ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆ
ಪುತ್ತೂರು : ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ, ಹಿಂದೂ ರಾಷ್ಟ್ರ ಜಾಗೃತಿ ಸಭೆಯು ಜ.9 ರಂದು ಊಂತನಾಜೆಯ ಶ್ರೀ ಲಕ್ಷ್ಮೀನಾರಾಯಣ ಸಭಾಭವನ ದಲ್ಲಿ ನಡೆಯಿತು.
ದಿನೇಶ್ ಜೈನ್ ಇವರು ಮಾತನಾಡುತ್ತಾ ಹಿಂದುಗಳಿಗೆ ಧರ್ಮದ ಬಗ್ಗೆ ಅಭಿಮಾನವಿಲ್ಲದಿರುವುದರಿಂದ ದೇವತೆಗಳ ವಿಡಂಬನೆಯಾದರೂ ಯಾರಿಗೆ ಏನು ಅನಿಸುವುದಿಲ್ಲ. ಮತಾಂತರವಾದರೂ ಏನು ಅನಿಸುವುದಿಲ್ಲ. ಭ್ರಷ್ಟಾಚಾರ ಕಣ್ಣಿನ ಎದುರುನಲ್ಲಿ ನಡೆಯುತ್ತಿದ್ದರು ಏನು ಅನಿಸುವುದಿಲ್ಲ. ಹಿಂದುಗಳ ಹತ್ಯೆಯಾದರೂ ಏನು ಅನಿಸುವುದಿಲ್ಲ. ಇದಕ್ಕೆ ಮೂಲ ಕಾರಣ ಹಿಂದೂಗಳಿಗೆ ಹಿಂದೂ ಧರ್ಮದ ಜ್ಞಾನವಿಲ್ಲದಿರುವುದು ಆಗಿದೆ. ಹಿಂದುಗಳಿಗೆ ಹಿಂದೂ ಧರ್ಮದ ಶಿಕ್ಷಣ, ನೈತಿಕ ಮೌಲ್ಯ ಆಧರಿತ ಶಿಕ್ಷಣ ಇಲ್ಲದಿರುವುದರಿಂದ ಧರ್ಮ ಅಭಿಮಾನ ಇಲ್ಲ. ಇದಕ್ಕಾಗಿ ಪ್ರತಿಯೊಬ್ಬ ಹಿಂದುಗಳು ಹಿಂದೂ ಧರ್ಮದ ಶಿಕ್ಷಣ ಪಡೆಯಬೇಕಿದೆ.
ಇಂದು ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದಿಗಾಗಿ ಬಲಿಯಾಗುತ್ತಿದ್ದಾರೆ.ಅಲ್ಲದೆ ಆ ಹೆಣ್ಣು ಮಕ್ಕಳು ಭಯೋತ್ಪಾದನೆ ಚಟುವಟಿಕೆಗಳಲ್ಲಿ ಯಾವ ರೀತಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಈಗಾಗಲೇ ದೀಪ್ತಿ ಮಾರ್ಲ ಮರಿಯ ಲಾಗಿ ಕಂಬಿ ಎಣಿಸುತ್ತಿರುವುದು ಕೇಳಿದ್ದೀರಿ. ಗೋವುಗಳ ಹತ್ಯೆ ಯಾಗುತ್ತಿದ್ದರು ಅದನ್ನು ತಡೆಯುವವರ ಮೇಲೆ ಕೇಸ್ ಹಾಕುತ್ತಾರೆ .ಇಂತಹ ಸಂಕಷ್ಟದಿಂದ ನಾವು ಹೊರಗೆ ಬರಬೇಕಾದರೆ ಇವತ್ತು ಹಿಂದೂ ರಾಷ್ಟ್ರದ ಅವಶ್ಯಕತೆ ಇದೆ .ಅದಕ್ಕಾಗಿ ಪ್ರತಿಯೊಬ್ಬರು ಹಿಂದೂ ಧರ್ಮದ ಶಿಕ್ಷಣ ಪಡೆದು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಟ್ಟಿಬದ್ಧರಾಗೋಣ ಎಂದು ಸಮಾಜಕ್ಕೆ ಕರೆಕೊಟ್ಟರು.
ದಕ್ಷಿಣ ಕನ್ನಡ ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿ ಸಮನ್ವಯ ಕರಾದ ಪವಿತ್ರ ಕುಡ್ವ ಮಾತನಾಡುತ್ತಾ , ಹಿಂದೂಗಳಿಗೆ ಹಿಂದೂ ಧರ್ಮದ ಆಚರಣೆ ಮಾಡಲು ಸಂಕೋಚ ಆಗುತ್ತದೆ ಆದರೆ ಇತರ ಮತದವರು ಬುರ್ಖಾ ತೊಡುತ್ತಾರೆ. ಅವರಿಗೆ ಸಂಕೋಚ ವಾಗುವುದಿಲ್ಲ. ನಮ್ಮ ಹೆಣ್ಮಕ್ಕಳು ಲವ್ ಜಿಹಾದ್ ಗೆ ಬಲಿಯಾಗಿ ಮತಾಂತರವಾಗಿ ಅಲ್ಲಿ ಬುರ್ಖ ತೋಡುತ್ತಿದ್ದಾರೆ. ಇದಕ್ಕೆ ಕಾರಣ ಹಿಂದೂಗಳಿಗೆ ಹಿಂದೂ ಧರ್ಮದ ಮಹಾನತೆ ತಿಳಿಯದಿರುವುದು ಮತ್ತು ಹಿಂದೂ ಧರ್ಮದ ಅಜ್ಞಾನವೇ ಆಗಿದೆ. ಇದರಿಂದಾಗಿ ನಮ್ಮ ಹಿಂದುಗಳನ್ನು ಸುಲಭವಾಗಿ ಮತಾಂತರ ಮಾಡಿ ಭಯೋತ್ಪಾದನೆ ಚಟುವಟಿಕೆಗಳಿಗೆ ಉಪಯೋಗಿಸಲು ಸುಲಭವಾಗುತ್ತಿದೆ. ಇದಕ್ಕಾಗಿ ನಮ್ಮ ಹಿಂದುಗಳಿಗೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರಿಗೆ ಸಹ ಧರ್ಮ ಶಿಕ್ಷಣ ದ ಅವಶ್ಯಕತೆ ಎಷ್ಟು ಇದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಇದಕ್ಕಾಗಿ ಹಿಂದೂ ಜನ ಜಾಗೃತಿ ಸಮಿತಿ ಹಿಂದೂಗಳಿಗೆ ಶುಲ್ಕ ರಹಿತ ಧರ್ಮ ಶಿಕ್ಷಣ ವರ್ಗಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
ಸನಾತನ ಸಂಸ್ಥೆಯ ವಕ್ತಾರರಾದ, ಆನಂದ ಗೌಡ ಇವರು ಮಾತನಾಡುತ್ತಾ ಭಾರತ ದೇಶ ಜಾತ್ಯತೀತ ಹೆಸರಿನಲ್ಲಿ ಸಮಾನತೆ ತರಲು ಪ್ರಯತ್ನ ಮಾಡುತ್ತಿದೆ. ಆದರೆ ಎಲ್ಲಿದೆ ಸಮಾನತೆ ?ಅಲ್ಪ ಸಂಖ್ಯಾತರಿಗಾಗಿ ವಿಶೇಷ ಆಯೋಗಗಳನ್ನು ನಿರ್ಮಿಸಲಾಗುತ್ತಿದೆ ಆದರೆ ಹಿಂದುಗಳಿಗೆ ಏನಾದರೂ ಆಯೋಗ ಇದೆಯಾ? ಸಂವಿಧಾನದಲ್ಲಿ 28 ನೇ ಕಲಂ ನಲ್ಲಿ ಧರ್ಮ ಶಿಕ್ಷಣ ಕೊಡಲಿಕ್ಕೆ ಇಲ್ಲ. ಎಂದು ಹೇಳಲಾಗಿದೆ ಆದರೆ 30ನೇ ಕಲಂ ನಲ್ಲಿ ಮದರಸದಲ್ಲಿ , ಕಾನ್ವೆಂಟ್ ನಲ್ಲಿ ನೀಡಬಹುದು. ಅವರಿಗೆ ಅನುದಾನ ನೀಡಲು ಅಭ್ಯಂತರ ಇಲ್ಲ .ಆದರೆ ಹಿಂದುಗಳಿಗೆ ವೇದ ಪಾಠಶಾಲೆಯಲ್ಲಿ ಧರ್ಮ ಶಿಕ್ಷಣ ನೀಡಲು ಅನುದಾನ ಕೊಡಲಿಕ್ಕೆ ಅವಕಾಶವಿಲ್ಲ ಎಂದು ಹೇಳಲಾಗಿದೆ ಇದಕ್ಕಾಗಿ ಧರ್ಮಾದಿಷ್ಟಿತ ಸಮಾಜ ಸ್ಥಾಪನೆ ಯಾಗಲು ಭಾರತ ಹಿಂದೂ ರಾಷ್ಟ್ರವಾಗಬೇಕು .ಜಾತ್ಯತೀತ ರಾಷ್ಟ್ರದ ಹೆಸರಿನಲ್ಲಿ ಸಮಾಜದಲ್ಲಿ ನೈತಿಕತೆ ಅದ ಪತನ ವಾಗಿರುವುದು ಕಂಡು ಬರುತ್ತಿದೆ . ಇದಕ್ಕಾಗಿ ಪ್ರತಿಯೊಬ್ಬ ಹಿಂದುಗಳು ಧರ್ಮ ಶಿಕ್ಷಣ ಪಡೆದು, ಭಗವಂತನ ಉಪಾಸನೆ ಹೇಗೆ ಮಾಡಬೇಕು, ಭಗವಂತನ ಉಪಾಸನೆಯಿಂದ ಹೇಗೆ ನಾವು ಚೈತನ್ಯ ,ಜ್ಞಾನ, ನೈತಿಕ ಸಂವರ್ಧನೆ ಯನ್ನು ಪಡೆಯಬಹುದು ಎಂದು ಮಾಹಿತಿಯನ್ನು ನೀಡಿದರು. ಇಂದು ಸಮಾಜದಲ್ಲಿ ಅಧರ್ಮಗಳಾದಾಗ ಯಾವ ರೀತಿ ಕಂಟಕಗಳು ಬರುತ್ತವೆ ಎಂಬುದನ್ನು ಕೆಲವು ಉದಾಹರಣೆ ಗಳ ಮೂಲಕ ತಿಳಿಸಿ ಹೇಳಿದರು.
ಈ ಸಭೆಗೆ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲೆಯ ವಾಣಿಜ್ಯ ಹಾಗೂ ಪ್ರಕೋಸ್ಟ ದ ಸಹ ಸಂಚಾಲಕರಾದ ದಿನೇಶ್ ಜೈನ್, ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಪವಿತ್ರ ಕುಡ್ವ ಹಾಗೂ ಸನಾತನ ಸಂಸ್ಥೆಯ ಆನಂದ ಗೌಡ ಇವರು ಉಪಸ್ಥಿತರಿದ್ದರು.