ಬೆಳ್ತಂಗಡಿ ನೂತನ ತಹಶೀಲ್ದಾರ್ ಆಗಿ ಸುರೇಶ್ ಕುಮಾರ್ ಟಿ.ಎಸ್ ನೇಮಕ
ಬೆಳ್ತಂಗಡಿ: ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ವರ್ಗಾವಣೆಯಾದ ಬಳಿಕ ಬೆಳ್ತಂಗಡಿ ನೂತನ ತಹಶೀಲ್ದಾರ್ ಹುದ್ದೆಗೆ ಸುರೇಶ್ ಕುಮಾರ್ ಟಿಎಸ್ ಅವರನ್ನು ಬೆಳ್ತಂಗಡಿ ತಹಶೀಲ್ದಾರ್ ಆಗಿ ರಾಜ್ಯ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಜಿ.ಎನ್ ಸುಶೀಲ ಅವರು ಆದೇಶ ಹೊರಡಿಸಿದ್ದಾರೆ.
ಇವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ತಹಶೀಲ್ದಾರ್ ಆಗಿದ್ದು, ಇದೀಗ ಸುರೇಶ್ ಕುಮಾರ್ ಟಿ.ಎಸ್ ಅವರನ್ನು ವರ್ಗಾವಣೆ ಮಾಡಿದ್ದಾರೆ.