ವಿಶ್ವ ರೆಡ್ ಕ್ರಾಸ್ ದಿನದ ಅಂಗವಾಗಿ, ಉಜಿರೆಯ ಶ್ರೀ ಧ. ಮ. ಡಿಪ್ಲಾಮೊ ಕಾಲೇಜಿನ ಯುತ್ ರೆಡ್ ಕ್ರಾಸ್ ಘಟಕದ ಸದಸ್ಯರಿಗೆ ಪ್ರಥಮ ಚಿಕಿತ್ಸಾ ತರಬೇತಿ
ಉಜಿರೆ: ವಿಶ್ವ ರೆಡ್ ಕ್ರಾಸ್ ದಿನದ ಅಂಗವಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಡಿಪ್ಲಾಮೊ ಕಾಲೇಜಿನ ಯುತ್ ರೆಡ್ ಕ್ರಾಸ್ ಘಟಕದ ಸದಸ್ಯರಿಗೆ ಒಂದು ದಿನದ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮವು ಮೇ.8 ರಂದು ಆಯೋಜಿಸಲಾಗಿತ್ತು.
ರೆಡ್ ಕ್ರಾಸ್ ಸ್ಥಾಪಕ ಹೆನ್ರಿಡೊಸೆಂಟ್ ರವರ ಹುಟ್ಟುಹಬ್ಬದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಗೊಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ವಹಿಸಿದ್ದು, ಬೆಳ್ತಂಗಡಿ ರೆಡ್ ಕ್ರಾಸ್ ಘಟಕದ ಚೇರ್ಮನ್ ಹರಿದಾಸ್ ಹಾಗೂ ಕಾರ್ಯದರ್ಶಿ ಯಶವಂತ ಪಟವರ್ಧನ್ ಅತಿಥಿಗಳಾಗಿ ಭಾಗವಹಿಸಿದರು.
ಜಿಲ್ಲಾ ರೆಡ್ ಕ್ರಾಸ್ ಭಾಗವಾದ ಯುತ್ ರೆಡ್ ಕ್ರಾಸ್ ಚೇರ್ಮನ್ ಸಾಚೇತ್ ಸುವರ್ಣ ಮುಖ್ಯ ತರಬೇತುದಾರರಾಗಿ ಇಡೀ ದಿನದ ತರಬೇತಿ ನೀಡಿದರು. ಕಾಲೇಜಿನ ರೆಡ್ ಕ್ರಾಸ್ ಘಟಕದ ಪ್ರಾಜೆಕ್ಟ್ ಆಫೀಸರ್ ಅವನೀಶ್ ಉತ್ತಮ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.