• July 16, 2024

ಬೇರ” ಸಿನಿಮಾದ ಟ್ರೈಲರ್ ನ್ನು ಬಿಡುಗಡೆಗೊಳಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ

 ಬೇರ” ಸಿನಿಮಾದ ಟ್ರೈಲರ್ ನ್ನು ಬಿಡುಗಡೆಗೊಳಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ ಮೂಡಿಬಂದ ವಿನು ಬಳಂಜ ನಿರ್ದೇಶನದ “ಬೇರ” ಸಿನಿಮಾದ ಟ್ರೈಲರ್ ನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಬಿಡುಗಡೆಗೊಳಿಸಿ ಚಿತ್ರಕ್ಕೆ ಹಾಗೂ ಚಿತ್ರ ತಂಡಕ್ಕೆ ಶುಭ ಆಶೀರ್ವಾದ ನೀಡಿದರು.

ಈ ಸಂದರ್ಭದಲ್ಲಿ ರಾಜರಾಮ ಶೆಟ್ಟಿ ಕೋಲ್ಪೆ ಗುತ್ತು ಸಿನಿಮಾ ನಿರ್ಮಾಪಕ ದಿವಾಕರ ದಾಸ ನೇರ್ಲಾಜೆ, ನಿರ್ದೇಶಕ ವಿನು ಬಳಂಜ, ಕಾರ್ಯಕಾರಿ ನಿರ್ಮಾಪಕ ರಾಮದಾಸ್ ಶೆಟ್ಟಿ, ಬಹುಭಾಷ ನಟಿ ಹರ್ಷಿಕಾ ಪೂಣಚ್ಚ, ಸ್ವರಾಜ್ ಶೆಟ್ಟಿ, ಯಶ್ ಶೆಟ್ಟಿ ಸೇರಿದಂತೆ ಚಿತ್ರ ತಂಡದ ಹಲವರು ಉಪಸ್ಥಿತರಿದ್ದರು.

ಇತ್ತೀಚಿಗೆ ಟೀಸರ್ ಅನ್ನು ಡಾ. ಶಿವರಾಜ್‌ ಕುಮಾರ್ ಬಿಡುಗಡೆಗೊಳಿಸಿದ್ದರು. ಆನಂದ್‌ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಟೀಸರ್‍ ಅಪ್ಲೋಡ್ ಆಗಿದ್ದು ಈ ವರೆಗೆ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿ ಮೆಚ್ಚಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!