ಕನ್ಯಾಡಿ: 19 ನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ಸೇವಾಭಾರತಿ: ಮಾ.30 ರಂದು ವಿವಿಧ ಸೇವಾ ಕಾರ್ಯಗಳ ಹಸ್ತಾಂತರ ಹಾಗೂ ವಾರ್ಷಿಕ ಸಂಭ್ರಮ

ಬೆಳ್ತಂಗಡಿ ತಾಲೂಕನ್ನು ಕಾರ್ಯಕ್ಷೇತ್ರವಾಗಿಸಿಕೊಂಡು ಬೆಳೆದು ನಿಂತು ಕಳೆದ ನಾಲ್ಕು ವರ್ಷಗಳಿಂದ ಸೇವಾಧಾಮದ ಮೂಲಕ ಆರು ಜಿಲ್ಲೆಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿರುವ ಸೇವಾಭಾರತಿ 18 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿ 19 ನೇ ವರ್ಷಕ್ಕೆ ಪಾದರ್ಪಣೆ ಮಾಡುವ ಸುಸಂದರ್ಭದಲ್ಲಿ ವಿವಿಧ ಸೇವಾಕಾರ್ಯಗಳ ಹಸ್ತಾಂತರ ಹಾಗೂ ವಾರ್ಷಿಕ ಸಂಭ್ರಮ ಕಾರ್ಯಕ್ರಮವನ್ನು ಗುರುವಾರ ಮಾರ್ಚ್ 30 ರ ಸಂಜೆ 6 ಗಂಟೆಗೆ ಸೇವಾಧಾಮ ಪುನಶ್ಚೇತನ ಕೇಂದ್ರ ಸೌತಡ್ಕದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೇವಾಭಾರತಿಯ ಅಧ್ಯಕ್ಷೆ ಸ್ವರ್ಣಗೌರಿ ತಿಳಿಸಿದರು.
ಅವರು ಮಾ. 23ರಂದು ಸೇವಾ ಭಾರತಿ ಕಚೇರಿ ಕನ್ಯಾಡಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಬೆಂಗಳೂರಿನ ಕೆಮ್ ಫ್ರೆಂಡ್ ಕೆಮಿಕಲ್ ಪ್ರೈವೇಟ್ ಲಿಮಿಟೆಡ್‌ನ ಸಿ ಇ ಒ ರಾದ ರಾಜೇಶ್ ಫಡ್ಡೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಸವರಾಜುಕಿ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಕೃಷ್ಣ ಭಟ್ ಹಾಗೂ ಸಂಸ್ಥೆಯ ಪ್ರಮುಖರು ಉಪಸ್ಥಿತರಿರುತ್ತಾರೆ.
ಪುನಶ್ವೇತನಾ ಕೇಂದ್ರ ಹಾಗೂ ಸಮುದಾಯದಲ್ಲಿ ಮಾರ್ಚ್ 25 ರಂದು ಅಮೆಜಾನ್ ಎಂಪ್ಲೋಯಿ ಗ್ರಾಂಟ್’ ನಡಿ ಅರ್ಹ ಫಲಾನುಭವಿಗಳಿಗೆ 5 ಗಾಲಿಕುರ್ಚಿ 10 ಕಮೊಡೋ ಗಾಲಿಕುರ್ಚಿ, 25 ಬೆಡ್ ಶೀಟ್, ಪ್ರೋಜೆಕ್ಟರ್ ತಲಾ 50 ಬಿಪಿ ಮತ್ತು ಗ್ಲುಕೋ ಮೀಟರ್, 25 ಸೆಲ್ಫ್ ಕೇರ್ ಕಿಟ್, 1 ಯುಪಿಯಸ್ ಯುನಿಟ್, 20 ವಾಟರ್, ಟೆಡ್ ಹಾಗೂ | ಲಾಪ್ ಟಾಪ್‌ನ ಸಹಾಯ ಒದಗಿಸುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ. ಕ್ಯಾಪ್ಕೋ ವತಿಯಿಂದ 20 ಗಾಲಿಕುರ್ಚಿ, 4 ಕಮೊಡೋ ಗಾಲಿಕುರ್ಚಿ 52 ಸೆಲ್ಫ್ ಕೇರ್ ಕಿಟ್, 15 ಮೆಡಿಕಲ್ ಕಿಟ್ ಅನ್ನು ಫಲಾನುಭವಿಗಳಿಗಳಿಗೆ ನೀಡಲಾಗುತ್ತಿದೆ.
ಬೆಂಗಳೂರಿನ ಕೆಮ್ ಟೆಂಡ್ ಕೆಮಿಕಲ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ಸತತವಾಗಿ 3 ವರ್ಷಗಳಿಂದ ನಮ್ಮ ಸಂಸ್ಥೆಗೆ ಬೆಂಬಲಿಸುತ್ತಾ ಬರುತಿದ್ದು ಸಂಸ್ಥೆಯನ್ನು ಉನ್ನತೀಕರಿಸಲು ಸಹಾಯವನ್ನು
ಮಾಡಿದೆ. ಇವರು ಮಾರ್ಚ್30ರ ವಾರ್ಷಿಕೋತ್ಸವದಂದು ಉಪಸ್ಥಿತರಿರುತ್ತಾರೆ. ಕಮ್ ಟೆಂಡ್ ಕೆಮಿಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಿ ಎಸ್ ಆರ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 1 ಸ್ಟೇರ್ ಕೀಸ್ ಎಫ್ ಬ್ಯಾಂಪ್ 1 ಬ್ರೆಡ್ ಮಿಲ್ , 10 ಹಾಸಿಗೆ ಮತ್ತು ಮಂಚ, 1 ಮೋಜೆಕ್ಟರ್, 10 ವಾಟರ್ ಬೆಡ್ 5 ಗಾಲಿಕುರ್ಚಿ, 1 ಯುಪಿಯಸ್ ಯುನಿಟ್ ಹಾಗೂ 1 ಬ್ರೆಡ್ ಮಿಲ್ ಎಫ್ ಬೋಡಿ ವೈಟ್ ಅನ್ನು ಒದಗಿಸುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಸೇವಾಭಾರತಿಯ ಕೋಶಾಧಿಕಾರಿ ವಿನಾಯಕ ರಾವ್, ಕಾರ್ಯದರ್ಶಿ ಬಾಲಕೃಷ್ಣ ಕೆ, ಸೀನಿಯರ್ ಮ್ಯಾನೇಜರ್ ಚರಣ್ ಕುಮಾರ್ ಉಪಸ್ಥಿತರಿದ್ದರು.