ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಮಹಿಳಾ ವಿಭಾಗದಿಂದ “ಕ್ಷೇಮ” ಆರೋಗ್ಯ ಮಾಹಿತಿ ಕಾರ್ಯಕ್ರಮ
ಕುಪ್ಪೆಟ್ಟಿ: ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯ ಶ್ರೀ ಗಣೇಶ ಭಜನಾ ಮಂದಿರದಲ್ಲಿ ಮಹಿಳೆಯರ ಆರೋಗ್ಯ ಮಾಹಿತಿ ಕಾರ್ಯಕ್ರಮ ಜ.29 ರಂದು ಹಮ್ಮಿಕೊಳ್ಳಲಾಯಿತು.
ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜೆಸಿಐನ ವಲಯ ತರಬೇತುದಾರರಾದ ಜೇಸಿ ಸುಭಾಷಿಣಿ ಮಹಿಳೆಯರ ಆರೋಗ್ಯ ಕಾಪಾಡುವ ಕುರಿತು ಮಾಹಿತಿ ನೀಡಿದರು.
ಊರಿನ ಮಹಿಳೆಯರಿಗೆ ಹಾಗೂ ಹದಿಹರೆಯದ ಮಕ್ಕಳಿಗೆ ಆರೋಗ್ಯ ಕಿಟ್ ವಿತರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಲೇಡಿ ಜೇಸಿ ಸಂಯೋಜಕಿ ಜೇಸಿ ಮಮಿತಾ ಸುಧೀರ್ ವಹಿಸಿದ್ದರು, ಮುಖ್ಯ ಅತಿಥಿಯಾಗಿ ಸುಖಲತಾ ಆರ್ ರೈ ಉರುವಾಲುಪದವು ಪಾಲ್ಗೊಂಡಿದ್ದರು, ಜೆಸಿಐ ಬೆಳ್ತಂಗಡಿಯ ಅಧ್ಯಕ್ಷರಾದ ಜೇಸಿ ಶಂಕರ್ ರಾವ್, ನಿಕಟ ಪೂರ್ವ ಅಧ್ಯಕ್ಷರಾದ ಜೇಸಿ ಪ್ರಸಾದ್ ಬಿ. ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ವೇದಿಕೆ ಆಹ್ವಾನವನ್ನು ಘಟಕದ ಉಪಾಧ್ಯಕ್ಷೆ ಜೇಸಿ ಹೇಮಾವತಿ ನಡೆಸಿಕೊಟ್ಟರು,
ಜೆಸಿ ವಾಣಿಯನ್ನು ಜೇಸಿ ಸೃಜನ್ ಆರ್ ರೈ ವಾಚಿಸಿದರು,
ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಜೇಸಿ ಘಟಕದ ಉಪಾಧ್ಯಕ್ಷೇ ಆಶಾಲತಾ ಪ್ರಶಾಂತ್ ವಾಚಿಸಿದರು. ಘಟಕದ ಕಾರ್ಯದರ್ಶಿ ಸುಧೀರ್ ಕೆ. ಎನ್ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಘಟಕದ ಪೂರ್ವಧ್ಯಕ್ಷರಾದ ಜೇಸಿ ನಾರಾಯಣ ಶೆಟ್ಟಿ,ಘಟಕದ ಉಪಾಧ್ಯಕ್ಷ ಪ್ರೀತಮ್ ಶೆಟ್ಟಿ,ಸದಸ್ಯರುಗಳಾದ ಶೈಲೇಶ್, ಸೃಷ್ಟಿ ಆರ್ ರೈ ಭಾಗವಹಿಸಿದ್ದರು.