ಮುಂಡ್ರುಪ್ಪಾಡಿ: ಲಾರಿ- ಬೈಕ್ ಡಿಕ್ಕಿ: ಬೈಕ್ ಸವಾರ ಗಂಭೀರ
ಧರ್ಮಸ್ಥಳ – ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಓರ್ವ ಸವಾರನಿಗೆ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ ಮುಂಡ್ರುಪ್ಪಾಡಿ ರಸ್ತೆ ಸಮೀಪ ಮಾ.29 ರಂದು ಸಂಜೆ ವೇಳೆ ನಡೆದಿದೆ.
ಬೈಕ್ ಸವಾರ ಗುರುವಾಯನಕೆರೆ ನಿವಾಸಿ ಎಂದು ತಿಳಿದುಬಂದಿದೆ.
ಧರ್ಮಸ್ಥಳದಿಂದ ಮುಂಡ್ರುಪ್ಪಾಡಿ ಕಡೆ ಸಾಗುತ್ತಿದ್ದ ಲಾರಿ ಹಾಗೂ ಮುಂಡ್ರುಪ್ಪಾಡಿ ಕಡೆಯಿಂದ ಧರ್ಮಸ್ಥಳದತ್ತ ಸಾಗುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡ ಬೈಕ್ ಸವಾರ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ