• July 15, 2024

ಡಿ.30 ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ|| ಇಲ್ಲಿ ಶಾಲಾ ಪ್ರತಿಭಾ ಸಂಭ್ರಮ

 ಡಿ.30 ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ|| ಇಲ್ಲಿ ಶಾಲಾ ಪ್ರತಿಭಾ ಸಂಭ್ರಮ

ಕನ್ಯಾಡಿ||: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ|| ಧರ್ಮಸ್ಥಳ ಮತ್ತು ಹಳೆ ವಿದ್ಯಾರ್ಥಿ ಸಂಘ ಕನ್ಯಾಡಿ-|| ಧರ್ಮಸ್ಥಳ ಇದರ ಶಾಲಾ ಪ್ರತಿಭಾ ಸಂಭ್ರಮವು ಡಿ.30 ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ||ಯಲ್ಲಿ ಜರುಗಲಿದೆ.

ಡಿ.30 ರಂದು ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದ್ದು, ಧ್ವಜಾರೋಹಣವನ್ನು ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಪ್ರೀತಮ್ ಡಿ ನೆರವೇರಿಸಲಿದ್ದಾರೆ.

ಇನ್ನೂ ಸಭಾ ಕಾರ್ಯಕ್ರಮವನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷರು ಜಯ ಮೋನಪ್ಪ ಗೌಡ ವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರು, ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್, ಪ್ರತಾಪ್ ಸಿಂಹ ನಾಯಕ್, ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಪಿ, ಗ್ರಾ.ಪಂ ಸದಸ್ಯರಾದ ಹರೀಶ್ ಸುವರ್ಣ, ವಸಂತ ನಾಯ್ಕ್, ಭಾರತಿ, ಸುಧಾಕರ ಗೌಡ ಪೂರ್ಜೆ, ರೇವತಿ, ಕಮಲ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್ ಎಸ್, ನಿಡ್ಲೆ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರತಿಮಾ ಕೆ.ಎಂ ಭಾಗಿಯಾಗಲಿದ್ದಾರೆ ಹಾಗೂ ಶುಭಾಶಂಸನೆಯನ್ನು ಅಲೆಕ್ಕಿ ರಚನಾ ಗುಡಿಗಾರ್ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಪ್ಲೇವಿಯ ಡಿಸೋಜ, ಹ.ವಿ ಸಂಘ ಅಧ್ಯಕ್ಷರು ಮನೋಹರ್ ರಾವ್ ಯು.ಟಿ, ಶಾಲಾ ನಾಯಕಿ ಸಮೀಕ್ಷಾ ಬಿ, ಎಸ್ ಡಿಎಂಸಿ ಅಧ್ಯಕ್ಷ ಕೆ ನಂದ, ಎಸ್ ಡಿಎಂಸಿ ಸದಸ್ಯ ವೃಂದ, ಶಾಲಾ ಅಧ್ಯಾಪಕ ವೃಂದ, ಹಳೆ ವಿದ್ಯಾರ್ಥಿ ವೃಂ್, ಗೌರವ ಸಲಹೆಗಾರರು, ವಿವಿಧ ಸಂಘ ಸಂಸ್ಥೆಗಳು, ಪೋಷಕ ವೃಂದ ಉಪಸ್ಥಿತರಿರುವರು

ನಮನ ಚಾನೆಲ್ ನಲ್ಲಿ ನೇರಪ್ರಸಾರಗೊಳ್ಳಲಿದೆ

Related post

Leave a Reply

Your email address will not be published. Required fields are marked *

error: Content is protected !!