• September 13, 2024

ಬೆಳಾಲು: ಶೇಂದಿ ಅಂಗಡಿಯಲ್ಲಿ ಅಕ್ರಮ ಅಮಲು ಪದಾರ್ಥ ಪತ್ತೆ: ಧರ್ಮಸ್ಥಳ ಪೊಲೀಸರಿಂದ ಪರಿಶೀಲನೆ: ಆರೋಪಿಗಳು ಪರಾರಿ

 ಬೆಳಾಲು: ಶೇಂದಿ ಅಂಗಡಿಯಲ್ಲಿ  ಅಕ್ರಮ ಅಮಲು ಪದಾರ್ಥ ಪತ್ತೆ: ಧರ್ಮಸ್ಥಳ ಪೊಲೀಸರಿಂದ ಪರಿಶೀಲನೆ: ಆರೋಪಿಗಳು ಪರಾರಿ

ಬೆಳಾಲು: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಎರ್ಮಲ ಎಂಬಲ್ಲಿ ಅಕ್ರಮವಾಗಿ ಅಮಲು ಪದಾರ್ಥಗಳನ್ನು ವ್ಯಾಪಾರ ಮಾಡಲು ಪ್ರಯತ್ನಿಸಿರುವುದಾಗಿ ಮಾಹಿತಿ ತಿಳಿದ ಧರ್ಮಸ್ಥಳ ಪೊಲೀಸರು ಧಾಳಿ ನಡೆಸಿ ಪರಿಶೀಲಿಸಿ 180 ML MYSORE LANCER ಎಂಬ ಹೆಸರಿರುವ ಒಟ್ಟು 30 ಸ್ಯಾಚೆಟ್ ಗಳು ಕಂಡು ಬಂದಿದ್ದು ಅಂದಾಜು 2,250 ರೂಪಾಯಿ ಮೌಲ್ಯದ ಅಮಲು ಪದಾರ್ಥಗಳನ್ನು ವಶಪಡಿಸಿಕೊಂಡಿರುವ ಘಟನೆ ಮಾ.20 ರಂದು ನಡೆದಿದೆ.

ಬೆಳಾಲು ಗ್ರಾಮದ ಎರ್ಮಲ ಎಂಬಲ್ಲಿ ಶ್ರೀಧರ ಪೂಜಾರಿ ಎಂಬವರ ಶೇಂದಿ ಅಂಗಡಿಯಲ್ಲಿ ಯಾವುದೇ ದಾಖಲಾತಿ ಇಲ್ಲದೆ ಅಕ್ರಮವಾಗಿ ಅಮಲು ಪದಾರ್ಥಗಳನ್ನು ಶೇಖರಿಸಿಟ್ಟು ವ್ಯಾಪಾರ ಮಾಡಲು ಪ್ರಯತ್ನಿಸಿರುವುದಾಗಿ ಮಾಹಿತಿ ತಿಳಿದ ಪೊಲೀಸರು ಮೇಲಾಧಿಕಾರಿಯವರಿಗೆ ತಿಳಿಸಿ ಅವರ ಮೌಖಿಕ ಅನುಮತಿಯನ್ನು ಪಡೆದು ಬಳಿಕ ಸಿಬ್ಬಂದಿಗಳ ಜೊತೆ ಠಾಣೆಯಿಂದ ಹೊರಟು ಶ್ರೀಧರ ಎಂಬವರ ಶೇಂಧಿ ಅಂಗಡಿಗೆ ಹೋಗುತ್ತಿದ್ದ ವೇಳೆ ಮಾಹಿತಿ ತಿಳಿದ ಆರೋಪಿ ಹಿಂಬದಿ ಬಾಗಿಲಿನ ಮುಖೇನ ಓರ್ವನು ಪರಾರಿಯಾಗಿದ್ದಾನೆ.

ಬಳಿಕ ಅಂಗಡಿಗೆ ಮುತ್ತಿಗೆ ಹಾಕಿದ ಪೊಲೀಸರು ಅಮಲು ಪದಾರ್ಥಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!