• October 13, 2024

ಜೂನ್ 16 ರಿಂದ 22 ರ ಕಾಲಾವಧಿಯಲ್ಲಿ ಗೋವಾದಲ್ಲಿ ವೈಶ್ವಿಕ(ವಿಶ್ವ) ಹಿಂದೂ ರಾಷ್ಟ ಮಹೋತ್ಸವ’ದ ಆಯೋಜನೆ

 ಜೂನ್ 16 ರಿಂದ 22 ರ ಕಾಲಾವಧಿಯಲ್ಲಿ ಗೋವಾದಲ್ಲಿ ವೈಶ್ವಿಕ(ವಿಶ್ವ) ಹಿಂದೂ ರಾಷ್ಟ ಮಹೋತ್ಸವ’ದ ಆಯೋಜನೆ

 



ಮಂಗಳೂರು - ಗೋವಾದಲ್ಲಿ ಕಳೆದ 11 ವರ್ಷಗಳಿಂದ ನಡೆಯುತ್ತಿರುವಅಖಿಲ ಭಾರತೀಯ ಹಿಂದೂ ರಾಷ್ಟ ಅಧಿವೇಶನ’ ದಿಂದ ಹಿಂದೂ ರಾಷ್ಟದ ಚರ್ಚೆ ಈಗ ಕೇವಲ ಭಾರತದಲ್ಲಷ್ಟೇ ಅಲ್ಲ, ವಿಶ್ವ ಮಟ್ಟದಲ್ಲಿ ಆರಂಭವಾಗಿದೆ. ಈ ನಡುವೆ ಹಿಂದೂ ರಾಷ್ಟದ ಬೇಡಿಕೆಯಿಡುವ ಅನೇಕ ವೇದಿಕೆಗಳು ನಿರ್ಮಾಣವಾಗಿವೆ. ಮತ್ತೊಂದೆಡೆ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಸಮರ್ಥನೆ ಮಾಡುವವರನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಬಂಧಿಸಲಾಗುತ್ತಿದೆ. ಪಂಜಾಬ್‌ನಲ್ಲಿ ಖಲಿಸ್ಥಾನವಾದಿಗಳು ಪೋಲೀಸ್ & ಸರಕಾರಕ್ಕೆ ಬೆದರಿಕೆಯನ್ನು ನೀಡುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ಹತ್ಯೆ ಮಾಡುತ್ತಿದ್ದಾರೆ, ಮಣಿಪುರ್, ನಾಗಾಲ್ಯಾಂಡ್‌ನಂತಹ ರಾಜ್ಯಗಳಲ್ಲಿನ ಹಿಂದೂಗಳ ಮನೆಗಳನ್ನು ಸುಡಲಾಗುತ್ತಿದೆ. ಕಾಶ್ಮೀರದಲ್ಲಿ ಕಲಂ 370 ರದ್ದುಗೊಳಿಸಿದರು. ಆದರೂ ಅಲ್ಲಿಯ ಹಿಂದೂಗಳು ಸುರಕ್ಷಿತವಾಗಿಲ್ಲ. ಲವ್ ಜಿಹಾದಿಗಳಿಂದ ದೇಶಾದ್ಯಂತ ಸಾಕ್ಷಿ, ಅನುರಾಧ, ಶ್ರದ್ಧಾ ವಾಲ್ಕರ್ ನಂತಹ ಅನೇಕ ಹಿಂದೂ ಹುಡುಗಿಯರ ಭೀಕರ ಹತ್ಯೆಗಳನ್ನು ನೋಡಿದರೆ ದೇಶದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ದಿ ಕೇರಳ ಸ್ಟೋರಿ' ಈ ಚಲನಚಿತ್ರದಲ್ಲಿ ಮಂಡಿಸಿರುವ ವಾಸ್ತವ ಕೇವಲ ಕೇರಳಕ್ಕಷ್ಟೇ ಸೀಮಿತವಾಗಿರದೆ, ಈ ಜಿಹಾದಿ ಷಡ್ಯಂತ್ರದ ವ್ಯಾಪ್ತಿ ದೇಶಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಬಹಿರಂಗವಾಗಿದೆ. ಮತ್ತೊಂದೆಡೆ ಹಿಂದೂಗಳು ಭಾಷಣ ಮಾಡಿದರೆ ಕೂಡಲೇ ಅವರ ಮೇಲೆಧ್ವೇಷ ಭಾಷಣ’ ನೆಪದಲ್ಲಿ ದೂರು ದಾಖಲಾಗುತ್ತದೆ; ಆದರೆ ಸರ್ ತನ್ ಸೇ ಜುದಾ' ಮಾಡುವುದರ ಬಗ್ಗೆ ಬಹಿರಂಗವಾಗಿ ಘೋಷಿಸುತ್ತಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುವುದು ಕಾಣುವುದಿಲ್ಲ. ಇನ್ನೊಂದು ಕಡೆಗೆ ರಾಷ್ಟಿಯ ತನಿಖಾ ದಳದ ತನಿಖೆಯಲ್ಲಿ,ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಮತ್ತು ಐ.ಎಸ್.ಐ, ಇವು ಭಾರತವನ್ನು ೨೦೪೭ ರ ವರೆಗೆ ಇಸ್ಲಾಮಿಕ್ ರಾಷ್ಟ ಮಾಡಲು ಷಡ್ಯಂತ್ರ ರೂಪಿಸುತ್ತಿರುವುದು ಬಹಿರಂಗವಾಗಿದೆ.

ಇಂತಹ ಸ್ಥಿತಿಯಲ್ಲಿ ಸಮಾಜವನ್ನು ಒಟ್ಟುಗೂಡಿಸಬಲ್ಲ ಏಕೈಕ ಶಕ್ತಿಯೆಂದರೆ ಹಿಂದೂ ಧರ್ಮವಾಗಿದೆ. ಹಿಂದೂ ಧರ್ಮವು ವಿಶ್ವಬಂಧುತ್ವದ ಮತ್ತು ವಸುದೈವ ಕುಟುಂಬಕಮ್’, ಸಂಕಲ್ಪನೆಯನ್ನು ಪ್ರಸ್ತುತಪಡಿಸುತ್ತದೆ. ಆದ್ದರಿಂದ ಭಾರತವನ್ನು ಮತ್ತೆ ತುಂಡಾಗುವುದನ್ನು ತಡೆಯಲು ಭಾರತವನ್ನು ಆದರ್ಶ ರಾಮರಾಜ್ಯ ಅರ್ಥಾತ್ ಹಿಂದೂ ರಾಷ್ಟ ಮಾಡದೆ ಪರ್ಯಾಯವಿಲ್ಲ. ಆದ್ದರಿಂದ ಹಿಂದೂ ರಾಷ್ಟ ಸ್ಥಾಪನೆಯ ಕಾರ್ಯಕ್ಕೆ ಗತಿ ನೀಡಲು ಪ್ರತಿವರ್ಷದಂತೆ ಜೂನ್ ೧೬ ರಿಂದ ೨೨, ೨೦೨೩ ರ ಕಾಲಾವಧಿಯಲ್ಲಿ ಫೋಂಡಾ, ಗೋವಾದಲ್ಲಿನ ಶ್ರೀ ರಾಮನಾಥ ದೇವಸ್ಥಾನದಲ್ಲಿ ೧೧ ನೇ ಅಖಿಲ ಭಾರತೀಯ ಹಿಂದೂ ರಾಷ್ಟ ಅಧಿವೇಶನ ಅಂದರೆ ವೈಶ್ವಿಕ ಹಿಂದೂ ರಾಷ್ಟ ಮಹೋತ್ಸವ ಆಯೋಜಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಪತ್ರಕರ್ತರ ಪರಿಷತ್ತಿನಲ್ಲಿ ಹೇಳಿದರು.

ಈ ಪತ್ರಕರ್ತರ ಪರಿಷತ್ತಿನಲ್ಲಿ ಭಾಜಪದ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಠದ ದ.ಕ ಜಿಲ್ಲಾ ಸಹಸಂಚಾಲಕರಾದ ಶ್ರೀ. ದಿನೇಶ್ ಕುಮಾರ್ ಜೈನ್, ರೈತ ಸಂಘದ ಉಪಾಧ್ಯಕ್ಷರಾದ ಶ್ರೀ. ಗಿರೀಶ್ ಕೊಟ್ಟಾರಿ, ಸನಾತನ ಸಂಸ್ಥೆಯ ಸೌ. ಲಕ್ಷ್ಮಿ ಪೈ ಇವರೂ ಉಪಸ್ಥಿತರಿದ್ದರು. ಸನಾತನ ಸಂಸ್ಥೆಯ ಸೌ. ಲಕ್ಷ್ಮಿ ಪೈ ಮಾತನಾಡಿ ಈ ಬಾರಿಯ ಅಧಿವೇಶನದಲ್ಲಿ ಹಿಂದೂ ರಾಷ್ಟ ಸಂಸದ್ ಈ ವೈಶಿಷ್ಟ್ಯ ಪೂರ್ಣ ಸತ್ರದ ಆಯೋಜನೆ ಮಾಡಲಾಗಿದೆ. ವಿವಿಧ ವಿಷಯಗಳ ಬಗ್ಗೆ ವಿಶೇಷತಜ್ಞರ ಚರ್ಚಾಕೂಟ, ವಿಶೇಷ ಕಾರ್ಯ ಮಾಡುವ ಗೌರವಾನ್ವಿತರ ಸಂದರ್ಶನವೂ ಈ ಬಾರಿಯ ಅಧಿವೇಶನದ ವಿಶೇಷ ಆಕರ್ಷಣೆಯಾಗಿರಲಿದೆ.

ಲವ್ ಜಿಹಾದ್’, ಹಲಾಲ್ ಸರ್ಟಿಫಿಕೇಷನ್’,ಲ್ಯಾಂಡ್ ಜಿಹಾದ್’, ಕಾಶಿ-ಮಥುರಾ ಮುಕ್ತಿ ,ಮತಾಂತರ’, ಗೋಹತ್ಯೆ’,ಕೋಟೆ ದೇವಸ್ಥಾನಗಳ ಮೇಲಿನ ಇಸ್ಲಾಮಿ ಅತಿಕ್ರಮಣ’, ದೇವಸ್ಥಾನ ಸಂಸ್ಕöತಿಯ ರಕ್ಷಣೆ’,ಕಾಶ್ಮೀರಿ ಹಿಂದೂಗಳ ಪುನರ್ವಸತಿ’, `ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳ ಮೇಲಿನ ಅತ್ಯಾಚಾರ’, ಈ ರೀತಿಯ ವಿವಿಧ ವಿಷಯಗಳ ಜೊತೆಗೆ ಹಿಂದೂ ರಾಷ್ಟದ ಅಡಿಪಾಯಕ್ಕಾಗಿ ಅವಶ್ಯಕ ವಿಷಯಗಳ ಮೇಲೆ ಈ ಮಹೋತ್ಸವದಲ್ಲಿ ವಿಚಾರ ವಿನಿಮಯ ನಡೆಯಲಿದೆ ಎಂದರು.


ಶ್ರೀ ದಿನೇಶ್ ಜೈನ್ ರವರು ಮಾತನಾಡುತ್ತಾ ಅಖಿಲ ಭಾರತ ಹಿಂದೂ ಅಧಿವೇಶನವು ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ವೈಶಿಷ್ಟ್ಯವಾಗಿ ನಡೆಯಲಿದೆ. ಇಡೀ ಜಗತ್ತಿನಲ್ಲಿ ಹಿಂದೂ ರಾಷ್ಟ್ರ ತರುವ ದೃಷ್ಟಿಯಲ್ಲಿ ನಾವೆಲ್ಲರೂ ಪ್ರಯತ್ನವನ್ನು ಮಾಡೋಣ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಸಹಕಾರ ಅವಶ್ಯಕತೆ ಇದೆ ಎಂದು ಹೇಳಿದರು.


ಈ ಅಧಿವೇಶನಕ್ಕೆ ಅಮೇರಿಕಾ, ಬಾಂಗ್ಲಾದೇಶ, ನೇಪಾಳ, ಇಂಗ್ಲೆಂಡ್, ಸಿಂಗಪೂರ ಈ ದೇಶಗಳ ಜೊತೆಗೆ ಭಾರತದಲ್ಲಿನ ೨೮ ರಾಜ್ಯಗಳಲ್ಲಿನ ೩೫೦ ಕ್ಕೂ ಹೆಚ್ಚಿನ ಹಿಂದೂ ಸಂಘಟನೆಗಳ ೧೫೦೦ ಕಿಂತಲೂ ಹೆಚ್ಚಿನ ಪ್ರತಿನಿಧಿಗಳಿಗೆ ಆಮಂತ್ರಿಸಲಾಗಿದೆ. ಇದರಲ್ಲಿ ಕರ್ನಾಟಕದ ಶ್ರೀ. ಚಕ್ರವರ್ತಿ ಸುಲಿಬೆಲೆ, ಹಿಂದೂ ನಾಯಕರಾದ ಅರುಣ ಪುತ್ತಿಲ, ಡಾ. ಎಸ್. ಆರ್ ಲೀಲಾ, ಅಡ್ಡಂಡ ಕಾರ್ಯಪ್ಪ ಸೇರಿದಂತೆ ಕರ್ನಾಟಕ ರಾಜ್ಯದ ಸುಮಾರು ೨೫೦ ಕ್ಕೂ ಅಧಿಕ ಹಿಂದುತ್ವವಾದಿ ನಾಯಕರು, ದೇಶದ್ಯಾಂತ ಕಾರ್ಯ ಮಾಡುವ ಅಮರಾವತಿಯ , ಶ್ರೀ ರುಕ್ಮಿಣಿ ವಲ್ಲಭ ಪೀಠದ ಶ್ರೀ ಜಗದ್ಗುರು ರಾಮಾನಂದಚಾರ್ಯ ಶ್ರೀ ಸ್ವಾಮಿ ರಾಮರಾಜೇಶ್ವರಾಚಾರ್ಯಜಿ, ವಿಶ್ವ ಹಿಂದೂ ಪರಿಷತ್ತಿನ ದೇವಗಿರಿ ಪ್ರಾಂತದ ಧರ್ಮಚಾರ್ಯ ಹ.ಭ.ಪ. ಜನಾರ್ಧನ ಮಹಾರಾಜ್ ಮೇಟೆ, ಕಾಶಿಯ ಜ್ಞಾನವಾಪಿ ಮಸೀದಿಯ ವಿರುದ್ಧ ಹೋರಾಟ ನಡೆಸುತ್ತಿರುವ ವಕೀಲ (ಪೂಜ್ಯ) ಹರಿಶಂಕರ್ ಜೈನ್, ನ್ಯಾಯವಾದಿ ವಿಷ್ಣು ಶಂಕರ ಜೈನ್, ತೆಲಂಗಾಣದ ಹಿಂದುತ್ವನಿಷ್ಠ ಶಾಸಕ ಟಿ. ರಾಜಸಿಂಹ, ದೆಹಲಿಯ ಭಾಜಪದ ನಾಯಕ ಶ್ರೀ. ಕಪಿಲ ಮಿಶ್ರಾ ಇವರೊಂದಿಗೆ ವರಿಷ್ಠ ನ್ಯಾಯವಾದಿಗಳು, ಉದ್ಯಮಿಗಳು, ವಿಚಾರವಂತರು, ಲೇಖಕರು, ದೇವಸ್ಥಾನ ವ್ಯವಸ್ಥಾಪಕರು ಹಾಗೂ ಅನೇಕ ಸಮವಿಚಾರಿ ಸಾಮಾಜಿಕ, ರಾಷ್ಟ್ರೀಯ ಮತ್ತು ಆಧ್ಯಾತ್ಮಿಕ ಸಂಘಟನೆಯ ಪ್ರತಿನಿಧಿಗಳು ಉಪಸ್ಥಿತರಿರುವರು.


ಈ ಅಧಿವೇಶನದ ನೇರಪ್ರಸಾರ ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣ ಹಿಂದೂ ಜಾಗೃತಿ. ಮೂಲಕ, ಹಾಗೂ ಸಮಿತಿಯ ಹಿಂದೂ ಜಾಗೃತಿ. ಯೂಟ್ಯೂಬ್ ಚಾನೆಲ್ ಮತ್ತು ಹಿಂದೂ ಜಾಗೃತಿ. ಈ ಟ್ವಿಟರ್ ಹ್ಯಾಂಡಲ್ ಮೂಲಕ ನಡೆಯಲಿದೆ. ಜಗತ್ತಿನಾದ್ಯಂತ ಇರುವ ಹಿಂದುತ್ವನಿಷ್ಠರು ಈ ವೈಶ್ವಿಕ ಹಿಂದೂ ರಾಷ್ಟ ಮಹೋತ್ಸವದ ಲಾಭ ಪಡೆಯಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.

Related post

Leave a Reply

Your email address will not be published. Required fields are marked *

error: Content is protected !!