• October 16, 2024

ಮೊಗ್ರು: ಸ.ಕಿ.ಪ್ರಾ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

 ಮೊಗ್ರು: ಸ.ಕಿ.ಪ್ರಾ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

 


ಮೊಗ್ರು :ಆಗಸ್ಟ್ 14, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯದ ಮೊಗ್ರು ಒಕ್ಕೂಟ ದ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಇಲ್ಲಿ ಸ್ವಾತಂತ್ರೋತ್ಸವದ ಪ್ರಯುಕ್ತ ಸ್ವಚ್ಛತಾ ಶ್ರಮದಾನ ವನ್ನು ನಡೆಸಲಾಯಿತು.

ಶಾಲೆ ಯ ಧ್ವಜ ಕಟ್ಟೆಯಾ ಸುತ್ತ ಸ್ವಚ್ಚಗೊಳಿಸಲಾಯಿತು. ಮತ್ತು ಶಾಲೆ ಯ ಸುತ್ತಲೂ ಗಿಡ ಗಂಟಿಗಳನ್ನು ತೆಗೆದು ಸ್ವಚ್ಛ ಗೊಳಿಸಲಾಯಿತು. ಶಾಲಾ ತೆಂಗಿನ ಗಿಡಗಳಿಗೆ ಗೊಬ್ಬರ ಮತ್ತು ಸೊಪ್ಪು ಹಾಕಲಾಯಿತು.

ಈ ಸ್ವಚ್ಛತಾ ಕಾರ್ಯದಲ್ಲಿ ಮೊಗ್ರು ಒಕ್ಕೂಟ ದ ಅಧ್ಯಕ್ಷರಾದ ಗಂಗಾಧರ ಪೂಜಾರಿ, ಶಾಲೆ ಯ ಎಸ್. ಡಿ.ಎಮ್ ಅಧ್ಯಕ್ಷರಾದ ಶೀನಪ್ಪ ಗೌಡ, ಸೇವಾಪ್ರತಿನಿಧಿ ಶ್ರೀಮತಿ ಚಂದ್ರಕಲಾಹಾಗೂ ಶಾಲೆಯ ಪೋಷಕರು ಹಾಗೂ ಒಕ್ಕೂಟದ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದರು. ಶಾಲೆ ಯ ಮುಖ್ಯ ಗುರುಗಳಾದ ಮಾಧವ ರವರು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

Related post

Leave a Reply

Your email address will not be published. Required fields are marked *

error: Content is protected !!