• December 9, 2024

ಶ್ರೀ ಗುರುದೇವ ಸಹಕಾರ ಸಂಘ ನಿ. ಬೆಳ್ತಂಗಡಿ 20 ‌ನೇ ಪಡೀಲ್ ಶಾಖೆಯ ಶುಭಾರಂಭ

 ಶ್ರೀ ಗುರುದೇವ ಸಹಕಾರ ಸಂಘ ನಿ. ಬೆಳ್ತಂಗಡಿ 20 ‌ನೇ ಪಡೀಲ್ ಶಾಖೆಯ ಶುಭಾರಂಭ

 

ಪಡೀಲ್: ಶ್ರೀ ಗುರುದೇವ ಸಹಕಾರ ಸಂಘ ನಿ. ಬೆಳ್ತಂಗಡಿ 20 ‌ನೇ ಪಡೀಲ್ ಶಾಖೆಯ ಶುಭಾರಂಭ ಫೆ 28ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಎನ್ ಪದ್ಮನಾಭ ಮಾಣಿಂಜ ವಹಿಸಿದ್ದರು.

ಕಚೇರಿ ಉದ್ಘಾಟನೆಯನ್ನು ಚಿತ್ತರಂಜನ್ ಕೆ ಅಧ್ಯಕ್ಷರು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಕಂಕನಾಡಿ, ಭದ್ರತಾ ಕೋಶದ ಉದ್ಘಾಟನೆಯನ್ನು ಜೆ ಆರ್ ಲೋಬೋ ಮಾಜಿ ಶಾಸಕರು, ಗಣಕಯಂತ್ರದ ಉದ್ಘಾಟನೆಯನ್ನು ಪದ್ಮರಾಜ್ ಆರ್ ಕೋಶಾಧಿಕಾರಿ. ಶ್ರೀ ಗೋಕರ್ನಾಥೇಶ್ವರ ಕ್ಷೇತ್ರ ಕುದ್ರೊಳಿ ನೆರವೇರಿಸಿದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಚಿತ್ತರಂಜನ್ ಬೋಳಾರ್ ಅಧ್ಯಕ್ಷರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ (ನಿ.) ಇವರು ನೆರೆವೇರಿಸಿ ಶುಭಹಾರೈಸಿದರು. ನಿರಖು ಠೇವಣಿ ಸರ್ಟಿಫಿಕೇಟ್ ವಿತರಣೆ ಶ್ರೀ ಕೆ ವಸಂತ ಬಂಗೇರ ಮಾಜಿ ಶಾಸಕರು ಬೆಳ್ತಂಗಡಿ ಹಾಗೂ ಉಳಿತಾಯ ಖಾತೆ ಪುಸ್ತಕ ವಿತರಣೆಯನ್ನು ಶ್ರೀ ಶೈಲೇಂದ್ರ ಸುವರ್ಣ ಮಾಲೀಕರು ಎಸ್ ಆರ್ ಆರ್ ಮಸಲಾ ಇವರು ನೆರವೇರಿಸಿದರು.


ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ವೇದವ್ಯಾಸ ಕಾಮತ್ ಶಾಸಕರು ಮಂಗಳೂರು ದಕ್ಷಿಣ, ಶ್ರೀ ಜಯಾನಂದ ಅಂಚನ್ ಮಹಾಪೌರರು ಮಂಗಳೂರು ಮಹಾನಗರ ಪಾಲಿಕೆ, ರಾಜೇಶ್ ಬಿ ಅಧ್ಯಕ್ಷರು ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು, ಶ್ರೀ ಜನಾರ್ದನ ಬಿ ಅಧ್ಯಕ್ಷರು ಕುಡುಪು ವಿ ಸಹಕಾರ ಸಂಘ ನಿ, ಶ್ರೀ ಭರತೇಶ್ ಅಮೀನ್ ಅಧ್ಯಕ್ಷರು ಬಿಲ್ಲವ ಸೇವಾ ಸಮಾಜ ಸಂಘ (ರಿ) ಗರೋಡಿ ಕಂಕನಾಡಿ , ಶ್ರೀ ರಾಕೇಶ್ ಅಧ್ಯಕ್ಷರು ನವನಿಧಿ ವಿವಿಧೋದ್ದೇಶ ಸಹಕಾರ ಸಂಘ ನಿ, ಶ್ರೀ ಸತೀಶ್ ಶೆಟ್ಟಿ ಪಡಿಲ್ ಗೇಟ್, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿರುವ ಶ್ರೀಮತಿ ರೂಪ ಶ್ರೀ ಪೂಜಾರಿ, ಶ್ರೀಮತಿ ಶೋಭಾ ಪೂಜಾರಿ , ಶ್ರೀಮತಿ ಚಂದ್ರಾವತಿ ವಿಶ್ವನಾಥ್ , ಶ್ರೀ ಸಂದೀಪ್ ಗರೋಡಿ, ಶ್ರೀ ಬಿ ಅಬ್ದುಲ್ ಹಮೀದ್ ಕರಾವಳಿ ಸರ್ವಿಸ್ ಸ್ಟೇಷನ್ ಪಡಿಲ್, ಶ್ರೀ ಹರೀಶ್ ಕೆ ಪೂಜಾರಿ ಬೈಲಬರಿ ಉಪಾಧ್ಯಕ್ಷರು ಯುವ ವಾಹಿನಿ ಕೇಂದ್ರ ಸಮಿತಿ ಉಪಸ್ಥಿತರಿದ್ದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳಾದ ಶ್ರೀ ಕೆ.ಪಿ.ದಿವಾಕರ, ಸಂಜೀವ ಪೂಜಾರಿ, ಶೇಖರ ಬಂಗೇರ, ಜಗದೀಶ್ಚಂದ್ರ ಡಿ.ಕೆ, ಶ್ರೀಮತಿ ಸುಜಿತಾ ವಿ ಬಂಗೇರ, ಚಂದ್ರಶೇಖರ, ಆನಂದ ಪೂಜಾರಿ ಹಾಗೂ ಶಾಖಾ ವ್ಯವಸ್ಥಾಪಕರುಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷರಾದ ಶ್ರೀ ಭಗೀರಥ ಜಿ ಸ್ವಾಗತಿಸಿ, ವಿಶೇಷ ಅಧಿಕಾರಿಗಳಾಗಿರುವ ಶ್ರೀ ಎಂ ಮೋನಪ್ಪ ಪೂಜಾರಿ ಕಂಡೆತ್ಯಾರು ಪ್ರಸ್ತಾವನೆಗೈದರು. ನಿರ್ದೇಶಕರಾದ ಶ್ರೀ ಜಗದೀಶ್ಚಂದ್ರ ಡಿ ಕೆ ವಂದನಾರ್ಪಣೆ ಸಲ್ಲಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅಶ್ವತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Related post

Leave a Reply

Your email address will not be published. Required fields are marked *

error: Content is protected !!