ಮಾ.30-31: ಶ್ರೀ ಉಳ್ಳಾಲ್ತಿ – ಮೈಸಂದಾಯ – ಪಂಜುರ್ಲಿ – ಗುಳಿಗ ದೈವಗಳ ಸಾನಿಧ್ಯ ಪಿಲಿಪಂಜರ ಕ್ಷೇತ್ರದಲ್ಲಿ ಶ್ರೀ ಉಳ್ಳಾಕ್ಕುಲು – ಉಳ್ಳಾಲ್ತಿ – ಮೈಸಂದಾಯ, ಪಂಜುರ್ಲಿ- ಗುಳಿಗ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ದೈವಗಳ ನೇಮೋತ್ಸವ
ಬೆಳ್ತಂಗಡಿ: ತಾಲೂಕಿನ ಲಾಯಿಲ ಗ್ರಾಮದ ಶ್ರೀ ಉಳ್ಳಾಲ್ತಿ – ಮೈಸಂದಾಯ – ಪಂಜುರ್ಲಿ – ಗುಳಿಗ ದೈವಗಳ ಸಾನಿಧ್ಯ ಪಿಲಿಪಂಜರ ಕ್ಷೇತ್ರದಲ್ಲಿ ಮಾರ್ಚ್ 31 ರಂದು ಶುಕ್ರವಾರ ಪರಮಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ , ಕ್ಷೇತ್ರದ ತಂತ್ರಿಗಳಾದ ಕಡೆಶಿವಾಲಯ ವೇದಮೂರ್ತಿ ಶ್ರೀ ಪಚ್ಚಡಿಬೈಲು ಪಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಉಳ್ಳಾಕ್ಕುಲು – ಉಳ್ಳಾಲ್ತಿ – ಮೈಸಂದಾಯ, ಪಂಜುರ್ಲಿ- ಗುಳಿಗ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ದೈವಗಳ ನೇಮೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರುವುದಾಗಿ ಸಮಿತಿ ಕಾರ್ಯದರ್ಶಿ ಪುಷ್ಪರಾಜ್ ಲಾಯಿಲ ಇವರು ಹೇಳಿದರು.
ಅವರು ಬೆಳ್ತಂಗಡಿ ಅಬೆಂಡ್ಕರ್ ಭವನದಲ್ಲಿ ಮಾ. 21 ರಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಾ.30 ರಂದು ಸಂಜೆ 5 ಗಂಟೆಗೆ ಶ್ರೀ ಕ್ಷೇತ್ರಕ್ಕೆ ತಂತ್ರಿಗಳು ಮತ್ತು ಪರಿವಾರ ಆಗಮನ, ಸಾಯಂಕಾಲ 6 ಗಂಟೆಗೆ ಶಿಲ್ಪಿಯವರಿಂದ ಹಾಗೂ ವಿಶ್ವಕರ್ಮರಿಂದ ಪ್ರಾಸಾದ ಮತ್ತು ದೈವಗಳ ಮಂಚಮಗಳ ಪರಿಗ್ರಹ ಆಚರ‍್ಯವರಣೆ, ಯತ್ವಿಗರಣೆ ಜರುಗಲಿದ್ದು, ನಂತರ ತೋರಣ ಮುಹೂರ್ತ, ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಸಪ್ತಶುದ್ಧಿ ಪ್ರಾಸಾದ ಶುದ್ಧಿ, ಗೋಪೂಜೆ, ಬಿಂಬಾಧಿವಾಸ, ಬಿಂಬಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಪೂಜೆ,ಭೂವರಾಹಹೋಮ, ಅಷ್ಟದಿಕ್ ಬಲಿ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ಜರುಗಲಿದೆ ಎಂದು ಹೇಳಿದರು.
ಸಮಿತಿ ಅಧ್ಯಕ್ಷರು ಸಂಜೀವ ಶೆಟ್ಟಿ ಕುಂಟಿನಿ ಹಾಗೂ ಕೋಶಾಧಿಕಾರಿ ಗಿರೀಶ್ ಡೋಂಗ್ರೆ ಮಾತನಾಡಿ ಮಾರ್ಚ್ 31 ರಂದು ಸ್ವಸ್ತಿ ಪುಣ್ಯಾಹವಾಚನ, ಗಣಹೋಮ, ನವಗ್ರಹ ಪೂಜೆ, ಪ್ರತಿಷ್ಠಾ ಕಲಶ, ಪ್ರತಿಷ್ಠಾ ಹೋಮ. ಶ್ರೀ ಉಳ್ಳಾಕ್ಕುಲು- ಉಳ್ಳಾಲ್ತಿ- ಮೈಸಂದಾಯ, ಪಂಜುರ್ಲಿ ಗುಳಿಗ ದೈವಗಳ ಪ್ರತಿಷ್ಠೆ, ಶಿಖರ ಪ್ರತಿಷ್ಠೆ ಪಂಚಾಮೃತಾಭಿಷೇಕ, ಪ್ರತಿಷ್ಠಾ ಕಲಶಾಭಿಷೇಕ ಬ್ರಹ್ಮಕಲಶಾಭಿಷೇಕ ಅಲಂಕಾರ ಪೂಜೆ ಜರುಗಲಿದ್ದು, ಶ್ರೀ ದೈವಗಳಿಗೆ ಪರ್ವಾಧಿಗಳ ಸೇವೆ ಹಾಗೂ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂರ‍್ಪಣೆ ನಡೆಯಲಿದ್ದು, ಭಂಡಾರ ಇಳಿಸಿ, ಮೈಸಂದಾಯ- ಉಳ್ಳಾಕ್ಕುಲು- ಉಳ್ಳಾಲ್ತಿ- ಪಂಜರ‍್ಲಿ- ಗುಳಿಗ ದೈವಗಳಿಗೆ ನೇಮೋತ್ಸವ ಜರುಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲಾಯಿಲ ಗ್ರಾ.ಪಂ ಸದಸ್ಯರು, ಸಂಚಾಲಕರು ಅರವಿಂದ ಶೆಟ್ಟಿ ರಾಘವೇಂದ್ರ ನಗರ, ಲಾಯಿಲ ಗ್ರಾ.ಪಂ ಉಪಾಧ್ಯಕ್ಷ ,ಸಹಸಂಚಾಲಕರು ಗಣೇಶ್ ಆರ್ ಲಾಯಿಲಪ್ರಧಾನ ಕರ‍್ಯರ‍್ಶಿ ಪ್ರಕಾಶ್ ಕಾಶಿಬೆಟ್ಟು, ಜೊತೆ ಕೋಶಾಧಿಕಾರಿ ಲಕ್ಷ್ಮಣ ಜಿ.ಎಸ್ ಎಳಚಿತ್ತಾಯನಗರ, ರಮೇಶ್ ಆರ್ ಲಾಯಿಲ ಉಪಸ್ಥಿತರಿದ್ದರು.