ಜಿಲ್ಲೆಯಾದ್ಯಂತ ನೂರಕ್ಕಿಂತಲೂ ಹೆಚ್ಚು ಶಾಲಾ ಕಾಲೇಜುಗಳಿಗೆ ಮನವಿ ನೀಡುವ ಮುಖೇನ ರಾಷ್ಟ್ರಧ್ವಜದ ಅಪಮಾನವನ್ನು ತಡೆಗಟ್ಟಲು ಅಭಿಯಾನ
ಸ್ವಾತಂತ್ರ್ಯ ದಿನದಂದಾಗುವ ರಾಷ್ಟ್ರಧ್ವಜ ಅಪಮಾನವನ್ನು ತಡೆಗಟ್ಟಲು ಮತ್ತು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಜಾಗೃತಿ ಮಾಡುವ ಕುರಿತು ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿಯ ಹಲವು ಶಾಲಾ – ಕಾಲೇಜುಗಳಿಗೆ ಮನವಿಯನ್ನು ನೀಡಲಾಯಿತು.
ರಾಷ್ಟ್ರಧ್ವಜವು ರಾಷ್ಟ್ರದ ಆತ್ಮವಾಗಿದೆ. 15 ಆಗಸ್ಟ್ ಮತ್ತು 26 ಜನವರಿಯಂದು ರಾಷ್ಟ್ರ ಧ್ವಜವನ್ನು ಅಭಿಮಾನದೊಂದಿಗೆ ಪ್ರದರ್ಶಿಸಲಾಗುತ್ತದೆ. ಅದೇ ದಿನ ಇದೇ ಕಾಗದ / ಪ್ಲಾಸ್ಟಿಕ್ ನ ಚಿಕ್ಕ ಚಿಕ್ಕ ರಾಷ್ಟ್ರಧ್ವಜಗಳು ರಸ್ತೆಗಳ ಮೇಲೆ, ಕಸದ ತೊಟ್ಟಿ ಮತ್ತು ಚರಂಡಿಗಳಲ್ಲಿ ಹರಿದ ಅವಸ್ಥೆಯಲ್ಲಿ ಬಿದ್ದಿರುವುದು ಕಂಡು ಬರುತ್ತದೆ. ಪ್ಲಾಸ್ಟಿಕ್ ಧ್ವಜಗಳು ಕೂಡಲೇ ನಾಶವಾಗುವುದಿಲ್ಲ, ಆದುದರಿಂದ ಅನೇಕ ದಿನಗಳವರೆಗೆ ಈ ರಾಷ್ಟ್ರ ಧ್ವಜಗಳ ಅನಾದರವಾಗುವುದನ್ನು ನೋಡಬೇಕಾಗುತ್ತದೆ.
ದೇಶದ ಸ್ವಾತಂತ್ರ್ಯ ಸಮರದಲ್ಲಿ ಸಮಾವೇಶಗೊಂಡ ದೇಶಭಕ್ತರು ದೌರ್ಜನ್ಯಗಳ ಸಮಯದಲ್ಲಿ ಕೈಯಲ್ಲಿ ತೆಗೆದುಕೊಂಡ ರಾಷ್ಟ್ರ ಧ್ವಜಗಳು ಭೂಮಿಯ ಮೇಲೆ ಬೀಳಬಾರದು ಎಂದು ಅನೇಕ ಲಾಠಿಗಳ ಹೊಡೆತಗಳನ್ನು ತಿಂದರು. ದೌರ್ಜನ್ಯವನ್ನು ಸಹಿಸಿದರು. ರಾಷ್ಟ್ರಧ್ವಜದ ಅನಾದರವನ್ನು ತಡೆಗಟ್ಟಲು ಕ್ರಾಂತಿಕಾರಿಗಳು ತಮ್ಮ ಪ್ರಾಣಗಳನ್ನು ಅರ್ಪಿಸಿದ್ದಾರೆ.
ಹೀಗಿದ್ದರೂ ಚಿಕ್ಕ ಮಕ್ಕಳಿಗೆ ಆಡಲು, ವಾಹನಗಳ ಮೇಲೆ ಅಂಟಿಸುವ ಉದ್ದೇಶದಿಂದ ತೆಗೆದುಕೊಳ್ಳಲಾದ ಕಾಗದ ಮತ್ತು ಪ್ಲಾಸ್ಟಿಕ್ ಧ್ವಜಗಳು ರಸ್ತೆಗಳಲ್ಲಿ ಮತ್ತು ಕಸದ ತೊಟ್ಟಿಗಳಲ್ಲಿ ನೋಡಲು ಸಿಗುತ್ತವೆ. ಇದರಿಂದ ರಾಷ್ಟ್ರಧ್ವಜಕ್ಕೆ ಬಲಿದಾನ ನೀಡುವ ಕ್ರಾಂತಿಕಾರರಿಗೆ ಇದು ಒಂದು ರೀತಿಯಲ್ಲಿ ಕ್ರೂರ ತಿರಸ್ಕಾರವೇ ಆಗಿದೆ. ಆದುದರಿಂದ ವಿದ್ಯಾರ್ಥಿಗಳು ದೇಶದ ಮುಂಬರುವ ಪೀಳಿಗೆಯಾಗಿದ್ದಾರೆ.
ಈ ಭಾವಿ ಪೀಳಿಗೆ ರಾಷ್ಟ್ರಾಭಿಮಾನಿಗಳಾಗಲಿ ಎಂಬ ಉಚ್ಚ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಧ್ವಜವನ್ನು ಗೌರವಿಸಿ! ಎಂಬ ಉಪಕ್ರಮವನ್ನು ಮಾಡುತ್ತಾ ಬರುತ್ತಿದೆ.ಹಾಗೂ ಇದರ ಅಂತರ್ಗತ ರಾಷ್ಟ್ರಧ್ವಜವನ್ನು ಗೌರವಿಸಿ! ಈ ಬಗ್ಗೆ ವ್ಯಾಖ್ಯಾನವನ್ನು ಮತ್ತು ಪ್ರಶ್ನೋತ್ತರ ಸ್ಪರ್ಧೆಯನ್ನು ಏರ್ಪಡಿಸುವುದು. ಹಾಗೂ ರಾಷ್ಟ್ರೀಯ ಚಿಹ್ನೆಗಳ ಮಹತ್ವವನ್ನು ಹೇಳುವ ಕರಪತ್ರಗಳ ವಿತರಣೆಮಾಡುವ ಮುಖೆನ ಹಿಂದೂ ಜನಜಾಗೃತಿ ಸಮಿತಿಯು ಕಳೆದ 19 ವರ್ಷಗಳಿಂದ ಈ ರೀತಿ ಕಾರ್ಯವನ್ನು ಮಾಡುತ್ತಾ ಬರುತ್ತಿದೆ.