• September 8, 2024

Tags :Belthangadi

ಕಾರ್ಯಕ್ರಮ

ನೊಂದ ಕುಟುಂಬಕ್ಕೆ ಬೆಳಕಾದ ಯುವಕೇಸರಿ ಕಣಿಯೂರು ತಂಡ

ಕಣಿಯೂರು: ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಯುವಕೇಸರಿ ಕಣಿಯೂರು ತಂಡದ ವತಿಯಿಂದ ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಕೊರಜ್ಜಂಡದಲ್ಲಿ ತೀರಾ ಬಡತನದಲ್ಲಿ ವಾಸ ಮಾಡುತ್ತಿರುವ ದಿ| ವಾಸಪ್ಪರವರ ಹೆಂಡತಿ ವಿನಯ ಎಂಬವರು ಅಸೌಖ್ಯದಿಂದ ಬಳಲುತ್ತಿದ್ದಾರೆ, ಈ ಕುಟುಂಬಕ್ಕೆಸಹಾಯ ಹಸ್ತ ನೀಡುವುದಾಗಿ ತೀರ್ಮಾನ ಮಾಡಿದಂತೆ ,ನೊಂದ ಕುಟುಂಬದ ಮನೆಯವರಿಗೆ ಅ.14 ರಂದು ಧನ ಸಹಾಯ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಕಣಿಯೂರು ಗ್ರಾಮ ಪಂಚಾಯತ್ ಸದಸ್ಯರು,ಸಂಘದ ಅಧ್ಯಕ್ಷರಾದ ಪ್ರವೀಣ್ ಗೌಡ ಅಲೆಕ್ಕಿ, ಸಂಘದ ಗೌರವಾಧ್ಯಕ್ಷರು […]Read More

ಜಿಲ್ಲೆ ಧಾರ್ಮಿಕ ಪ್ರತಿಭಟನೆ ಸ್ಥಳೀಯ

ಬೆಳ್ತಂಗಡಿ: ಜುಲೈ.19 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂಭಾಗ ಕರ್ನಾಟಕದಲ್ಲಿ ಹಿಂದೂ

ಬೆಳ್ತಂಗಡಿ: ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಜೈನ ಮುನಿಗಳ ಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳ ಹಿಂದೂ ರಾಷ್ಟ್ರ ಆಂದೋಲನವು ಜುಲೈ.19 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂಭಾಗ ಜರುಗಲಿದೆ. ದೇಶದಾದ್ಯಂತ ವಕ್ಫ್ ಬೋರ್ಡ್ ಕಾಯ್ದೆ ರದ್ದುಗೊಳಿಸಲು ಹಿಂದೂ ರಾಷ್ಟ್ರ ಜಾಗೃತಿ ಆಂದೋಲನದಲ್ಲಿ ಬೇಡಿಕೆ ಹಾಗೂ ಕರ್ನಾಟಕದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಹಿಂದೂಗಳ ರಕ್ಷಣೆಗೆ ಆಗ್ರಹ ನೀಡಲಿದೆ.Read More

ಜಿಲ್ಲೆ ಸ್ಥಳೀಯ

ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿಸಾನಿಕಂ ವರ್ಗಾವಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಪೃಥ್ವಿಸಾನಿಕಂ ರವರನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಕಂದಾಯ ಇಲಾಖೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹೊರಡಿಸಲಾಗಿತುವ ಆದೇಶದಲ್ಲಿ ವರ್ಗಾವಣೆಗೊಳಿಸಿ ಆದೇಶಗೊಳಿಸಲಾಗಿದೆ.Read More

ಜಿಲ್ಲೆ ಪ್ರತಿಭಟನೆ ಸ್ಥಳೀಯ

ಹಿಂದೂ ಧರ್ಮದ ಬಗ್ಗೆ ಜಾಲತಾಣಗಳಲ್ಲಿ ನಿಂದನೆ ಪೋಸ್ಟ್: ಆರೋಪಿಯನ್ನು ಬಂಧಿಸುವಂತೆ ವಿ.ಹಿಂ ಪ

ಬೆಳ್ತಂಗಡಿ: ಉಪವಲಯ ಅರಣ್ಯಾಧಿಕಾರಿ ಸಂಜೀವ ಎಂಬವರು ಭಜನೆ ಮತ್ತು ಭಜಕರ ಕುರಿತು ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ಬರುವಂತೆ ನಿಂದನೆಯ ಪೋಸ್ಟ್ ಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಹಿಂದುಗಳ ಭಾವನೆಗೆ ಧಕ್ಕೆ ತಂದಿರುವ ವಿಚಾರವಾಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಸಹ ಬಂಧನ ಮಾಡದೇ ಕೆಲಸದಿಂದ ವಜಾ ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂದು ವಿ.ಹಿಂ ಪ ಬಜರಂಗದಳ, ಬೆಳ್ತಂಗಡಿ ಪ್ರಖಂಡ ಇದರ ನೇತೃತ್ವದಲ್ಲಿ ಬೆಳ್ತಂಗಡಿ ಠಾಣೆಯ ಎದುರು ಪ್ರತಿಭಟನೆ ನಡೆಯಿತು. ಹಿಂದೂ ಧರ್ಮದ ಭಜನೆ ಮತ್ತು ಭಜಕರ ಬಗ್ಗೆ […]Read More

ಕಾರ್ಯಕ್ರಮ

ಬೆಳ್ತಂಗಡಿ: ಹಿಂದೂ ಜನಜಾಗೃತಿ ಸಮಿತಿಯು ಸ್ಥಾಪನೆಯಾಗಿ ದ್ವಿದಶಕ ಪೂರ್ತಿಯ ನಿಮಿತ್ತ, ಹಿಂದೂ ಸಂಘಟನಾ

ಬೆಳ್ತಂಗಡಿ:ಹಿಂದೂ ಜನಜಾಗೃತಿ ಸಮಿತಿಯು ಸ್ಥಾಪನೆಯಾಗಿ ದ್ವಿದಶಕ ಪೂರ್ತಿಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಲಾದ ಹಿಂದೂ ಸಂಘಟನಾ ಮೇಳವು ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿನಾಕಿ ಸಭಾಭವನದಲ್ಲಿ ಅಕ್ಟೋಬರ್ 15 ರಂದು ಜರುಗಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಚಂದ್ರ ಮೊಗೇರ ಮಾತನಾಡುತ್ತಾ ಕರ್ನಾಟಕದಲ್ಲಿ 32000 ದೇವಸ್ಥಾನ ಸರಕಾರದ ಅಧೀನದಲ್ಲಿದೆ. ಆದರೆ ಚರ್ಚ್ ಮಸೀದಿಗಳು ಸರಕಾರದ ನಿಯಂತ್ರಣದಲ್ಲಿ ಇಲ್ಲ. ನಮ್ಮ ದೇಶದ ಸಂವಿಧಾನದಲ್ಲಿ ಹಿಂದೂಗಳಿಗೆ ವಿರುದ್ಧವಾದ ಅನೇಕ ಕಾನೂನುಗಳಿವೆ ಧರ್ಮದ ಅಧಿಷ್ಠಾನದಿಂದ ನಡೆಯುವ ರಾಜ್ಯ ವ್ಯವಸ್ಥೆಯೇ […]Read More

ಕಾರ್ಯಕ್ರಮ

ಡಿ.ಕೆ.ಆರ್. ಡಿ.ಎಸ್ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಕ್ಯಾನ್ಸರ್ ಜನಜಾಗೃತಿ ಕಾರ್ಯಕ್ರಮ ಹಾಗೂ ಧನ

ಮುಂಡಾಜೆ: ಉತ್ತಮ ಜೀವನ ಶೈಲಿ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಹಾಗೂ ಕಾಲ ಕಾಲಕ್ಕೆ ಸರಿಯಾಗಿ ಸೂಕ್ತ ವೈದ್ಯರಿಂದ ತಪಾಸಣೆ ನಡೆಸಿದಾಗ ಕ್ಯಾನ್ಸರ್ ರೋಗವನ್ನು ಸಂಪೂರ್ಣವಾಗಿ ನಿವಾರಿಸಬಹುದು ಎಂದು ಮುಂಡಾಜೆ ಸಂತ ಮೇರಿಸ್ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಸೆಬಾಸ್ಟಿಯನ್ ಪುನ್ನತ್ತಾನತ್ ನುಡಿದರು. ಅವರು ಸೆ. 26 ರಂದು ಡಿ.ಕೆ.ಆರ್. ಡಿ.ಎಸ್ (ರಿ) ಬೆಳ್ತಂಗಡಿ ನೇತೃತ್ವದಲ್ಲಿ, ಕಾರಿತಾಸ್ ಇಂಡಿಯಾ ನವದೆಹಲಿ-ಸ್ಪರ್ಶ ಕಾರ್ಯಕ್ರಮ, ಗ್ರಾಮ ಪಂಚಾಯತ್ ಮುಂಡಾಜೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಡಾಜೆ, ಸಂತ ಮೇರಿಸ್ ಚರ್ಚ್ ಮುಂಡಾಜೆ, ಸ್ನೇಹಜ್ಯೋತಿ […]Read More

ಕಾರ್ಯಕ್ರಮ ಸ್ಥಳೀಯ

ಮಚ್ಚಿನ ಸ.ಉ.ಪ್ರಾ.ಶಾಲೆಯ ನೂತನ ಕಟ್ಟಡ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿದ ಶಾಸಕ ಹರೀಶ್ ಪೂಂಜ

ಮಚ್ಚಿನ : ಸರಕಾರಿ ಉನ್ನತೀಕರಿಸಿದ ಪ್ರಾ. ಶಾಲೆ ಮಚ್ಚಿನ ಇಲ್ಲಿಯ 16.5 ಲಕ್ಷ  ವೆಚ್ಚದ ನೂತನ  ಕಟ್ಟಡ  ಕಾಮಗಾರಿ ಶಿಲಾನ್ಯಾಸವನ್ನು ಸೆ.7 ರಂದು ಶಾಸಕ ಹರೀಶ್ ಪೂಂಜ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಾಜೆ, ಉಪಾಧ್ಯಕ್ಷರಾದ ಡೀಕಮ್ಮ, ಗ್ರಾ.ಪಂ ಸದಸ್ಯರಾದ ಚೇತನ್ , ಪ್ರಮೋದ್ ಕುಮಾರ್ , ಚಂದ್ರಶೇಖರ ಬಿ.ಎಸ್, ಜಯಶ್ರೀ , ರುಕ್ಮಣಿ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪರಮೇಶ್ವರ್, ಪದ್ಮನಾಭ ಸಾಲ್ಯಾನ್, ಚೆನ್ನಪ್ಪ ಪ್ರಭಾಕರ ಪ್ರಭು, ಸುಮ ಹಾಗೂ ಪೋಷಕರು […]Read More

ಕಾರ್ಯಕ್ರಮ ಸ್ಥಳೀಯ

ಬೆಳ್ತಂಗಡಿ ಅಂಗ ಸಂಸ್ಥೆಯ ವಾರ್ಷಿಕ ಮಹಾಸಭೆ

ಉಜಿರೆ: ಉಜಿರೆ ಶ್ರೀರಾಮಕೃಷ್ಣ ಸಭಾ ಮಂಟಪದಲ್ಲಿ ಕೂಟ ಮಹಾಜಗತ್ತು ಬೆಳ್ತಂಗಡಿ ಅಂಗ ಸಂಸ್ಥೆಯ 24ನೇ ವಾರ್ಷಿಕ ಮಹಾಸಭೆ ಆ.28 ರಂದು ಜರಗಿತು. ಬೆಳ್ತಂಗಡಿ ಅಂಗ ಸಂಸ್ಥೆಯ ಅಧ್ಯಕ್ಷರು ಮತ್ತು ಕೂಟ ಮಹಾ ಜಗತ್ತು ಕೇಂದ್ರ ಸಂಸ್ಥೆಯ ಕೋಶಾಧಿಕಾರಿಗಳಾದ ಬಿ ವಾಸುದೇವ ಸೋಮಯಾಜಿ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೂಟ ಮಹಾ ಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷರಾದ ಹೆಚ್ ಸತೀಶ್ ಹಂದೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೂಟ ಮಹಾ ಜಗತ್ತಿನ ಸದಸ್ಯರ ಸಂಖ್ಯೆ ಹೆಚ್ಚಳ ಮಾಡುವುದರಿಂದ ಸರ್ಕಾರದ ಸವಲತ್ತುಗಳನ್ನು […]Read More

ಸ್ಥಳೀಯ

ಮೊಗ್ರು: ಮಳೆಯಿಂದ ಹಾನಿಯಾದ ಮೊಗ್ರುವಿನ ಜನಾರ್ಧನ ಆಚಾರ್ಯ ಇವರ ಮನೆಗೆ ಭೇಟಿ ನೀಡಿದ

ಮೊಗ್ರು: ಜು24.ಕಳೆದ ಒಂದು ತಿಂಗಳಿನಿಂದ ಬೆಳ್ತಂಗಡಿ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭಾಗಶಃ ಹಾನಿಗೊಳಗಾದ ಬಂದಾರು ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ಮುರ ಜನಾರ್ಧನ ಆಚಾರ್ಯ ಇವರ ಮನೆಗೆ ಹಾನಿ ಆಗಿದ್ದು ಶಾಸಕ ಹರೀಶ್ ಪೂಂಜರವರು ಜು.24 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ವೈಯಕ್ತಿಕ ನೆರವನ್ನು ನೀಡಿ ಸರಕಾರದಿಂದ ಸಿಗುವ ಪರಿಹಾರವನ್ನು ಶೀಘ್ರದಲ್ಲಿ ಒದಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ ಕೋಟ್ಯಾನ್ ,ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, […]Read More

ನಿಧನ

ಬೆಳ್ತಂಗಡಿ ಶ್ರೀ ಗುರುದೇವ ಪದವಿ ಕಾಲೇಜಿನ ಉಪನ್ಯಾಸಕಿ ಅಸೌಖ್ಯದಿಂದ ನಿಧನ

ಬೆಳ್ತಂಗಡಿ: ಇಲ್ಲಿನ ಶ್ರೀ ಗುರುದೇವ ಪದವಿ ಕಾಲೇಜಿನ ಉಪನ್ಯಾಸಕಿ ಮಲ್ಲಿಕಾ (40 ವರ್ಷ) ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ . ಇಂದು ಬೆಳಗ್ಗೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಅವರನ್ನು ಬೆಳ್ತಂಗಡಿಯ ಆಸ್ಪತ್ರೆಯಿಂದ ಕ್ಕೆ ಕರೆದೊಯ್ಯಲಾಗಿತ್ತು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಆದರೆ ಚಿಕಿತ್ಸೆ ಸಲ್ಲಿಸದೆ ಮಲ್ಲಿಕಾ ಮೃತಪಟ್ಟಿದ್ದಾರೆ. ಇವರು ಬೆಳ್ತಂಗಡಿ ಶ್ರೀ ಗುರುದೇವ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಪತಿ, ತಂದೆ, ತಾಯಿ ಹಾಗೂ ಬಂಧು ವರ್ಗದವರನ್ನ ಅಗಳಿದ್ದಾರೆ.Read More

error: Content is protected !!