• June 15, 2024

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ನಾಯಕತ್ವ ತರಬೇತಿ ಕಾರ್ಯಾಗಾರ

 ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ನಾಯಕತ್ವ ತರಬೇತಿ ಕಾರ್ಯಾಗಾರ


ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ನಾಯಕತ್ವ ತರಭೇತಿ ಕಾರ್ಯಾಗಾರವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ಅಧಿಕಾರಿಯಾಗಿರುವ ಶ್ರೀಹರಿ ಶಗ್ರಿತ್ತಾಯ ಆಗಮಿಸಿದ್ದರು.ನಾಯಕತ್ವ ಗುಣಗಳನ್ನು ಮನೆಯಲ್ಲಿಯೇ ಮೈಗೂಡಿಸಿಕೊಳ್ಳಲು ಸಾಧ್ಯ.ಆಗ ಸಮಾಜವನ್ನು ಅರಿಯಲು ಸಾಧ್ಯವಾಗುತ್ತದೆ.ನಾಯಕನಾಗಿರಲು ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನಾಯಕತ್ವ ಹೇಗಿರಬೇಕು ಅವನ ಗುಣಗಳು ಹೇಗಿರಬೇಕು,ವಿವಿಧ ರೀತಿಯ ನಾಯಕರುಗಳು, ನಾಯಕನ ಜವಾಬ್ದಾರಿ ಏನು ,ಎಂಬುದನ್ನು ಹಲವಾರು ಉದಾಹರಣೆ,ಕಗ್ಗ ವಚನಗಳ ಮುಖಾಂತರ ವಿದ್ಯಾರ್ಥಿಗಳ ಮನದ ಕದ ತಲುಪುವಂತೆ ಮಾಡಿದರು.


ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಾಲೆಯಲ್ಲಿ ಮಂತ್ರಿಮಂಡಲದ ಅಗತ್ಯ ನಾಯಕನ ಮಹತ್ವ ವಿವರಿಸಿ ಎಲ್ಲರನ್ನೂ ಸ್ವಾಗತಿಸಿದರು.


ಕುಮಾರಿ ಆದ್ಯ ಕಾರ್ಯಕ್ರಮ ನಿರೂಪಿಸಿ, ನಿಧೀಕ್ಷಾ ಅತಿಥಿಗಳ ಕಿರುಪರಿಚಯ ಮಾಡಿ, ವೀಕ್ಷಾ ಧನ್ಯವಾದ ಇತ್ತರು.ಶಾಲಾ ಶಿಕ್ಷಕರ ವೃಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.

Related post

Leave a Reply

Your email address will not be published. Required fields are marked *

error: Content is protected !!