ಶಾಸಕ ಭರತ್ ಶೆಟ್ಟಿಯನ್ನು ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಆಹ್ವಾನಿಸಿದ ಮೊಯ್ದೀನ್ ಬಾವ
ಮಂಗಳೂರು: ದೇವಸ್ಥಾನದ ಪ್ರಸಾದವನ್ನು ಕಾಲಡಿಗೆ ಹಾಕಿ ತುಳಿದಿರುವ ಭರತ್ ಶೆಟ್ಟಿ ಆರೋಪಕ್ಕೆ ನಾನು ಧರ್ಮಸ್ಥಳದಲ್ಲಿ ಹಾಗೂ ದರ್ಗಾದಲ್ಲಿ ಆಣೆಮಾಡಲು ಸಿದ್ಧ. ನಾನು ಬರುತ್ತೇನೆ ಅವರೂ ಬರಲಿ ಎಂದು ಮಾಜಿ ಶಾಸಕ ಮೊಯ್ದೀನ್ ಬಾವ ಸವಾಲೆಸೆದಿದ್ದಾರೆ.
ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಕಾಟಿಪಳ್ಳದ ಶ್ರೀಗಣೇಶಪುರ ದೇವಸ್ಥಾನಕ್ಕೆ 58 ಕೋಟಿ ರೂಪಾಯಿ ಅನುದಾನ ತಾನು ತಂದಿದ್ದೆ. ಆ ಅನುದಾನವನ್ನು ಭರತ್ ಶೆಟ್ಟಿಯವರು ತನ್ನ ಅನುದಾನದಲ್ಲಿ 40ಕೋಟಿ ರೂಪಾಯಿಯನ್ನು ಬೇರೆ ವಾರ್ಡ್‌ಗಳ ವಿವಿಧ ಕಾಮಗಾರಿಗಳಿಗೆ ಹಂಚಿರುವ ದಾಖಲೆ ನನ್ನಲ್ಲಿದೆ. ಹಿಂದುತ್ವದ ಪರವಾಗಿ ಮಾತನಾಡುವ ಶಾಸಕರು ಹಿಂದುಗಳಿಗೆ ಎಷ್ಟು ಅನುದಾನ ತಂದಿದ್ದಾರೆಂದು ಪಟ್ಟಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.