• October 30, 2024

ದೂರದರ್ಶನದ “ಬಿ” ಗ್ರೇಡ್ ಕಲಾವಿದೆಯಾಗಿ ಮೂಡುಬಿದಿರೆಯ ಅನನ್ಯ ರಂಜನಿ ಆಯ್ಕೆ

 ದೂರದರ್ಶನದ “ಬಿ” ಗ್ರೇಡ್ ಕಲಾವಿದೆಯಾಗಿ ಮೂಡುಬಿದಿರೆಯ ಅನನ್ಯ ರಂಜನಿ ಆಯ್ಕೆ

 


ಮೂಡುಬಿದಿರೆ: -ದೂರದರ್ಶನ “ಬಿ” ಗ್ರೇಡ್ ಕಲಾವಿದೆಯಾಗಿ
ಮೂಡುಬಿದಿರೆಯ ಶ್ರೀ ಮಹಾವೀರ ಹಾಗೂ ಶ್ರೀಮತಿ ಆರತಿ ರವರ ಪುತ್ರಿ ಉದಯೋನ್ಮುಖ ಭರತನಾಟ್ಯ ಕಲಾವಿದೆ ಕು. ಅನನ್ಯ ರಂಜನಿ ಆಯ್ಕೆ ಯಾಗಿದ್ದಾರೆ.


ಈಕೆ ಸಪ್ತವರ್ಣದ ರಶ್ಮಿತ ಲಾಸ್ಯ ಹಾಗೂ ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್ , ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯೆಯಾಗಿ, ಭರತನಾಟ್ಯದಲ್ಲಿ ಸೀನಿಯರ್ ಗ್ರೇಡ್ ಪಡೆದಿದ್ದಾರೆ.


ಅನನ್ಯ ರಂಜನಿ ಪ್ರಸ್ತುತ ವಿದ್ವತ್ ಪೂರ್ವಪರೀಕ್ಷೆಯ ತಯಾರಿ ಮಾಡುತ್ತಿದ್ದು,
ಉಜಿರೆಯ ಎಸ್. ಡಿ ಎಂ. ಕಾಲೇಜಿನಲ್ಲಿ ಅಂತಿಮ ವಿಜ್ಞಾನ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!