ಬಂಟ್ವಾಳ: ಅಂಬ್ಡೇಲ್ ಗುತ್ತಿನ ನೂತನ ಗುತ್ತುಮನೆ ಮತ್ತು ನೂತನ ಧರ್ಮಚಾವಡಿಯ ಶಿಲಾನ್ಯಾಸ ನೆರವೇರಿಸಿದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
ಬಂಟ್ವಾಳ: ಪ್ರಖ್ಯಾತ ವಾಸ್ತುತಜ್ಞರಾದ ಮಹೇಶ್ ಮುನಿಯಂಗಳ ಮಾರ್ಗದರ್ಶನದಂತೆ ಸುಮಾರು ಮೂರು ಕೋಟಿ ವೆಚ್ಚದಲ್ಲಿ 1500 ಕ್ಕೂ ಮಿಕ್ಕಿ ಕುಟುಂಬದ ಸದಸ್ಯರಿರುವ ಬಂಟ್ವಾಳ ತಾಲೂಕಿನ ಪ್ರಸಿದ್ದ ಬಿಲ್ಲವ ಮನೆತನವಾದ ಅಂಬ್ಡೇಲ್ ಗುತ್ತಿನ ನೂತನ ಗುತ್ತುಮನೆ ಮತ್ತು ಪಟ್ಟದಾಯನ ಮತ್ತು ಅಟ್ಟದಾಯನ ( ಪಂಜುರ್ಲಿ) ನೂತನ ಧರ್ಮಚಾವಡಿಯ ಶಿಲಾನ್ಯಾಸ ಕಾರ್ಯಕ್ರಮವು ಏ. 27 ರಂದು ನೆರವೇರಿತು.
ಕನ್ಯಾಡಿ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಇವರ ಉಪಸ್ಥಿತಿಯಲ್ಲಿ, ವೇದಮೂರ್ತಿ ಮಹೇಶ್ ಭಟ್ ಇವರ ಪೌರೋಹಿತ್ವದಲ್ಲಿ , ಗೋಪಾಲ ಬಂಗೇರ ಯಾನೆ ದಂಡು ದೇವು ಬೈದ್ಯರಿಂದ ಜರುಗಿತು.
ಈ ಸಂದರ್ಭದಲ್ಲಿ ದೈವಗಳು ಮತ್ತು ನಮ್ಮ ಕರ್ತವ್ಯ ವಿಷಯದ ಬಗ್ಗೆ ಧಾರ್ಮಿಕ ಉಪನ್ಯಾಸವನ್ನು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ನೀಡಿದರು.
ಈ ವೇಳೆ ಗೋಪಾಲ ಬಂಗೇರ ಯಾನೆ ದಂಡು ದೇವು ಬೈದ್ಯ ಮತ್ತುವಕುಟುಂಬಸ್ಥರು ಅಮಭ್ಡೇಲ್ ಗುತ್ತು, ಅಂಬ್ಡೇಲ್ ಗುತ್ತು ಮತ್ತು ಪಟ್ಟದ ಪಂಜುರ್ಲಿಯ ಧರ್ಮಚಾವಡಿಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಪದಾಧಿಕಾರಿಗಳು ಮತ್ತು ಮೊದಲಾದವರು ಉಪಸ್ಥಿತರಿದ್ದರು.