ಜಿದ್ದಾಜಿದ್ದಿನ ಆಟದಲ್ಲಿ ತುಂಡಾದ ಹಗ್ಗ!! ಕಾರಿಂಜದಲ್ಲಿ ಇತಿಹಾಸ ಸೃಷ್ಟಿಸಿತು ‘ಫುಲ್ ಗ್ರಿಪ್: ಇತರ ತಂಡಗಳಿಗೆ ಮಾದರಿಯಾದ ಕುಂಜರ್ಪ ಫ್ರೆಂಡ್ಸ್ ಉಜಿರೆ ತಂಡ
ಉಜಿರೆ: ಜಿದ್ದಾ ಜಿದ್ದಿನ ಪಂದ್ಯಾಟದಲ್ಲಿ ಹಗ್ಗ ತುಂಡಾಗಿ ಇತಿಹಾಸ ಸೃಷ್ಟಿಸಿದ ಘಟನೆಯೊಂದು ಬಂಟ್ವಾಳ ತಾಲೂಕಿನ ಕಾರಿಂಜದಲ್ಲಿ ನಡೆಯಿತು.
ಕಾರಿಂಜ ಫ್ರೆಂಡ್ಸ್ ಕಾರಿಂಜ ವತಿಯಿಂದ ನಡೆದ ಗ್ರಿಪ್ ಮಾದರಿಯ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಎರಡೂ ಬಲಿಷ್ಠ ತಂಡಗಳ ಹೋರಾಟದ ನಡುವೆ ಹಗ್ಗವೇ ತುಂಡಾಗಿತ್ತು.
ಫುಲ್ ಗ್ರಿಪ್ ಮಾದರಿಯ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಘಟನೆ ನಡೆದಿದ್ದು, ತಂಡಗಳ ಬಲಿಷ್ಠತೆಯನ್ನು ಕಂಡ ಪ್ರೇಕ್ಷಕರ ಖುಷಿಗೆ ಪಾರವೇ ಇಲ್ಲದಂತಾಗಿತ್ತು. ಇಂತಿಷ್ಟು ನಿಮಿಷ, ಸೆಕೆಂಡ್ ಗಳನ್ನು ನಿಗದಿ ಪಡಿಸಿ ತೀರ್ಪುಗಾರರ ಸೂಚನೆಯ ಬಳಿಕ ಮುಂದುವರಿಯುವ ಪದ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಇಂತಹ ಯಾವುದೇ ಘಟನೆ ಸಂಭವಿಸಿರಲಿಲ್ಲವಂತೆ. ಸದ್ಯ ಮಾರ್ಚ್ 19 ರಂದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಚಾರ ಪಡೆದಿದ್ದು,ಬಲಿಷ್ಠ ತಂಡಗಳಾದ ಯುವ ಸ್ಫೂರ್ತಿ ಬೆಳ್ಳೆ ಹಾಗೂ ಕುಂಜರ್ಪ ಫ್ರೆಂಡ್ಸ್ ಉಜಿರೆ ತಂಡಗಳ ಜಿದ್ದಾ ಜಿದ್ದಿನ ಹೋರಾಟ ಇತರ ತಂಡಗಳಿಗೂ ಮಾದರಿಯಾಯಿತು.