• October 13, 2024

ಮುಂಡಾಜೆ: ಕೂಲಿ ಕೆಲಸಕ್ಕೆಂದು ಹೋದ ಮಹಿಳೆ ಕುಸಿದು ಬಿದ್ದು ಸಾವು: ಮುಂಡಾಜೆ ಗ್ರಾಮದ ಸನ್ಯಾಸಿಕಟ್ಟೆ ನಿವಾಸಿ ಪಾರ್ವತಿ ಮೃತ ದುರ್ದೈವಿ

 ಮುಂಡಾಜೆ: ಕೂಲಿ ಕೆಲಸಕ್ಕೆಂದು ಹೋದ ಮಹಿಳೆ ಕುಸಿದು ಬಿದ್ದು ಸಾವು: ಮುಂಡಾಜೆ ಗ್ರಾಮದ ಸನ್ಯಾಸಿಕಟ್ಟೆ ನಿವಾಸಿ ಪಾರ್ವತಿ ಮೃತ ದುರ್ದೈವಿ

 

ಮುಂಡಾಜೆ: ಮುಂಡಾಜೆ ಗ್ರಾಮದ ಸೋಮಂತ್ತಡ್ಕ ಎಂಬಲ್ಲಿ ಕೂಲಿ ಕೆಲಸಕ್ಕೆಂದು ಹೋದ ಮಹಿಳೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಾವನ್ನಪ್ಪಿದ ಮಹಿಳೆ ಸೋಮಂತಡ್ಕ ಗಣೇಶ್ ಎಂಬವರ ಮನೆಗೆ ಕೂಲಿ ಕೆಲಸಕ್ಕೆಂದು ಹೋಗಿದ್ದ ವೇಳೆ ಈ ಘಟನೆ ಸಂಭವಿಸಿದೆ. ಇವರು ಮುಂಡಾಜೆ ಗ್ರಾಮದ ಸನ್ಯಾಸಿಕಟ್ಟೆ ನಿವಾಸಿ ಪಾರ್ವತಿ ಮೃತಪಟ್ಟ ಮಹಿಳೆ.

ಘಟನೆ ಸಂಭವಿಸಿದ ತಕ್ಷಣ ಕಕ್ಕಿಂಜೆ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!