ಧರ್ಮಸ್ಥಳದಿಂದ ಮಂಗಳೂರಿಗೆ ಇಂದು ಬೆಳಗ್ಗೆ ಸರ್ಕಾರಿ ಬಸ್ ಕೊರತೆ: ಗುರುವಾಯನಕೆರೆಯಲ್ಲಿ ಪ್ರಯಾಣಿಕರ ಪರದಾಟ
ಗುರುವಾಯನಕೆರೆ: ಧರ್ಮಸ್ಥಳದಿಂದ ಮಂಗಳೂರಿಗೆ ಪ್ರಯಾಣ ಬೆಳಸುವ ಪ್ರಯಾಣಕರು ಸರಿಯಾದ ಸಮಯಕ್ಕೆ ಸರ್ಕಾರಿ ಬಸ್ ಬಾರದೇ ಇದ್ದ ಪರಿಣಾಮ ಗುರುವಾಯನಕೆರೆಯಲ್ಲಿ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ಮೇ.3 ರಂದು ಬೆಳಗ್ಗೆ ನಿರ್ಮಾಣವಾಗಿದೆ.
ಬೆಳಗ್ಗೆ 7.30 ರಿಂದ 9.45 ರವರೆಗೂ ಬಸ್ ಬಾರದೇ ಇದ್ದುದರಿಂದ ಕಚೇರಿಗಳಿಗೆ, ಇನ್ನಿತರ ಕೆಲಸಕಾರ್ಯಗಳಿಗೆ ಅಚಣೆಯುಂಟಾಗಿದೆ. ಸುಮಾರು 3 ಗಂಟೆಗಳ ಕಾಲ ಬಸ್ ಗಾಗಿ ಕಾದು ಕೊನೆಗೆ ಆಟೋದಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಇದೀಗ ಸುಮಾರು 3 ವರೆ ಗಂಟೆಗಳ ಕಾಲ ಕಳೆದ ನಂತರ ಧರ್ಮಸ್ಥಳಕ್ಕೆ ಮಂಗಳೂರಿಗೆ ಬಸ್ ಬಂದಿದ್ದು ಪ್ರಯಾಣಿಕರು ನೇತಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.