ಭಾರೀ ಮಳೆಗೆ ಕೊಕ್ಕಡದ ಸುಶೀಲ ಎಂಬವರ ಮನೆ ಮೇಲ್ಛಾವಣಿ ಸಂಪೂರ್ಣ ಹಾನಿ:ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಭೇಟಿ: ಮೇಲ್ಛಾವಣಿ ಅಳವಡಿಸುವಂತೆ ಸೂಚನೆ
ಭಾರಿ ಮಳೆಯಿಂದಾಗಿ ಕೊಕ್ಕಡ ಗ್ರಾಮದ ಬಲಿಪಗುಡ್ಡೆ ಸುಶೀಲ ಅವರ ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದ್ದು ಇಂದು ಭಾರತೀಯ ಜನತಾ ಪಾರ್ಟಿಯ ಬೆಳ್ತಂಗಡಿ ಮಂಡಲದ ವತಿಯಿಂದ ಭೇಟಿ ನೀಡಿ ಶೀಘ್ರವಾಗಿ ಅವರನ್ನು ಸ್ಥಳಾಂತರಿಸಲು ಹಾಗೂ ನಾಳೆಯೆ ಮೇಲ್ಭಾಗದಲ್ಲಿ ಅಳವಡಿಸುವಂತೆ ತಿಳಿಸಲಾಯಿತು
. ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಎಂ., ಜಯಾನಂದ ಗೌಡ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಕುಶಾಲಪ್ಪ ಗೌಡ ಪೂವಾಜೆ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.