ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ, ವಿವೇಕಾನಂದರ ಜಯಂತಿ ಪ್ರಯುಕ್ತ ರಾಜ್ಯ ಮಟ್ಟದ ಆನ್ಲೈನ್ ವಿವೇಕಾನಂದರ ದಿರಿಸು ಧರಿಸು “ವಿವೇಕ ರೂಪ” ಸ್ಪರ್ಧೆ
ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ, ವಿವೇಕಾನಂದರ ಜಯಂತಿ ಪ್ರಯುಕ್ತ ರಾಜ್ಯ ಮಟ್ಟದ ಆನ್ಲೈನ್ ವಿವೇಕಾನಂದರ ದಿರಿಸು ಧರಿಸು “ವಿವೇಕ ರೂಪ” ಸ್ಪರ್ಧೆ ನಡೆಯಲಿದ್ದು ಜ.14 ರಂದು ಕೊನೆಯ ದಿನಾಂಕವಾಗಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬೇಕಾದ ನಿಯಮಾವಳಿಗಳು ಇಂತಿವೆ:
1) ವಯಸ್ಸಿನ ಮಿತಿ 1 ವರ್ಷದಿಂದ 10 ವರ್ಷದ ಬಾಲಕ ಹಾಗೂ ಬಾಲಕಿಯರಿಗೆ ಮುಕ್ತ ಅವಕಾಶ.
2) ಸ್ಪರ್ಧಾಳುಗಳು ವಿವೇಕಾನಂದರ ದಿರಿಸು ಧರಿಸಿದ ಫೋಟೋ ಕಳುಹಿಸಲು ಜನವರಿ 14 ರಂದು ಕೊನೆಯ ದಿನಾಂಕ
3) ಮೊದಲು ಬೇರೆ ಸ್ಪರ್ಧೆಗಳಿಗೆ ಕಳುಹಿಸಿದ ಫೋಟೋವನ್ನು ಸ್ವೀಕರಿಸಲಾಗುವುದಿಲ್ಲ.
4) ಸ್ಪರ್ದಾಳುಗಳ ಹೆಸರು ಮತ್ತು ವಿಳಾಸ ಕಡ್ಡಾಯವಾಗಿ ಕಳುಹಿಸಬೇಕು.
5) ಆಯೋಜಕರ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ
6) ಫೋಟೋ ಕಳುಹಿಸಬೇಕಾದ ಸಂಖ್ಯೆ 8971689755
ನಗದು ಬಹುಮಾನಗಳೊಂದಿಗೆ ಪ್ರಥಮ, ದ್ವಿತೀಯ ಪುರಸ್ಕಾರವನ್ನು ನಿಡಲಾಗುತ್ತದೆ.