• December 3, 2024

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ : ಮತಾಂತರಕ್ಕೆ ಪ್ರೋತ್ಸಾಹ ನೀಡುವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರದ ಪ್ರೋತ್ಸಾಹ ಯೋಜನೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು! – ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ

 ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ : ಮತಾಂತರಕ್ಕೆ ಪ್ರೋತ್ಸಾಹ ನೀಡುವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರದ ಪ್ರೋತ್ಸಾಹ ಯೋಜನೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು! – ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ

 

ಕೇಂದ್ರ ಸರಕಾರವು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಮೀಸಲಾಗಿರುವ 200 ಯೋಜನೆಗಳನ್ನು ನಡೆಸುತ್ತದೆ. ಇದಲ್ಲದೆ, ಪ್ರತಿಯೊಂದು ರಾಜ್ಯದಲ್ಲಿರುವ ಯೋಜನೆಗಳು ಸೇರಿದರೆ, ಈ ಯೋಜನೆಗಳ ಸಂಖ್ಯೆ 500 ನ್ನು ಮೀರುತ್ತದೆ. ಇದನ್ನು ಹೊರತುಪಡಿಸಿ ಕೇವಲ ಅಲ್ಪಸಂಖ್ಯಾತರಿಗಾಗಿ ಇನ್ನೂ ಕೆಲವು ಯೋಜನೆಗಳಿವೆ. ಈ ಎಲ್ಲಾ ಯೋಜನೆಗಳನ್ನು ಹಿಂದೂಗಳ ತೆರಿಗೆಯ ಮೂಲಕ ನಡೆಸಲಾಗುತ್ತವೆ. ಆದ್ದರಿಂದ, ಅಲ್ಪಸಂಖ್ಯಾತರಿಗಾಗಿ ಇರುವ ಈ ಯೋಜನೆ ಎಂದರೆ, ಒಂದು ರೀತಿಯಲ್ಲಿ ಶ್ರೀಮಂತ ಹಿಂದೂಗಳ ಹಣದಿಂದ ಬಡ ಹಿಂದೂಗಳ ಮತಾಂತರವೇ ಆಗಿದೆ. ಆದ್ದರಿಂದ ಅಲ್ಪಸಂಖ್ಯಾತರ ಯೋಜನೆಗಳಿಂದ ಮತಾಂತರಕ್ಕೆ ಪ್ರೋತ್ಸಾಹ ಸಿಗುತ್ತಿರುವುದರಿಂದ ಈ ಯೋಜನೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಒತ್ತಾಯಿಸಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ` ಹಿಂದುತ್ವದ ರಕ್ಷಣೆ’ ಈ ವಿಷಯದ ಕುರಿತು ಮಾತನಾಡುತ್ತಿದ್ದರು.

ಹಿಂದೂಗಳು ತಮ್ಮ ಮೇಲಾಗುವ ಯಾವುದೇ ದಾಳಿಗೆ ಪ್ರತ್ಯುತ್ತರ ನೀಡುವ ಸಿದ್ಧತೆಯಲ್ಲಿರಬೇಕು! – ಸುರೇಶ ಚವ್ಹಾಣಕೆ, ಮುಖ್ಯ ಸಂಪಾದಕರು, ‘ಸುದರ್ಶನ ನ್ಯೂಸ್’

ಹೊಸ ಕೇಂದ್ರ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಕಳೆದ 5 ವರ್ಷಗಳಿಗಿಂತ ಹೆಚ್ಚು ಗೋಹತ್ಯೆಗಳು ನಡೆದಿವೆ. 2024ರ ಲೋಕಸಭಾ ಚುನಾವಣೆಯ ತೀರ್ಪಿನ ನಂತರ ಹಿಂದೂಗಳ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿವೆ. ಇದನ್ನು ನಾವು ಸಮಯವಿರುವಾಗಲೇ ಪ್ರತಿಕ್ರಿಯಿಸದಿದ್ದರೆ, ಮುಂದಿನ ಕಾಲದಲ್ಲಿ ಇದನ್ನು ಎದುರಿಸಲು ಹಿಂದೂಗಳಿಗೆ ಕಠಿಣವಾಗಲಿದೆ . ಹಿಂದೂಗಳು ಮತದಾನ ಮಾಡಿದ್ದರಿಂದಲೇ ಭಾಜಪದ 240 ಸಂಸದರು ಚುನಾಯಿತಗೊಂಡಿದ್ದಾರೆ. ಆದ್ದರಿಂದ ಭಾಜಪ ಹಿಂದೂಗಳ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸುವುದು ಅಗತ್ಯವಾಗಿದೆ ಎಂದು ‘ಸುದರ್ಶನ ನ್ಯೂಸ್’ ಮುಖ್ಯ ಸಂಪಾದಕ ಶ್ರೀ. ಸುರೇಶ ಚವ್ಹಾಣಕೆ ಅವರು ಪ್ರತಿಪಾದಿಸಿದರು.


ಈ ಸಂದರ್ಭದಲ್ಲಿ `ಅಯೋಧ್ಯಾ ಫೌಂಡೇಶನ’ ನ ಸಂಸ್ಥಾಪಕಿ ಸೌ. ಮೀನಾಕ್ಷಿ ಶರಣ ಮಾತನಾಡಿ, ಹಿಂದೂಗಳಲ್ಲಿ. “ತಮ್ಮ ಸಂಸ್ಕೃತಿಯ ಬಗ್ಗೆ ಶ್ರದ್ಧೆ ಹೆಚ್ಚಾಗಬೇಕು ಎಂದು ನಾವು ದೇವಸ್ಥಾನಗಳಲ್ಲಿ ದೀಪ ಬೆಳಗಿಸುವ ಯೋಜನೆಯನ್ನು ಪ್ರಾರಂಭಿಸಿದ್ದೇವೆ.. ನಿರ್ಲಕ್ಷ್ಯಕ್ಕೆ ಒಳಗಾದ ದೇವಸ್ಥಾನಗಳಲ್ಲಿ ದೇವರ ಪೂಜೆ ಮಾಡಿ ದೀಪ ಬೆಳಗಿಸುತ್ತೇವೆ. ನಾವು ಹಿಮಾಚಲ ರಾಜ್ಯದಿಂದ ಈ ಯೋಜನೆಯನ್ನು ಪ್ರಾರಂಭಿಸಿದ್ದೇವೆ’’ ಎಂದರು.

ಪಾಕಿಸ್ತಾನದಂತೆ ಮಣಿಪುರವನ್ನು ಭಾರತದಿಂದ ಪ್ರತ್ಯೇಕಿಸಲು ಮಿಶನರಿಗಳ ಷಡ್ಯಂತ್ರ! – ಪ್ರಿಯಾನಂದ ಶರ್ಮಾ, ಮಣಿಪುರ ಧರ್ಮರಕ್ಷಕ ಸಮಿತಿ, ಮಣಿಪುರ

ಮಣಿಪುರದಲ್ಲಿ ನಡೆದ ಹಿಂಸಾಚಾರದ ಹಿಂದೆ ಪಾಶ್ಚಿಮಾತ್ಯ ದೇಶಗಳ ಕೈವಾಡವಿದೆ. ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳು ಸೇರಿ, ಹಾಗೆಯೇ ಮಣಿಪುರವನ್ನು ವಿಭಜಿಸಿ ಒಂದು ಹೊಸ ಸ್ವತಂತ್ರ ಕುಕಿ ದೇಶವನ್ನು ರಚಿಸುವುದು ಪಾಶ್ಚಿಮಾತ್ಯ ದೇಶ ಮತ್ತು ಅವರೊಂದಿಗೆ ಸೇರ್ಪಡೆಯಾಗಿರುವ ಮಿಶನರಿಗಳ ಪಿತೂರಿಯಾಗಿದೆ. ಮಣಿಪುರದಲ್ಲಿ 1961 ರ ಜನಗಣತಿಯ ಪ್ರಕಾರ, ಪರಿಶಿಷ್ಟ ಪಂಗಡಗಳಲ್ಲಿ, ಯಾವುದೇ ಕುಕಿ ಪಂಗಡಗಳ ಹೆಸರೂ ಇರಲಿಲ್ಲ; ಆದರೆ ಇಂದು ಅವರು ಸ್ವತಂತ್ರ ದೇಶಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಬಾಂಗ್ಲಾದೇಶಿಗಳು ಮತ್ತು ಮ್ಯಾನ್ಮಾರನ ರೋಹಿಂಗ್ಯಾ ಮುಸ್ಲಿಮರು ದೊಡ್ಡ ಪ್ರಮಾಣದಲ್ಲಿ ಮಣಿಪುರಕ್ಕೆ ನುಸುಳಿದ್ದಾರೆ. ಅವರಿಗೆ ಆಧಾರ್ ಕಾರ್ಡ್ ಮತ್ತು ವೋಟಿಂಗ್ ಕಾರ್ಡ್ ಸಹಜವಾಗಿ ಸಿಗುತ್ತದೆ. ಗಡಿ ಭದ್ರತೆಯ ಕೊರತೆಯಿಂದ ಈಶಾನ್ಯ ಭಾರತದಲ್ಲಿ ಒಳನುಸುಳುವಿಕೆ ಹೆಚ್ಚುತ್ತಿದೆ. ಇದರಡೆಗೆ ಸಮಯವಿರುವಾಗಲೇ ಗಮನ ಹರಿಸದಿದ್ದರೆ, ಈಶಾನ್ಯ ಭಾರತಕ್ಕೆ ಈ ಸುದ್ದಿ ಹರಡಲು ಸಮಯ ಹಿಡಿಯುವುದಿಲ್ಲ ಎಂದು ಮಣಿಪುರದ ‘ಮಣಿಪುರ ಧರ್ಮರಕ್ಷಕ ಸಮಿತಿ’ ಸದಸ್ಯ ಶ್ರೀ. ಪ್ರಿಯಾನಂದ ಶರ್ಮಾ ಇವರು ಪ್ರತಿಪಾದಿಸಿದರು

Related post

Leave a Reply

Your email address will not be published. Required fields are marked *

error: Content is protected !!