• October 13, 2024

ಅಳದಂಗಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ SDPI ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಮತ ಯಾಚನೆ

 ಅಳದಂಗಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ SDPI ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಮತ ಯಾಚನೆ

 

ಬೆಳ್ತಂಗಡಿ (ಮೇ -5): ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ SDPI ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿಯವರು ಇಂದು ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯ ಅಳದಂಗಡಿ, ಶಿರ್ಲಾಲು, ಪಿಲ್ಯ, ಪೆರಲ್ದಾರ ಕಟ್ಟೆ, ಕನ್ನಡಿಕಟ್ಟೆ, ಬದ್ಯಾರು ಪರಿಸರದ ಅಂಗಡಿ ಮತ್ತು ಮನೆಗಳಿಗೆ ತೆರಳಿ ಎಸ್ಡಿಪಿಐ ಪಕ್ಷದ ಪರವಾಗಿ ಮತ ಚಲಾಯಿಸಬೇಕೆಂದು ಜನರಲ್ಲಿ ಮತ ಯಾಚನೆ ಮಾಡಿದರು.

         ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಬೇಕು, ಅದರ ಬದಲಾಗಿ ಎದುರಾಳಿ ಅಭ್ಯರ್ಥಿ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರ ನಡೆಸಿ ಮತಯಾಚಿಸುತ್ತಿದ್ದಾರೆ. ಸುಳ್ಳು ಪ್ರಚಾರದಲ್ಲಿ ಜನರ ಗಮನ ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲ ಜನರು ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ.

ಈ‌ ಚುನಾವಣೆ ಯುವಕರ ಭವಿಷ್ಯ, ಮಹಿಳೆಯರ ಸುರಕ್ಷತೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುವಂತ ಚುನಾವಣೆಯಾಗಿದೆ.
ಜನರು ಎಸ್ಡಿಪಿಐ ಪಕ್ಷಕ್ಕೆ ಮತ ನೀಡಲಿದ್ದಾರೆ ಎಂದರು.

       ಈ ಸಂದರ್ಭದಲ್ಲಿ ಎಸ್ಡಿಪಿಐ ಪಕ್ಷದ ಕ್ಷೇತ್ರ ಅಧ್ಯಕ್ಷರಾದ ನವಾಝ್ ಕಟ್ಟೆ, ಹುಸೈನ್ ಲಾಡಿ, ಸಾದಿಕ್ ಕರಂಬರು, ರಫೀಕ್ ಕನ್ನಡಿಕಟ್ಟೆ, ಬಳಂಜ ಪಂಚಾಯತ್ ಸದಸ್ಯರಾದ ನಿಜಾಮ್ ಕಟ್ಟೆ, ರಮೀಜ್, ಸ್ಥಳೀಯ  ಗ್ರಾಮ ಸಮಿತಿ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!