ತೀರ ಬಡಕುಟುಂಬಕ್ಕೆ ಸಹಾಯಧನ ಹಸ್ತಾಂತರಿಸಿದ ಯುವಕೇಸರಿ ಕಣಿಯೂರು
ಕಣಿಯೂರು: ಸೇವೆಯೇ ಸಂಘಟನೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಕೆಲಸ ಮಾಡುತ್ತಿರುವ ನಮ್ಮ ಯುವಕೇಸರಿ ಕಣಿಯೂರು ಇದರ ವತಿಯಿಂದ ಮೊದಲ ಸೇವಾ ಯೋಜನೆಯ ಮೂಲಕ ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಕಾಪಿಗುಡ್ಡೆಯಲ್ಲಿ ತೀರಾ ಬಡತನ ಮತ್ತು ಅಸೌಖ್ಯ ದಿಂದ ಜೀವನ ನಡೆಸುತ್ತಿರುವ ನಾರಾಯಣ ನಾಯ್ಕರವರ ಕುಟುಂಬಕ್ಕೆ 10,000/- ರೂಪಾಯಿಯ ಸಹಾಯಧನವನ್ನು ನೀಡಲಾಯಿತು.
ಈ ಸಂಧರ್ಭದಲ್ಲಿ ಯುವಕೇಸರಿ ಕಣಿಯೂರು ಇದರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.