ಧರ್ಮಸ್ಥಳ: ಹೆಗ್ಗಡೆಯವರ ಪ್ರೀತಿಯ ಗಿರೀಶ ಇನ್ನಿಲ್ಲ
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಗೋಕುಲ ಗೋಶಾಲೆಯಲ್ಲಿದ್ದ, ಖಾವಂದರ ಪ್ರೀತಿಯ ಗೀರ್ ಎತ್ತು ಜ.18 ರಂದು ರಾತ್ರಿ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ.
ಗಿರೀಶ ಎತ್ತು: ಬಹಳ ವರ್ಷಗಳಿಂದ ಈ ಗೋಶಾಲೆಯಲ್ಲಿದ್ದ ಗಿರೀಶನಿಗೆ 18 ವರ್ಷ ವಯಸ್ಸು. ಕ್ಷೇತ್ರದ ಯಾವುದೇ ಉತ್ಸವಗಳಿಗೂ ಬಸವನಾಗಿ ಗಿರೀಶನೇ ಮುಂಚೂನಿಯಲ್ಲಿತ್ತು. ಉತ್ಸವಗಳಿಗೆ ಹೋಗುವುದರಲ್ಲೇ ಸಂತೋಷ ಪಡುತ್ತಿದ್ದ ಈ ಬಸವ ಇದೀಗ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ.
ಎಲ್ಲರೊಂದಿಗೆ ಸಕ್ರೀಯವಾಗಿದ್ದ ಗಿರೀಶನಿಗೆ ಧಿಡೀರಾಗಿ ಹೃದಯಾಘಾತವಾಗಿ ಉಸಿರುಚೆಲ್ಲಿದೆ.
ಜ.19 ರಂದು ಬೆಳಗ್ಗೆ 11 ಗಂಟೆ ವೇಳೆ ಗೌರವಯುತವಾಗಿ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.
ಖಾವಂದರೊಂದಿಗೆ ಗಿರೀಶನ ಒಡನಾಟ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿಶೇಷತೆ ಗಿರೀಶನಿಗೆ ಅತ್ಯಂತ ಸಂತೋಷ ನೀಡುತ್ತಿತ್ತು. ಗೋಶಾಲೆಯಲ್ಲಿ ಅತೀ ಹಿರಿಯನಾಗಿದ್ದ ಗಿರೀಶನಿಗೆ ಖಾವಂದರೆಂದರೆ ಬಲು ಪ್ರೀತಿ. ಕ್ಷೇತ್ರದ ಉತ್ಸವದಲ್ಲಿ ಖಾವಂದರು ಗಿರೀಶ ಎಂದು ಕರೆದರೆ ಗಿರೀಶನು ಪ್ರೀತಿಯಿಂದ ತಲೆ ಎತ್ತಿ ಖಾವಂದರನ್ನು ನೋಡುತ್ತಿದ್ದ. ಇವರಿಬ್ಬರ ಬಾಂಧವ್ಯ ಅನನ್ಯವಾಗಿತ್ತು.
ಪುಂಗನೂರು ಕರುವಿನೊಂದಿಗೆ ಗಿರೀಶ:
ಇತ್ತೀಚೆಗೆ ಧರ್ಮಸ್ಥಳ ಕ್ಕೆ ಆಗಮಿಸಿದ ಪುಂಗನೂರು ಹಸುವಿನೊಂದಿಗೆ ಗಿರೀಶನ ಒಡನಾಡ ಚೆನ್ನಾಗಿರುತ್ತಿತ್ತು. ಪುಂಗನೂರು ಕರು ಗಿರೀಶನಿಗೆ ಏನೇ ಮಾಡಿದರು ಸಿಟ್ಟಾಗದೆ ಪ್ರೀತಿಯಿಂದ ಸ್ವೀಕರಿಸುತ್ತಿದ್ದ.