ಶ್ರೀ. ಧ. ಮಂ. ಆ ಮಾಧ್ಯಮ ಶಾಲೆಯಲ್ಲಿ ಸಮ್ಮರ್ ಪಾರಡೈಸ್ ಸಂಭ್ರಮದ ಬೇಸಿಗೆ ಶಿಬಿರ
ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಮ್ಮರ್ ಪಾರಡೈಸ್ ಎಂಬ ಹೆಸರಿನ ಸಂಭ್ರಮದ ಬೇಸಿಗೆ ಶಿಬಿರ ಮಾ.31 ರವರಿಗೆ ಶಾಲಾ ವಠಾರದಲ್ಲಿ ನಡೆಯಲಿದೆ.
ಈ ಶಿಬಿರವು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಸತೀಶ್ಚಂದ್ರ ಇವರ ಅಮೃತ ಹಸ್ತದಿಂದ ದೀಪ ಪ್ರಜ್ವಲನೆಗೊಳಿಸಿ ಉದ್ಘಾಟನೆ ಗೊಂಡಿತು.ತದನಂತರ ಮಾತನಾಡಿದ ಅವರು ಹೊಸತನವನ್ನು ಅರಿಯಿರಿ.ಇರುವೆಯ ಹಾಗೆ ಸದಾ ಕ್ರಿಯಾಶೀಲ ವ್ಯಕ್ತಿ ಆಗಿರಿ.ವಿಷಯವನ್ನು ಎಲ್ಲಿಂದ ಆದರೂ ಅರಿತುಕೊಳ್ಳಿ.ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗಿರಬೇಡಿ.ಹಚ್ಚ ಹಸುರಿನ ಪರಿಸರವನ್ನು ನೋಡುತ್ತಾ ಬದುಕಲು ಕಲಿಯಿರಿ.ಆಗ ಖುಷಿಯಿಂದ ಬದುಕಲು ಸಾಧ್ಯ.ವಿದ್ಯಾರ್ಥಿಗಳು ಹೂವಿನಂತೆ ಶಾಲೆ ಹೂದೋಟದಂತೆ.ಸದಾ ಪರಿಮಳ ಸೂಸುತ್ತಿರಲಿ ಎಂದು ಶುಭ ಹಾರೈಸಿದರು.
ತದನಂತರ ಮಾತನಾಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಆಗಿರುವ ಸೋಮಶೇಖರ ಶೆಟ್ಟಿ ಬಿ.ಇವರು ವಿದ್ಯಾರ್ಥಿಗಳ ಈ ಶಿಬಿರಕ್ಕೆ ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ.ವಿದ್ಯಾರ್ಥಿಗಳಿಗೆ ಜೇನು ಹೇಗೆ ಕೆಲಸ ಮಾಡುತ್ತದೆಯೋ ಹಾಗೆ ಜೊತೆಯಾಗಿ ಕಷ್ಟ ಪಟ್ಟು ಮಾಡಿ.ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಶುಭ ಹಾರೈಸಿದರು.
ಈ ಶಿಬಿರದಲ್ಲಿ ಬೇರೆ ಬೇರೆ ಏಳು ಪ್ರಕಾರದ ತರಬೇತಿಗಳಿದ್ದು ವಿದ್ಯಾರ್ಥಿಗಳನ್ನು ಆಯಾಯ ವಿಷಯಕ್ಕೆ ಸಂಬಂಧಿಸಿದಂತೆ ಏಳು ತಂಡಗಳಾಗಿ ಆಹಾರ ವಿಭಾಗ ಕಲಾವಿಭಾಗ ಜೀನ್ಸ್ ಬ್ಯಾಗ್ ತಯಾರಿ, ಕಿವಿಯೋಲೆ ತಯಾರಿ ,ಹಸಿರು ತಂಡ, ಆರೋಗ್ಯ ವಿಭಾಗ ಇತ್ಯಾದಿ ವಿವಿಧ ತಂಡಗಳಿರುವುದು ಈ ಶಿಬಿರದ ವಿಶೇಷ. ವಿದ್ಯಾರ್ಥಿ ಉಪನಾಯಕನಾಗಿರುವ ಮಾಸ್ಟರ್ ಜಸ್ಟಿನ್ ನೆರವೇರಿಸಿದ ಕಾರ್ಯಕ್ರಮದಲ್ಲಿ ಸಾನ್ವಿ ಸ್ವಾಗತಿಸಿ, ಧನ್ಯ ವಂದಿಸಿದರು. ಶಾಲಾ ಸಂಚಲಕರಾಗಿರುವ ಶ್ರೀಯುತ ಅನಂತಪದ್ಮನಾಭ ಭಟ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆಗೆ ಮಾತನಾಡಿ ಶುಭ ಹಾರೈಸಿದರು.ಶಾಲಾ ಶಿಕ್ಷಕರ ವೃಂದ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸಾಕ್ಷಿಗಳಾದರು.