ಶಾಸಕ ಹರೀಶ್ ಪೂಂಜ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದ ರಕ್ಷಿತ್ ಶಿವರಾಂ: ಆರೋಪಕ್ಕೆ ಪ್ರತ್ಯುತ್ತರ ನೀಡಿ ಮಾರಿಗುಡಿಯಲ್ಲಿ ಆಣೆ ಪ್ರಮಾಣ ಮಾಡಿದ ಹರೀಶ್ ಪೂಂಜ
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆರೋಪಕ್ಕೆ ಹರೀಶ್ ಪೂಂಜ ಸ್ಪಷ್ಟನೆ ನೀಡಿದ್ದಲ್ಲದೆ ಮಾರಿಗುಡಿಯಲ್ಲಿ ಪ್ರಮಾಣ ಮಾಡುತ್ತೇನೆ ಎಂದು ಹೇಳಿದ್ದು ಇಂದು ಮಾರಿಗುಡಿಗೆ ಭೇಟಿ ನೀಡಿ ಶಾಸಕ ಹರೀಶ್ ಪೂಂಜ ಪ್ರಮಾಣ ಮಾಡಿದ್ದಾರೆ.
ನಾನು ಒಂದು ರೂಪಾಯಿಯು ಮುಟ್ಟಿಲ್ಲ. ಯಾವುದೇ ಭ್ರಷ್ಟಾಚಾರ ಮಾಡಿಲ್ಲ ನನ್ನ ಮೇಲೆ ಆರೋಪಿಸಿದ ರಕ್ಷಿತ್ ಶಿವರಾಂ ಹಾಗೂ ಆರೋಪಿಸಿದ ಎಲ್ಲರನ್ನೂ ಆ ಮಾರಿಗುಡಿ ಮಹಾದೇವಿ ಶಿಕ್ಷಿಸಲಿ ಒಂದು ವೇಳೆ ನಾನು ತಪ್ಪು ಮಾಡಿದ್ದರೆ ನನ್ನನ್ನು ಶಿಕ್ಷಿಸಲಿ ಎಂದು ದೇವಿಗೆ ಪ್ರಾರ್ಥನೆ ಮಾಡಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ, ಜಯಾನಂದ ಗೌಡ, ಪ್ರಶಾಂತ್ ಪಾರೆಂಕಿ ಮೊದಲಾದವರು ಜೊತೆಗಿದ್ದರು