• January 16, 2025

ಸಕಲ ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ: ನೀರಿನ ಸಮಸ್ಯೆಯಿಂದ ಬೇಸತ್ತ ಭಕ್ತನಿಗೆ ನೀರಿನ ಭಾಗ್ಯವನ್ನು ಕರುಣಿಸಿದ ಮಹಾತಾಯಿ

 ಸಕಲ ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ: ನೀರಿನ ಸಮಸ್ಯೆಯಿಂದ ಬೇಸತ್ತ ಭಕ್ತನಿಗೆ ನೀರಿನ ಭಾಗ್ಯವನ್ನು ಕರುಣಿಸಿದ ಮಹಾತಾಯಿ

 

ಆರಿಕೋಡಿ: ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯು ಕಷ್ಟ ಎಂದು ಬಂದ ಭಕ್ತರಿಗೆ ನೆರಳಾಗುತ್ತಾಳೆ. ಅದೆಷ್ಟೋ ಭಕ್ತರ ಸಮಸ್ಯೆಗಳನ್ನ ಪರಿಹರಿಸಿದ ತಾಯಿಯ ಮಹಿಮೆ ಅತ್ಯಧ್ಬುತವಾದುದು.

ಬೆಳ್ತಂಗಡಿ ತಾಲೂಕಿನ ವೇಣೂರು ಕರಿಮಣಿಯಲು ಪರಿಸರದ ಪ್ರಭಾಕರ್ ಹೆಗ್ಡೆ ಹಾಗೂ ಕಡಬ ತಾಲೂಕಿನ ಬಳ್ಪ ಗ್ರಾಮದ ಕುಂಜೆತ್ತಾಡಿ ಮಾಯಿಲಪ್ಪ ಗೌಡ ಎಂಬವರ ಭೂಮಿಯಲ್ಲಿ ಜಲದ ಸಮಸ್ಯೆ ಕಂಡು ಬಂದಾಗ ಹಲವಾರಿ ಹರಕೆಗಳನ್ನು ನೀಡಿದರೂ ನೀರಿನ ಸಮಸ್ಯೆಗೆ ಪರಿಹಾರ ಸಿಗದೇ ಇದ್ದಾಗ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ಮೊರೆ ಹೋಗುತ್ತಾರೆ.

ಸಕಲ ಕಷ್ಟಗಳನ್ನು ಪರಿಹರಿಸುವ ತಾಯಿಯ ಮುಂದೆ ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಅಭಯದ ನುಡಿಯ ಮೂಲಕ ತನ್ನ ಸಮಸ್ಯೆಯನ್ನು ಪರಿಹರಿಸುವಂತೆ ಭರವಸೆಯನ್ನು ನೀಡುತ್ತಾಳೆ. ತಾಯಿಯ ನುಡಿಯಂತೆ ತನ್ನ ಭೂಮಿಯಲ್ಲಿ ಕಂಡು ಬಂದ ನೀರಿನ ಸಮಸ್ಯೆ ಪರಿಹಾರವಾಗಿ ತಮಗೆ ಬೇಕಾದಷ್ಟು ನೀರನ್ನು ನೀಡಿ ಇಳೆಯನ್ನು ತಂಪುಮಾಡಿದ್ದಾಳೆ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ

Related post

Leave a Reply

Your email address will not be published. Required fields are marked *

error: Content is protected !!