ಬೆಳ್ತಂಗಡಿ: ಮಾರ್ಚ್ 4- 5 ರಂದು ವಿಶ್ವ ಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶ
ಬೆಳ್ತಂಗಡಿ: ಸ್ಥಾನಿಕ ಬ್ರಾಹ್ಮಣ ಮಹಾಮಂಡಲ(ರಿ) ಮಂಗಳೂರು ಆಯೋಜನೆಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ(ರಿ) ಬೆಳ್ತಂಗಡಿ ಆಶ್ರಯದಲ್ಲಿ ಮಾರ್ಚ್ 4, 5 ರಂದು ಶನಿವಾರ ಹಾಗೂ ಆದಿತ್ಯವಾರದಂದು ವಿಶ್ವ ಮಟ್ಟದ ಸ್ಥಾನಿಕ ಬ್ರಾಹ್ಮನ ಸಮಾವೇಶವು ಲಾಯಿಲ ಶ್ರೀ ಸುಬ್ರಹ್ಮಣ್ಯ ಸಭಾಭವನದಲ್ಲಿ ಸಂಪನ್ನಗೊಳ್ಳಲಿದ್ದು, ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧು ಶೇಖರ ಭಾರತಿ ಮಹಾಸನ್ನಿಧಾನಂಗಳವರು ಸಮಾರೋಪ ಸಮಾರಂಭಕ್ಕೆ ಚಿತ್ತೈಸಿ ಆಶೀರ್ವದಿಸಲಿದ್ದಾರೆ ಎಂದು ಸ್ಥಾನಿಕ ಬ್ರಾಹ್ಮಣ ಮಹಾಮಂಡಲದ ಸಮಾವೇಶ ಸಮಿತಿಯ ಗೌರವಾಧ್ಯಕ್ಷರು ಎನ್ ಕೆ ಜಗನ್ನಿವಾಸ ರಾವ್ ಪುತ್ತೂರು ಇವರು ತಿಳಿಸಿದರು.
ಅವರು ಬೆಳ್ತಂಗಡಿಯ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಫೆ.28 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮಾರ್ಚ್ 4 ರಂದು ಶನಿವಾರ ಬೆಳಗ್ಗೆ ಪರಮಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಹೊರನಾಡು ಅನ್ನಪೂರ್ಣೆಶ್ವರಿ ದೇವಸ್ಥಾನದ ಧರ್ಮಕರ್ತರು ಭೀಮೇಶ್ವರ ಜೋಷಿ ಶುಭಾಶಂಸನೆ ನೀಡಲಿದ್ದು, ಸಭಾಧ್ಯಕ್ಷತೆಯನ್ನು ಬೆಳುವಾಯಿ ಎಂ ದೇವಾನಂದ ಭಟ್ ವಹಿಸಲಿದ್ದಾರೆ.
ಮುಖ್ಯ ಅಭ್ಯಾಗತರಾಗಿ ಕೆ ಪ್ರತಾಪ್ ಸಿಂಹ ನಾಯಕ್, ಸಚ್ಚಿದಾನಂದ ಮೂರ್ತಿ, ಪ್ರದೀಪ್ ಕುಮಾರ್ ಪಂಜ ಭಾಗಿಯಾಗಲಿದ್ದಾರೆ. ನಂತರ ಸಂಸಾರ, ಸಂಸ್ಕೃತಿಯ ರಕ್ಷಣೆಯಲ್ಲಿ ಮಾತೆಯರ ಜವಾಬ್ದಾರಿ ಎಂಬ ವಿಷಯದ ಕುರಿತು ಮಹಿಳಾ ವಿಚಾರ ಗೋಷ್ಠಿ, ನಡೆಯಲಿದೆ.
ಮಾರ್ಚ್ 5ರಂದು ಧಾರ್ಮಿಕ ಕಾರ್ಯಕ್ರಮಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರತಿಭಾ ಪಲಾಯನ ಹಾಗೂ ಪರಂಪರೆಯಲ್ಲಿ ಯುವಕರ ಪಾತ್ರ ಎಂಬ ವಿಷಯದ ಬಗ್ಗೆ ಯುವ ವಿಚಾರಗೋಷ್ಠಿ ಜರುಗಲಿದ್ದು, ಸಂಜೆ ಗಂಟೆ 5ರಿಂದ ಶ್ರೀ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರಾದ ಶ್ರೀ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಆಗಮನ, ಗುರುವಂದನಾ, ಆಶೀರ್ವಚನ, ಮಂಗಳ ಮಂತ್ರಾಕ್ಷತೆ ಜರುಗಲಿದ್ದು, ಉಡುಪಿ ಶ್ರೀ ಚಿಟ್ಪಾಡಿ ಸರ್ವೋತ್ತಮ ರಾವ್ ಅವರಿಗೆ ಸ್ಥಾನಿಕರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷರು ಎಂ ದೇವಾನಂದ ಭಟ್, ಕಾರ್ಯಾಧ್ಯಕ್ಷರಾದ ಪಿ ರಾಧಾಕೃಷ್ಣ ರಾವ್, ಪ್ರಧಾನ ಕಾರ್ಯದರ್ಶಿ ಬಿ.ಕೆ ಧನಂಜಯ್ ರಾವ್ ಬೆಳ್ತಂಗಡಿ, ಸಂಚಾಲಕರು ಉದಯ್ ಕುಮಾರ್ ರಾವ್, ಲೆಕ್ಕ ಪರಿಶೋಧಕ ನಟರಾಜ್, ಗೌರವ ಸಲಹೆಗಾರರಾದ ಎಂ.ಎಸ್ ಅರುಣ್ ಕುಮಾರ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರು ದಿನೇಶ್, ಪೂರ್ವಾಧ್ಯಕ್ಷರು ಶ್ರೀಪತಿ ರಾವ್, ಸದಸ್ಯರಾದ ಪ್ರಭಾ ವಿಜಯ್ ಕುಮಾರ್, ಅಕ್ಷತಾ ಚೈತನ್ಯ ಮತ್ತಿತರರು ಉಪಸ್ಥಿತರಿದ್ದರು.