಿನ ಅಕೊಲೆಡ್ಸ್ ಅಕಾಡೆಮಿಯ ಸಿ.ಇ.ಒ ಕೃಷ್ಣಪ್ರಸಾದ್ ಅಡಪ್ಪ ಹಾಗೂ ಅವರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ […]Read More

ಕಾರ್ಯಕ್ರಮ ಶಾಲಾ ಚಟುವಟಿಕೆ ಸ್ಥಳೀಯ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ಇಂಗ್ಲೇಂಡಿನ ಟೀಮ್ ಮಲ್ಟಿ ಅಕಾಡೆಮಿ

ಉಜಿರೆ : ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ಇಂಗ್ಲೇಂಡಿನ ಟೀಮ್ ಮಲ್ಟಿ ಅಕಾಡೆಮಿ ಸಂಸ್ಥೆಯ ಸಿ.ಇ.ಒ ಹಾಗೂ ಎಕ್ಸೆಕ್ಯುಟಿವ್ ಹೆಡ್ ಟೀಚರ್ ಆಗಿರುವ ಐಯನ್ ತೊಮಸ್ ಭೇಟಿ ನೀಡಿ ತಮ್ಮ ಮಂಗಳೂರು ಪ್ರವಾಸದ ಅನುಭವಗಳನ್ನು ಹಂಚಿಕೊಂಡರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ನೃತ್ಯಗಳಲ್ಲಿ ಒಂದಾದ ಭರತನಾಟ್ಯ, ತುಳುನಾಡ ಕಲೆಗಳಾದ ಯಕ್ಷಗಾನ, ಪಾಡ್ದನ, ತುಳು ಪದ್ಯ, ಕರಕುಶಲ ವಸ್ತುಗಳ ಪ್ರದರ್ಶನಗಳನ್ನು ವಿದ್ಯಾರ್ಥಿಗಳಿಂದ ಮಾಡಲಾಯಿತು. ಭೇಟಿಯ ಕಾರ್ಯಕ್ರಮದಲ್ಲಿ ಮಂಗಳೂರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯ […]Read More

ಕಾರ್ಯಕ್ರಮ ಸ್ಥಳೀಯ

ಉಜಿರೆ ಎಸ್. ಡಿ. ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಆಟಿಡೊಂಜಿ ದಿನ

ಉಜಿರೆ: ಆ10. ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಆಟಿಡೊಂಜಿ ದಿನದ ಸಂಭ್ರಮ ಇಂದು ಮನೆ ಮಾಡಿತ್ತು. ಶಾಲೆಯು ತೆಂಗಿನ ಗರಿಯಿಂದ ಮಾಡಿದ ವಿವಿಧ ಆಕೃತಿಯಿಂದ ಮದುವಣಗಿತ್ತಿಯಂತೆ ಶೃಂಗರಿಸಲ್ಪಟ್ಟಿತ್ತು. ಶಾಲೆಯ ಮೂಲೆ ಮೂಲೆಯಲ್ಲೂ ತುಳುನಾಡಿಗೆ ಸಂಬಂಧಪಟ್ಟಂತ ವಿವಿಧ ಭಕ್ಷ ಭೋಜ್ಯ, ಆಟಿಯಲ್ಲಿ ಆಡುವಂತಹ ವಿಶೇಷ ಆಟಗಳು ರಾರಾಜಿಸಿದವು. ಉಜಿರೆ ಎಸ್.ಡಿ.ಎಮ್ ಪದವಿ ಕಾಲೇಜಿನ ಉಪನ್ಯಾಸಕ ಡಾ.ದಿವಾ ಕೊಕ್ಕಡ ಕಾರ್ಯಕ್ರಮವನ್ನು ಆಟಿ ಕಳೆಂಜನನ್ನು ಗೌರವಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದ ಅವರು ತುಳುನಾಡಿನ ಕಲೆ,ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರ, ಆಹಾರ, […]Read More

error: Content is protected !!