• September 12, 2024

ಉಜಿರೆ: ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಸುದ್ದಿಗೋಷ್ಠಿ: ನೂತನ ಅಧ್ಯಕ್ಷರಾಗಿ ಅನಂತ್ ಭಟ್ ಮಚ್ಚಮಲೆ, ಕಾರ್ಯದರ್ಶಿಯಾಗಿ ವಿದ್ಯಾಕುಮಾರ್ ಕಂಚೋಡು, ಜುಲೈ 6 ರಂದು ಪದಗ್ರಹಣ ಕಾರ್ಯಕ್ರಮ

 ಉಜಿರೆ: ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಸುದ್ದಿಗೋಷ್ಠಿ: ನೂತನ ಅಧ್ಯಕ್ಷರಾಗಿ ಅನಂತ್ ಭಟ್ ಮಚ್ಚಮಲೆ, ಕಾರ್ಯದರ್ಶಿಯಾಗಿ ವಿದ್ಯಾಕುಮಾರ್ ಕಂಚೋಡು, ಜುಲೈ 6 ರಂದು ಪದಗ್ರಹಣ ಕಾರ್ಯಕ್ರಮ

ಉಜಿರೆ: ರೋಟರಿ ಬೆಂಗಳೂರು ಇಂದಿರಾ ನಗರ್ ಮತ್ತು ಕ್ಯಾಂಪಿಂಗ್ ಹೋಮ್ ಈ ಸಂಸ್ಥೆಯೊಂದಿಗೆ ತಾಲೂಕಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶಾಲೆಗಳ ಮೂಲಭೂತ ಸೌಕರ್ಯ, ಹಾಗೂ ಅಂಗನವಾಡಿಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಅನಂತ್ ಭಟ್ ಮಚ್ಚಮಲೆ ತಿಳಿಸಿದರು.

ಅವರು ಜುಲೈ 4 ರಂದು ಉಜಿರೆ ದಿಶಾ ಫುಡ್ ಕಾರ್ನರ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇದೇ ವೇಳೆ ಮಾತನಾಡಿದ ಅವರು ರೋಟರಿ ಕ್ಲಬ್ ಬೆಳ್ತಂಗಡಿ ಇದರ 2023-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ರೋ.ಅನಂತ ಭಟ್ ಮಚ್ಚಮಲೆ, ಕಾರ್ಯದರ್ಶಿಯಾಗಿ ರೋ.ವಿದ್ಯಾಕುಮಾರ್ ಕಂಚೋಡು, ಕೋಶಾಧಿಕಾರಿಯಾಗಿ ರೋ.ಅಬೂಬಕ್ಕರ್ ಆಯ್ಕೆಯಾಗಿದ್ದು, ಜು.6 ರಂದು ಉಜಿರೆ ಕೃಷ್ಣಾನುಗ್ರಹದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ ಎಂದು ಹೇಳಿದರು.

ನಂತರ ಮಾತನಾಡಿದ ಅವರು ಶಿಕ್ಷಕರ ಕೌಶಲ್ಯ ತರಬೇತಿ ಮಾಡುವ ಉದ್ದೇಶದಿಂದ ಹೈಸ್ಕೂಲ್ ಶಿಕ್ಷಕರಿಗೆ ಕಾರ್ಯಾಗಾರವನ್ನು ಈ ವರ್ಷದ ಸಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಆಯೋಜಿಸಲಾಗಿದೆ. ರಬ್ಬರ್ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು ಜನವರಿ ತಿಂಗಳಿನಲ್ಲಿ ತಾಲೂಕಿನ ಘನ ಸಂಸ್ಥೆಯಾದ ಬೆಳ್ತಂಗಡಿ ರಬ್ಬರ್ ಬೆಳೆಗಾರರ ಮತ್ತು ಮಾರಾಟ ಸಂಸ್ಕರಣಾ ಸಂಸ್ಥೆಯೊಂದಿಗೆ ಸೇರಿ ರಾಜ್ಯಮಟ್ಟದ ರಬ್ಬರ್ ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಿದ್ದೇವೆ ಹಾಗೂ ಮುಂದಿನ ವರ್ಷದ ಮೇ ತಿಂಗಳಿನಲ್ಲಿ ದೊಡ್ಡ ಮಟ್ಟದ ಹಣ್ಣಿನ ಮೇಳವನ್ನು ರೋಟರಿ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳೊಂದಿಗೆ ಸೇರಿಕೊಂಡು ಆಯೋಜಿಸಲಿದ್ದೇವೆ . ಹಲವಾರು ವಿದೇಶಿ ಹಣ್ಣುಗಳು ಹಾಗೆಯೇ ಇನ್ನಿತರ ಬೇರೆ ಬೇರೆ ಹೊಸ ಹೊಸ ಪ್ರಯೋಗಗಳು , ಹಲವಾರು ಕೃಷಿ ವಿಧಾನಗಳಿವೆ ಇದರ ವಿಚಾರ ಸಂಕೀರ್ಣಗಳನ್ನು ಈ ಹಣ್ಣಿನ ಮೇಳದಲ್ಲಿ ಏರ್ಪಡಿಸಲಿದ್ದೇವೆ. ಜುಲೈ 16 ರಂದು ಮಿತ್ತಬಾಗಿಲು ಪರಿಸರದಲ್ಲಿ ಹಣ್ಣಿನ ಬೀಜಗಳನ್ನು ಬಿತ್ತುವಂತಹ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ. ಆರೋಗ್ಯ ಸಿರಿ, ವಿದ್ಯಾ ಸಿರಿ, ವನಸಿರಿ, ಜಲಸಿರಿ ಈ 4 ವರ್ಗಗಳಲ್ಲಿ ಎಲ್ಲಾ ವಿಭಾಗಗಳಿಗೆ ನಾವು ಬೇರೆ ಬೇರೆ ರೀತಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ. ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ಅನಂತ್ ಭಟ್ ಮಚ್ಚಮಲೆ, ಕಾರ್ಯದರ್ಶಿ ರೋ.ವಿದ್ಯಾಕುಮಾರ್ ಕಂಚೋಡು, ನಿರ್ದೇಶಕರಾದ ಕಿರಣ್ ಹೆಬ್ಬಾರ್ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!