• March 24, 2025

ಕಣಿಯೂರು: ಯುವಕೇಸರಿ ಕಣಿಯೂರು ಇದರ ಉದ್ಘಾಟನಾ ಕಾರ್ಯಕ್ರಮ ಮತ್ತು ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ

 ಕಣಿಯೂರು: ಯುವಕೇಸರಿ ಕಣಿಯೂರು ಇದರ ಉದ್ಘಾಟನಾ ಕಾರ್ಯಕ್ರಮ ಮತ್ತು ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ

 

ಕಣಿಯೂರು: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಯುವಕೇಸರಿ ಕಣಿಯೂರು ಇದರ ಉದ್ಘಾಟನಾ ಕಾರ್ಯಕ್ರಮ ಮತ್ತು ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಜ. 12 ರಂದು ಕಣಿಯೂರು ಕಸಬಾ ಶಾಲೆಯಲ್ಲಿ ನಡೆಯಿತು.

ಯುವಕೇಸರಿ ಸಂಘವನ್ನು ರೈತಬಂಧು ಆಹಾರೋದ್ಯಮ ಪ್ರೈ ಲಿ ಇದರ ಮಾಲಕರಾದ ಶಿವಶಂಕರ ನಾಯಕ್ ರವರು ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.

ಯುವ ಕೇಸರಿಯ ಅಧ್ಯಕ್ಷ ಪ್ರವೀಣ್ ಗೌಡ ಅಲೆಕ್ಕಿ ಸ್ವಾಗತಿಸಿ, ಗೌರವಾಧ್ಯಕ್ಷ ರಕ್ಷಿತ್ ಪಣೆಕ್ಕರ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಯುವಕೇಸರಿ ಕಣಿಯೂರು ಇದರ ಕಾರ್ಯದರ್ಶಿ ಯತೀಶ್ ಶೆಟ್ಟಿ ಪಣೆಕ್ಕರ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಕಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ಸೇಸಪ್ಪ ಮೂಲ್ಯ, ಯಶೋಧರ ಶೆಟ್ಟಿ ಕಣಿಯೂರು,ಕಣಿಯೂರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ್ ಗೌಡ ಅಲೆಕ್ಕಿ, ಯುವ ಕೇಸರಿ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!