• January 22, 2025

ಫೆ.4-9 ರತನಕ ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಚಪ್ಪರ ಮುಹೂರ್ತ ಮತ್ತು ಕಾರ್ಯಾಲಯ ಉದ್ಘಾಟನೆ

 ಫೆ.4-9 ರತನಕ ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಚಪ್ಪರ ಮುಹೂರ್ತ ಮತ್ತು ಕಾರ್ಯಾಲಯ ಉದ್ಘಾಟನೆ

 

ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಅಷ್ಟ ಬಂಧ ಬ್ರಹ್ಮಕಲಶೋತ್ಸವವು ಫೆಬ್ರವರಿಯಲ್ಲಿ ನಡೆಯಲಿದ್ದು ಇದರ ಮೊದಲ ಅಂಗವಾಗಿ ಚಪ್ಪರ ಮುಹೂರ್ತವ ಹಾಗೂ ಕಾರ್ಯಾಲಯದ ಉದ್ಘಾಟನಾ ಸಮಾರಂಭ ನಡೆಯಿತು.

ಬೆಂಗಳೂರು ಸಾನ್ವಿ ಗ್ರೂಪ್ ಆಫ್ ಕಂಪೆನಿ ಮತ್ತು ಅನ್ನಪೂರ್ಣ ಹಾಸ್ಪಿಟಲಿಟಿ ಸರ್ವಿಸಸ್ ಸಿ.ಇ.ಓ ಹರೀಶ್ ಶೆಟ್ಟಿ ಕಂರ್ಬಿತ್ತಿಲ್ ಇವರು ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿ ಶುಭಕೋರಿದರು.

ಕಾರ್ಯಾಲಯದ ಉದ್ಘಾಟನೆಯನ್ನು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ, ಸ್ವಾಗತ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಅಜಿಲ ನೇರವೇರಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರ್,ಜಿರ್ಣೋದ್ದಾರ ಸಮಿತಿ ಅಧ್ಯಕ್ಷ ಶಶಿಧರ್ ಡೋಂಗ್ರೆ,ಪ್ರಧಾನ ಅರ್ಚಕ ಸೋಮನಾಥ ಮಯ್ಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು,ಪ್ರ,ಆರ್ಥಿಕ ಸಮಿತಿ ಸಂಚಾಲಕ ಸೋಮನಾಥ ಬಂಗೇರ ವರ್ಪಾಳೆ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಅನಿಲ್ ಕುಮಾರ್ ಮಾಳಿಗೆ ಮನೆ, ಪ್ರಮುಖರಾದ ನವೀನ್ ಕೆ ಸಾಮಾನಿ,ದೀಪಕ್ ಅಠವಳೆ, ನಿರಂಜನ ಜೋಶಿ, ವಿಶ್ವನಾಥ ಹೊಳ್ಳ, ಯಶೋಧರ ಸುವರ್ಣ, ಜಗನ್ನಾಥ ಶೆಟ್ಟಿ, ಹರೀಶ್ ಆಚಾರ್ಯ,ಕೃಷ್ಣಪ್ಪ ಪೂಜಾರಿ ಬಿಕ್ಕಿರ,ದೇವಿಪ್ರಸಾದ್ ಶೆಟ್ಟಿ, ರಾಜಿತ್ ರೈ, ಜಗದೀಶ್ ರೈ ಹಾನಿಂಜ, ಪ್ರಭಾಕರ ಪೂಜಾರಿ ಕೊಡಂಗೆ,ಚಂದ್ರಶೇಖರ್ ಮಹಾಗಣಪತಿ,ಉಮೇಶ್ ಸುವರ್ಣ ಹಾಗೂ ಊರವರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಸಮಿತಿ ಸಂಚಾಲಕ ವಿಜಯ ಕುಮಾರ್ ಜೈನ್ ನಿರೂಪಿಸಿ,ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ ಸ್ವಾಗತಿಸಿದರು, ಜಿರ್ಣೊದ್ದೋರ ಸಮಿತಿ ಪ್ರ.ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ನೊಚ್ಚ ವಂದಿಸಿದರು.

Related post

Leave a Reply

Your email address will not be published. Required fields are marked *

error: Content is protected !!