• November 22, 2024

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪುಂಗನೂರು ಹಸು ಆಗಮನ: ಲಕ್ಷಾಂತರ ಬೆಲೆಯ ಪುಂಗನೂರು ಹಸುಗಳ ವಿಶೇಷತೆಗಳೇನು?

 ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪುಂಗನೂರು ಹಸು ಆಗಮನ: ಲಕ್ಷಾಂತರ ಬೆಲೆಯ ಪುಂಗನೂರು ಹಸುಗಳ ವಿಶೇಷತೆಗಳೇನು?

 

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಗೋಕುಲ ಗೋಶಾಲೆಗೆ ಆಂಧ್ರಪ್ರದೇಶದಿಂದ ಐದು ಪುಂಗನೂರು ಹಸುಗಳನ್ನ ತರಲಾಗಿದೆ.

ಪುಂಗನೂರು ಹಸು: ಅತ್ಯಾಕರ್ಷಕ ಹಾಗೂ ಅಪ್ಪಟ ದೇಸಿ ತಳಿಯ ಹಸು. ಸುಂದರವಾಗಿರುವ ಹಸುವಿನ ತಳಿ ಜಗತ್ತಿನ ಬೇರೆಲ್ಲೂ ಇಲ್ಲ ಎಂಬುದು ದೇಶದ ನಾನಾ ಭಾಗದ ರೈತರು ಹಾಗೂ ಪಶು ಸಂಗೋಪನಾ ವಲಯದ ಪರಿಣಿತರ ಅಭಿಪ್ರಾಯ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಗ್ರಾಮ ಈ ಹಸುಗಳ ಮೂಲ ಸ್ಥಾನ. ಹೀಗಾಗಿಯೇ ಹಸುಗಳ ತಳಿಗೆ ಗ್ರಾಮದ ಹೆಸರೇ ಬಂದಿದೆ.

ಈ ಹಸು ಇಷ್ಟೊಂದು ಫೇಮಸ್ ಯಾಕೆ ಅನ್ನೊದು ನಿಮ್ಮ ಪ್ರಶ್ನೆ ಆಗಿರಬಹುದು. ಇವುಗಳ ಗುಣ ವಿಶೇಷತೆಗಳಿಂದಲೇ ಈ ಹಸು ಮನೆಮಾತಾಗಿರೋದು. ಇದೇ ಪುಂಗನೂರು ತಳಿಯ ವಿಶೇಷ ಗುಣ.

ಮನುಷ್ಯರ ಜೊತೆನೂ ಬಲು ಬೇಗನೇ ಹೊಂದಿಕೊಳ್ಳುವ ಇವುಗಳು ನಿಜವಾಗಿಯೂ ಸ್ಪುರದ್ರೂಪಿಗಳು. ಈ ಹಸುಗಳು ಇರೋದು ಆಂಧ್ರ ಪ್ರದೇಶದಲ್ಲಾದ್ರೂ ಈಗ ಈ ಹಸುಗಳು ಧರ್ಮಸ್ಥಳದಲ್ಲಿಯೂ ನಮಗೆ ನೋಡೋಕೆ ಸಿಗುತ್ತೆ.

ಧರ್ಮಸ್ಥಳದ ಗೋಕುಲಕ್ಕೆ ಡಿಸೆಂಬರ್ ತಿಂಗಳಲ್ಲಿ ಎರಡು ದನ, ಒಂದು ಹೆಣ್ಣು ಕರು, ಒಂದು ಗಂಡು ಕರು, ಒಂದು ಹೋರಿಯನ್ನು ಆಂಧ್ರಪ್ರದೇಶದಿಂದ ತರಿಸಿಕೊಳ್ಳಲಾಗಿದೆ.


ಪುಂಗನೂರು ಹಸುವಿಗೆ ಬೆಲೆ: 5 ಪುಂಗನೂರು ಹಸುಗಳ ಒಟ್ಟು ಬೆಲೆ 8,85,000 ರೂಪಾಯಿ ನೀಡಿ ಆಂದ್ರಪ್ರದೇಶದಿಂದ ಧರ್ಮಸ್ಥಳ ಗೋಕುಲ ಗೋಶಾಲೆಗೆ ತರಿಸಿಕೊಳ್ಳಲಾಗಿದೆ.


ಪುಂಗನೂರು ತಳಿಯ ಹಸುಗಳ ವಿಶೇಷತೆ ಇವುಗಳ ಹಾಲಿನಲ್ಲಿ ಬಹಳಷ್ಟು ಆರೋಗ್ಯಕಾರಕ ಅಂಶಗಳಿವೆ. ಇವುಗಳ ಹಾಲಿನಲ್ಲಿ ಕೊಬ್ಬಿನ ಅಂಶ ಯಥೇಚ್ಚವಾಗಿರುತ್ತದೆ. ಈ ಹಾಲನ್ನು ಪ್ರತಿನಿತ್ಯ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.ಹೋಮಿಯೊಪತಿ ಔಷಧ ತಯಾರಿಕೆಗೆ ಬಳಸುವ ಕಾರಣ ಪುಂಗನೂರು ತಳಿ ಆಕಳ ಹಾಲಿನ ಬೆಲೆಯೂ ಹೆಚ್ಚಿದೆ. ಇದೆಷ್ಟೇ ಕಾರಣಗಳಲ್ಲದೇ ಈ ತಳಿ ಈಗ ಅಳಿವಿನಂಚಿನಲ್ಲಿದೆ. ಹೀಗಾಗಿ ಇವುಗಳ ಬೆಲೆ ಲಕ್ಷದಿಂದಲೇ ಆರಂಭವಾಗುತ್ತದೆ. ಮಾರುಕಟ್ಟೆಯೂ ಒಂದು ಕೆ.ಜಿ ತುಪ್ಪದ ಬೆಲೆ ಸಾವಿರ ರೂಪಾಯಿ ಇದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಪುಂಗನೂರು ಹಸುಗಳ ಹಾಲಿನ ಅಭಿಷೇಕ ಮಾಡುವ ಉದ್ದೇಶದಿಂದ ಧರ್ಮಸ್ಥಳದ ಗೋಕುಲಕ್ಕೆ 5 ಪುಂಗನೂರು ತಳಿಯ ಹಸುಗಳನ್ನು ತರಿಸಲಾಗಿದೆ ಎಂದು ಗೋಕುಲ ಗೋಶಾಲೆಯ ಡೈರಿ ಸೂಪರ್ವೈಸರ್ ಯೋಗೀಶ್ ಭಟ್ ಇಲ್ಲಿನ ಪುಂಗನೂರು ಹಸುಗಳ ಬಗ್ಗೆ ವಿವರಿಸಿದ್ದಾರೆ.

ಕಾಮಧೇನು: ಪುಟ್ಟ ಪುಟ್ಟ ಕಾಲು, ಮುಗ್ಧತೆ ತುಂಬಿರೋ ಮುಖ, ಶ್ವೇತವರ್ಣದ ಈ ಹಸುಗಳನ್ನು ನೋಡುತ್ತಿದ್ದರೆ ನೋಡ್ತಾನೆ ಇರಬೇಕು ಅನ್ಸುತ್ತೆ. ಪುರಾಣದಲ್ಲಿ ಕಾಮಧೇನು ಎಂದು ಕರೆಸಿಕೊಳ್ಳುತ್ತಿದ್ದ ಹಸು, ಇದೇ ಪುಂಗನೂರು ಎಂದು ಹೇಳಲಾಗುತ್ತೆ. ಬೆಳ್ಳಿಯಂತೆ ಕಂಗೊಳಿಸುವ ಈ ಹಸುಗಳು ತಮ್ಮ ದೇಹವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುತ್ತದೆ. ಎಲ್ಲಾ ಹಸುಗಳೊಂದಿಗೆ ಪ್ರೀತಿಯಿಂದ ಹೊಂದಿಕೊಳ್ಳುತ್ತೆ. ಅಂತೂ ಅಳಿವಿನಂಚಿನಲ್ಲಿರುವ ಈ ತಳಿಗಳನ್ನು ರಕ್ಷಿಸುವುದು, ಜೊತೆಗೆ ಈ ಕಾಮಧೇನು ಧರ್ಮಸ್ಥಳದಲ್ಲಿ ಕಾಣಸಿಕ್ಕಿರುವುದು.


Related post

Leave a Reply

Your email address will not be published. Required fields are marked *

error: Content is protected !!