ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ವಿಶ್ವ ವಿಜ್ಞಾನ ದಿನಾಚರಣೆ
ಧರ್ಮಸ್ಥಳ: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ವಿಜ್ಞಾನ ದಿನಾಚರಣೆಯನ್ನ ಫೆ.28 ರಂದು ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಪ್ರಾರ್ಥನಾ ಮುಖ್ಯಸ್ಥರು ಬಯೋಟೆಕ್ನಾಲಜಿ ವಿಭಾಗ ಶ್ರೀ ಧರ್ಮಸ್ಥಳ ಪಿಜಿ ಕಾಲೇಜು ಉಜಿರೆ ಇವರು ಸರ್.ಸಿ.ವಿ.ರಾಮನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದ ಬಳಿಕ ಮಾತನಾಡುತ್ತಾ ವಿಜ್ಞಾನ ಎಂದರೇನು?ಕುತೂಹಲ ತುಂಬಿದ ಕಣ್ಣುಗಳಿಂದ ಯಾವುದೇ ವಿಷಯ ಅಥವಾ ವಸ್ತುಗಳನ್ನು ಗಮನಿಸಿ ಕೂಲಂಕುಷವಾಗಿ ಅಭ್ಯಸಿಸಿ ಪರೀಕ್ಷಿಸಿ ಪರಿಹಾರ ಕಂಡುಕೊಳ್ಳುವುದು ವಿಜ್ಞಾನ.ವಿಜ್ಞಾನ ಕಲಿಕೆಯನ್ನು ಪ್ರೀತಿಸಲು ಯಾವುದೆಲ್ಲ ಕ್ರಮ ಕಂಡು ಕೊಳ್ಳುತ್ತಿರಾ,ವಿಜ್ಞಾನದ ಜ್ಞಾನದ ವಿಸ್ತಾರ ಮಾಡುವುದು ಹೇಗೆ?ವಿಜ್ಞಾನದ ಕೆಲವು ಪತ್ರಿಕೆಗಳು ಯಾವುವು? ಅವುಗಳ ಅಗತ್ಯ ಇದೆ? ಭಾರತೀಯ ವಿಜ್ಞಾನಿಗಳು ಅವರ ಸಾಧನೆ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಒಂದಿಷ್ಟು ವಿಚಾರಗಳ ಕುರಿತಾಗಿ ವಿದ್ಯಾರ್ಥಿಗಳ ಜೊತೆ ಸಂವಾದವನ್ನು ಮಾಡಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ.ನಿಜ ಜೀವನದಲ್ಲಿ ವಿಜ್ಞಾನದ ಕುರಿತಾಗಿ ಮಾಹಿತಿ ನೀಡಿದರು.
ಈ ದಿನ ಶಾಲಾ ವಿಧ್ಯಾರ್ಥಿಗಳು ತಾವೇ ತಯಾರಿಸಿದ ವಿಜ್ಞಾನ ಮಾದರಿಗಳನ್ನು ಪ್ರದರ್ಶನ ಮಾಡಿದರು. ಶಾಲಾ ವಿದ್ಯಾರ್ಥಿ ಮಂತ್ರಿಮಂಡಲದ ಉಪನಾಯಕ ಜಸ್ಟಿನ್ ಅವರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಹರಿಣಿ ಅತಿಥಿಗಳ ಕಿರು ಪರಿಚಯವನ್ನು ನೀಡಿ,ನಿವೇದ್ಯ ಸ್ವಾಗತಿಸಿ ಅಭಿರಾಮ್ ಧನ್ಯವಾದ ಇತ್ತರು.ಶಾಲಾ ಶಿಕ್ಷಕ ವೃಂದ ಹಾಗೂ ವಿಧ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.