• October 14, 2024

ಬಳಂಜ: ವಾಲಿಬಾಲ್ ಕ್ಲಬ್ ನಿಂದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಹರ್ಷಿತ್ ದೇವಾಡಿಗರವರಿಗೆ ವೈದ್ಯಕೀಯ ನೆರವು ಹಸ್ತಾಂತರ

 ಬಳಂಜ: ವಾಲಿಬಾಲ್ ಕ್ಲಬ್ ನಿಂದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಹರ್ಷಿತ್ ದೇವಾಡಿಗರವರಿಗೆ ವೈದ್ಯಕೀಯ ನೆರವು ಹಸ್ತಾಂತರ

 

ಬಳಂಜ: ಬಳಂಜ ವಾಲಿಬಾಲ್ ಕ್ಲಬ್ ನ ಸದಸ್ಯ, ಯುವ ವಾಲಿಬಾಲ್ ಆಟಗಾರ ಹರ್ಷಿತ್ ದೇವಾಡಿಗ ಅಟ್ಲಾಜೆ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಂಭೀರ ಪ್ರಮಾಣದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಆ ಸಂದರ್ಭದಲ್ಕಿ ಹರ್ಷಿತ್ ದೇವಾಡಿಗರ ಚಿಕಿತ್ಸೆಗೆ ಸ್ಪಂದಿಸಿ ವಾಲಿಬಾಲ್ ಕ್ಲಬ್ ನಿಂದ ರೂ 35 ಸಾವಿರ ಮೊತ್ತ ಸಂಗ್ರಹಿಸಿದ್ದು ಮೊದಲ ಕಂತು ರೂಪದಲ್ಲಿ 15 ಸಾವಿರ ಹಸ್ತಾಂತರಿಸಿ, ಉಳಿದ ಮೊತ್ತ 20ಸಾವಿರ ಮೊತ್ತವನ್ನು ಆ 1 ರಂದು ಅವರ ಮನೆಯಲ್ಲಿ ಹರ್ಷಿತ್ ಅವರಿಗೆ ಬಳಂಜ ವಾಲಿಬಾಲ್ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕೋಟ್ಯಾನ್ ರಾಕರ್ಸ್ ತಂಡದ ಮಾಲಕ ಸಂತೋಷ್ ಪಿ ಕೋಟ್ಯಾನ್ ಬಳಂಜ, ಉದ್ಯಮಿ ಕೇಶವ ದೇವಾಡಿಗ ಕಲ್ಲಾಪು, ವಾಲಿಬಾಲ್ ಕ್ಲಬ್ ಕಾರ್ಯದರ್ಶಿ ಯೋಗೀಶ್ ಆರ್, ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ, ಸದಸ್ಯ ಕಿಶನ್ ಬಳಂಜ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!