• October 27, 2024

ಕರಾವಳಿ ಜಾನಪದ ಕ್ರೀಡೆ ಕಂಬಳಕ್ಕೆ ಸುಪ್ರೀಂ ಕೋರ್ಟ್ ಅನುಮತಿ: ಕಂಬಳ ಅಭಿಮಾನಿಗಳ ಹೋರಾಟಕ್ಕೆ ಸಂದ ಜಯ ರಕ್ಷಿತ್ ಶಿವರಾಂ

 ಕರಾವಳಿ ಜಾನಪದ ಕ್ರೀಡೆ ಕಂಬಳಕ್ಕೆ ಸುಪ್ರೀಂ ಕೋರ್ಟ್ ಅನುಮತಿ:  ಕಂಬಳ ಅಭಿಮಾನಿಗಳ ಹೋರಾಟಕ್ಕೆ ಸಂದ ಜಯ ರಕ್ಷಿತ್ ಶಿವರಾಂ

 

ಬೆಳ್ತಂಗಡಿ: ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ (PCA Act) ತಮಿಳುನಾಡು ಸರ್ಕಾರ ಮಾಡಿರುವ ತಿದ್ದುಪಡಿಯ ಸಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದೆ. ಈ ಮೂಲಕ ಎತ್ತುಗಳನ್ನು ಬಳಸಿ ನಡೆಸಲಾಗುವ ಜಲ್ಲಿಕಟ್ಟು (Jallikattu) ಕ್ರೀಡೆಯ ಜೊತೆಗೆ ಕಂಬಳಕ್ಕೂ (Kambala) ಇದ್ದ ಕಂಟಕ ನಿವಾರಣೆಯಾಗಿದೆ.ಇದು ಕಂಬಳ ಅಭಿಮಾನಿಗಳ ಹೋರಾಟಕ್ಕೆ ಸಂದ ಜಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.

2014 ರ ಆದೇಶವನ್ನು ರದ್ದು ಮಾಡಿ 19ನೇ ಮತ್ತು 21ನೇ ವಿದಿ ಗೆ ಹೊಸ ವ್ಯಾಖ್ಯಾನವನ್ನು ಬರೆದಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ಕರಾವಳಿಯ ಕಂಬಳ ಪ್ರೇಮಿಗಳಲ್ಲಿ ಸಂತಸವನ್ನು ಮೂಡಿಸಿದೆ. ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಯಾವುದೇ ವಿರೋಧ ಇಲ್ಲವೆಂದು ನೀಡಿದ ಆದೇಶವನ್ನು ಸ್ವಾಗತಿಸುತ್ತೆನೆ.ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ

Related post

Leave a Reply

Your email address will not be published. Required fields are marked *

error: Content is protected !!