• November 22, 2024

ತುಳುನಾಡಿನಲ್ಲಿ ಮಣ್ಣಿನ ಜೊತೆಯೇ ನಮ್ಮ ಸಂಸ್ಕೃತಿ ಮೇಳೈಸಿದೆ; ಬಿ.ಕೆ ಧನಂಜಯ ರಾವ್:ಬಲಿಪ ರೆಸಾರ್ಟ್ ವತಿಯಿಂದ ಕೆಸರ್ದ ಗೊಬ್ಬು ಗ್ರಾಮೀಣ ಕ್ರೀಡೆ

 ತುಳುನಾಡಿನಲ್ಲಿ ಮಣ್ಣಿನ ಜೊತೆಯೇ ನಮ್ಮ ಸಂಸ್ಕೃತಿ ಮೇಳೈಸಿದೆ; ಬಿ.ಕೆ ಧನಂಜಯ ರಾವ್:ಬಲಿಪ ರೆಸಾರ್ಟ್ ವತಿಯಿಂದ ಕೆಸರ್ದ ಗೊಬ್ಬು ಗ್ರಾಮೀಣ ಕ್ರೀಡೆ

 

ಬೆಳ್ತಂಗಡಿ; ವಿಶಿಷ್ಟ ಪರಂಪರೆಯುಳ್ಳ ಈ ನಮ್ಮ ತುಳುನಾಡಿನಲ್ಲಿ ನಮ್ಮ ಸಂಸ್ಕೃತಿಯು ಕೃಷಿ ಸಂಸ್ಕೃತಿಯ ಜೊತೆಗೆ ಬೆಸೆದುಕೊಂಡಿದೆ. ಇಲ್ಲಿನ ಆಚರಣೆಗಳು, ಆರಾಧನಾ ಪರಂಪರೆ ಈ‌ ಮಣ್ಣಿನ ವಿಶಿಷ್ಟ ಸೊಬಗು ಎಂದು ಹಿರಿಯ ನ್ಯಾಯವಾದಿ, ಧಾರ್ಮಿಕ ಮುಂದಾಳು ಬಿ.ಕೆ ಧನಂಜಯ ರಾವ್ ಹೇಳಿದರು.


ಸನ್‌ರಾಕ್ ಬಲಿಪ ರೆಸಾರ್ಟ್ ಇದರ ವತಿಯಿಂದ ಕೆಳಗಿನ ಮಂಜೊಟ್ಟಿ ಯಶೋಧರ ದೇವಾಡಿಗರ ಗದ್ದೆಯಲ್ಲಿ ನಡೆದ ಕೆಸರ್ದ ಗೊಬ್ಬು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ಲಯನ್ಸ್ ಕ್ಲಬ್ ಬೆಳ್ತಂಗಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ನಡ ಕನ್ಯಾಡಿ, ರಿಕ್ಷಾ ಚಾಲಕರ ಮಾಲಕರ ಸಂಘ ನಡ, ಸುರ್ಯ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ನಡ ಕನ್ಯಾಡಿ, ಜನಸ್ನೇಹಿ ಸಂಘ ಸುರ್ಯ, ಹಾಲು ಉತ್ಪಾದಕರ ಸಹಕಾರ ಸಂಘ ನಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನಡ ಕನ್ಯಾಡಿ, ಶೌರ್ಯ ವಿಪತ್ತು ಘಟಕ ನಡ ಕನ್ಯಾಡಿ, ಶ್ರೀ ಗೋಪಾಲಕೃಷ್ಣ ಸೇವಾ ಸಮಿತಿ ನಾವೂರು, ಪ್ರಾಥಮಿಕ ಆರೋಗ್ಯ ಉಪ ಕೇಂದ್ರ ನಡ ಕನ್ಯಾಡಿ, ಚಂದ್ಕೂರು ಶ್ರೀ‌ ದುರ್ಗಾ ಪರಮೇಶ್ವರೀ ಭಜನಾ ಮಂಡಳಿ ನಡ ಲಾಯಿಲ, ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ ನಡ, ಶ್ರೀ ಸದಾಶಿವೇಶ್ವರ ಭಜನಾ ಮಂಡಳಿ ಕನ್ಯಾಡಿ ನಡ ಇವರು ಸಹಯೋಗ ನೀಡಿದರು.


ಉದ್ಘಾಟನಾ ಸಮಾರಂಭದಲ್ಲಿ ಬಳಂಜ ಮಸ್ಜಿದ್ ಧರ್ಮಗುರು ಝಮೀರ್ ಸ‌ಅದಿ ವಲ್ ಫಾಝಿಲ್, ಮಂಜೊಟ್ಟಿ ಚರ್ಚ್ ನ ಧರ್ಮಗುರು ರೆ.ಫಾ ಪ್ರವೀಣ್ ಡಿಸೋಝ, ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಸ್ಟಾರ್ ಲೈನ್ ಆಂಗ್ಲ ಮಾದ್ಯಮ ಶಾಲೆಯ ಮುಖ್ಯಸ್ಥ ಸಯ್ಯಿದ್ ಹಬೀಬ್ ಸಾಹೇಬ್ ನಡ, ಗ್ರಾ. ಯೋ ತಾಲೂಕು ಯೋಜನಾಧಿಕಾರಿ ಸುರೇಂದ್ರ ಆರೋಗ್ಯ ಕ್ಲಿನಿಕ್‌ನ ಡಾ.ಪ್ರದೀಪ್ ನಾವೂರು, ಇವರು ಶುಭ ಹಾರೈಸಿದರು. ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ ಶಶಿಕಿರಣ್ ಜೈನ್, ಸಂಸೆ ಎಸ್.ಡಿ.ಎಂ ಐಟಿಐ ಪ್ರಾದ್ಯಾಪಕ ಸಿದ್ದಾರ್ಥ್, ಮಂಗಳೂರಿನ ಟ್ರಕ್ಕಿಂಗ್ ಸಂಸ್ಥೆಯ ಶಿವಕುಮಾರ್, ಗದ್ದೆಯ ಮಾಲಕ ಯಶೋಧರ ದೇವಾಡಿಗ, ಸನ್ ರಾಕ್ ಮಾಲಿಕ‌ ಡೆನ್ನಿಸ್ ವಾಲ್ಟರ್ ಸಿಕ್ವೇರ ಭಾಗಿಯಾಗಿದ್ದರು. ಅಧ್ಯಕ್ಷತೆ ವಹಿಸಿದ್ದ ಬಲಿಪ ರೆಸಾರ್ಟ್ ಮಾಲಿಕ, ನೋಟರಿ‌ ನ್ಯಾಯವಾದಿ‌ ಮುರಳಿ ಬಲಿಪ ಮಾತನಾಡಿ, ಸ್ಥಳೀಯರ‌ ಜೊತೆ ಸೇರಿಕೊಂಡು ಸ್ಥಳೀಯ ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಬಡವರಿಗೆ ಮತ್ತು, ವಿದ್ಯಾರ್ಥಿಗಳಿಗೆ ನೆರವು ನೀಡುವ ಮಹತ್ ಉದ್ದೇಶ ಇದರ ಹಿಂದೆ ಅಡಗಿದೆ ಎಂದರು.


ಇಡೀ‌ ದಿನ ವಿವಿಧ ವಯೋಮಾನಗಳಲ್ಲಿ ಸ್ಪರ್ಧೆ ನಡೆಯಿತು. ತುಳುನಾಡ ಶೈಲಿಯ ಊಟೋಪಚಾರ ವ್ಯವಸ್ಥೆ ಗೊಳಿಸಲಾಗಿತ್ತು. ವಸಂತ ಶೆಟ್ಟಿ ಶ್ತದ್ಧಾ ಸ್ವಾಗತಿಸಿದರು. ಅಚ್ಚು ಮುಂಡಾಜೆ ನಿರೂಪಿಸಿದರು. ಸುರಕ್ಷಾ ಕನ್ಮಾಜೆ ಪ್ರಾರ್ಥನೆ ಹಾಡಿದರು. ಮಾಜಿ ಸೈನಿಕ ಹರೀಶ್ ರೈ ಧನ್ಯವಾದವಿತ್ತರು.


Related post

Leave a Reply

Your email address will not be published. Required fields are marked *

error: Content is protected !!