• October 13, 2024

“ಮೋದಿಜಿಯವರ ಸಮರ್ಥ ಆಡಳಿತದ 8ನೇ ವರ್ಷದ ಸಂಭ್ರಮಾಚರಣೆ @ ಬೆಳ್ತಂಗಡಿ” ಕಿರುಹೊತ್ತಿಗೆ ಯನ್ನು ಬಿಜೆಪಿ ಸಚಿವರಿಗೆ ನೀಡಿದ ಶಾಸಕರಾದ ಹರೀಶ್ ಪೂಂಜ

 “ಮೋದಿಜಿಯವರ ಸಮರ್ಥ ಆಡಳಿತದ 8ನೇ ವರ್ಷದ ಸಂಭ್ರಮಾಚರಣೆ @ ಬೆಳ್ತಂಗಡಿ” ಕಿರುಹೊತ್ತಿಗೆ ಯನ್ನು ಬಿಜೆಪಿ ಸಚಿವರಿಗೆ ನೀಡಿದ ಶಾಸಕರಾದ ಹರೀಶ್ ಪೂಂಜ

 

ಬೆಳ್ತಂಗಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿ 8 ವರ್ಷಗಳ ಸಮರ್ಥ ಆಡಳಿತವನ್ನು ಪೂರೈಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ, ಬೆಳ್ತಂಗಡಿ ಮಂಡಲದಲ್ಲಿ ನಡೆದ ‘ಸೇವೆ’ ‘ಸುಶಾಸನ’ ‘ ಬಡವರ ಕಲ್ಯಾಣ’ ಎಂಬ ವಿಶಿಷ್ಟ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಸಾಧಕರ ಸಮಾವೇಶದ ಮಾಹಿತಿಯನ್ನು ಒಳಗೊಂಡ “ಮೋದಿಜಿಯವರ ಸಮರ್ಥ ಆಡಳಿತದ 8ನೇ ವರ್ಷದ ಸಂಭ್ರಮಾಚರಣೆ @ ಬೆಳ್ತಂಗಡಿ” ಎನ್ನುವ ಕಿರು ಹೊತ್ತಗೆಯನ್ನು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ್ ಜೀ ಅವರನ್ನು ಶಾಸಕರಾದ ಹರೀಶ್ ಪೂಂಜ ಭೇಟಿಯಾಗಿ ನೀಡಿದರು.

ಜೊತೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಶಿಯವರಿಗೆ, ಬಿಜೆಪಿ ರಾಜ್ಯ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರಿಗೆ, ಕೇಂದ್ರ ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವರಾದ ಅನುರಾಗ್ ಠಾಕೂರ್ ,ಕೇಂದ್ರ ಕೃಷಿ ಮತ್ತು ತೋಟಗಾರಿಕೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ , ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಭಾ ಅವರಿಗೆ ” ಮೋದಿಜಿಯವರ ಸಮರ್ಥ ಆಡಳಿತದ 8ನೇ ವರ್ಷದ ಸಂಭ್ರಮಾಚರಣೆ @ ಬೆಳ್ತಂಗಡಿ” ಕಾರ್ಯಕ್ರಮದ ಹೊತ್ತಗೆಯ ಪ್ರತಿಗಳನ್ನು ನೀಡಲಾಯಿತು.


ಈ ಸಂಂಂಂಂದರ್ಭದಲ್ಲಿದರ್ದರದ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷರಾದ ಶ್ರೀ ಜಯಂತ್ ಕೋಟ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗಣೇಶ್ ಗೌಡ ನವೂರ್, ಶ್ರೀ ಶ್ರೀನಿವಾಸ ರಾವ್ ಧರ್ಮಸ್ಥಳ ಜೊತೆಗಿದ್ದರು.

Related post

Leave a Reply

Your email address will not be published. Required fields are marked *

error: Content is protected !!