• September 8, 2024

ಮಾ.18-19 : ಉಜಿರೆಯಲ್ಲಿ ಖಿಯಾದ SSF ರಾಜ್ಯ ಪ್ರತಿನಿಧಿ ಸಮಾವೇಶ : ರಾಜ್ಯದ 2000 ಪ್ರತಿನಿಧಿಗಳು ಭಾಗಿ

 ಮಾ.18-19 : ಉಜಿರೆಯಲ್ಲಿ ಖಿಯಾದ SSF ರಾಜ್ಯ ಪ್ರತಿನಿಧಿ ಸಮಾವೇಶ : ರಾಜ್ಯದ 2000 ಪ್ರತಿನಿಧಿಗಳು ಭಾಗಿ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ಗ್ರಾಂಡ್ ಪ್ರತಿನಿಧಿ ಸಮಾವೇಶ ಮಾರ್ಚ್ 18-19 ರಂದು ಕಾಶಿಬೆಟ್ಟು ಮಲ್ ಜಲಿ ಕ್ಯಾಂಪಸ್ ನಲ್ಲಿ ಜರುಗಲಿದೆ ಎಂದು ಖಿಯಾದ ರಾಜ್ಯ ಪ್ರತಿನಿಧಿ ಸಮಾವೇಶದ ಅಮೀರ್ ಮುಸ್ತಾಫ ನ ಈಮಿ ತಿಳಿಸಿದರು.

ಅವರು ಮಾ.15 ರಂದು ಬೆಳ್ತಂಗಡಿ ಗುರುನಾರಾಯಣ ಸಭಾಭವನದ ಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಯುನಿಟ್, ಸೆಕ್ಟರ್, ಡಿವಿಷನ್, ಜಿಲ್ಲೆಗಳಿಗೆ ನಾಯಕರಾಗಿ ಆಯ್ಕೆಯಾದ ಎರಡು ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ರಾಜ್ಯ ಮತ್ತು ಹೊರರಾಜ್ಯದ ಖ್ಯಾತ ತರಬೇತುದಾರರಿಂದ ವಿಶೇಷ ತರಬೇತಿ ನಡೆಯಲಿದ್ದು, ಮುಂದಿನ ಎರಡು ವರ್ಷಕ್ಕೆ ಸಂಘಟನೆ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳ ತರಗತಿಗಳು ಈ ಸಮಾವೇಶದಲ್ಲಿ ನಡೆಯಲಿದೆ.

ರಾಜ್ಯ SSF ಇದರ ವಾರ್ಷಿಕ ಕೌನ್ಸಿಲ್ ಸಭೆ ಕೂಡ ನಡೆದು ರಾಜ್ಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಮಾ.19 ರಂದು ಸಮಾರೋಪ ಸಮಾರಂಭದಲ್ಲಿ ನವ ನಾಯಕತ್ವದ ಘೋಷಣೆ ನಡೆಯಲಿದೆ. ಎಸ್ ಎಮ್ ಎ ರಾಜ್ಯಾಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಧ್ವಜಾರೋಹಣ ನಡೆಸಲಿದ್ದಾರೆ. ಉದ್ಘಾಟನೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ ಕಾವಳಕಟ್ಟೆ ಹಝ್ರತ್ ನೆರವೇರಿಸಲಿದ್ದಾರೆ. ಕರ್ನಾಟಕ ರಾಜ್ಯ ಉಲಮಾ ಒಕ್ಕೂಟದ ಅಧ್ಯಕ್ಷ ಖಾಝಿ ಮಾಜಿ ಉಸ್ತಾದ್ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ತಾಲೂಕಿನ ಎಲ್ಲಾ ಸಯ್ಯಿದರುಗಳು , ಸುನ್ನೀ ಸಂಘ ಕುಟುಂಬದ ಸಂಘಟನೆಗಳಾದ ಕರ್ನಾಟಕ ಸುನ್ನಿ, ವಿದ್ಯಾರ್ಥಿ ಸಂಘಟನೆ, ಯುವಜನ ಸಂಘ, ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಮೆನೇಜ್ ಮೆಂಟ್ ಅಸೋಸಿಯೇಶನ್ , ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್, ಸುನ್ನೀ ಜಂ ಇಯ್ಯತುಲ್ ಉಲಮಾ ಮೊದಲಾದ ಸಂಘಟನೆಗಳ ನಾಯಕರುಗಳು ಭಾಗವಹಿಸಲಿದ್ದಾರೆ. ಮಾರ್ಚ್ 19 ರಂದು ಸಂಜೆ 4 ಕ್ಕೆ ಹಳೆಪೇಟೆಯಿಂದ ಉಜಿರೆ ಬೆಳಾಲು ತಿರುವು ರಸ್ತೆಯವರೆಗೆ ಕಾರ್ಯಕರ್ತರ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆತಿಥೇಯ ಖಿಯಾದ ಟೀಮ್ ಅನ್ಸಾರಿ, ಸ್ವಾಗತ ಸಮಿತಿ ಚೇರ್ಮನ್ ಸಲೀಂ ಕನ್ಯಾಡಿ, ಜನರಲ್ ಕೋಶಾಧಿಕಾರಿ ಅಬೂಬಕ್ಕರ್ ಮಲೆಬೆಟ್ಟು, ಸಂಘಟಕರುಗಳಾದ ಸಾದಿಕ್ ಮಾಸ್ಟರ್ ಮಲೆಬೆಟ್ಟು, ಅಶ್ರಫ್ ಅಲಿಕುಂಞಿ ಮುಂಡಾಜೆ, ಎಂ ಎ ಕಾಸಿಂ ಮುಸ್ಲಿಯಾರ್ ಮಾಚಾರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!