• June 16, 2024

ಜಲೀಲ್ ಹತ್ಯೆ ಪ್ರಕರಣ: ತೀವ್ರವಾಗಿ ಖಂಡಿಸಿದ ಮಾಜಿ ಸಚಿವರಾದ ಕೆ. ಗಂಗಾಧರ ಗೌಡ

 ಜಲೀಲ್ ಹತ್ಯೆ ಪ್ರಕರಣ: ತೀವ್ರವಾಗಿ ಖಂಡಿಸಿದ ಮಾಜಿ ಸಚಿವರಾದ ಕೆ. ಗಂಗಾಧರ ಗೌಡ

ಬೆಳ್ತಂಗಡಿ: ಇತ್ತೀಚೆಗೆ ನಡೆದ ಕಾಟಿಪಳ್ಳದ ಜಲೀಲ್ ಹತ್ಯೆ ಪ್ರಕರಣವನ್ನು ಮಾಜಿ ಸಚಿವರಾದ ಕೆ. ಗಂಗಾಧರ ಗೌಡರವರು ತೀವ್ರವಾಗಿ ಖಂಡಿಸಿದ್ದಾರೆ.

ಕೊಲ್ಲುವವನಿಗಿಂತ ಕಾಯುವವನು ದೊಡ್ಡವ. ಪ್ರೀತಿ,ವಿಶ್ವಾಸ ಮತ್ತು ದಯೆ ಸಾಮರಸ್ಯ ಮಾನವತೆಯ ಮೂಲವಾಗಿರುತ್ತದೆ. ಕೊಲೆ ಮಾಡುವಂತದ್ದು ಯಾವುದೇ ಮಾನವ ಧರ್ಮದಲ್ಲಿ ಖಂಡನೀಯವಾಗಿರುತ್ತದೆ. ನಾಡಿನ ಸೌಹಾರ್ದತೆಯನ್ನು ಕೆಡಿಸಿ ಕೇವಲ ರಾಜಕೀಯ ಲಾಭಕ್ಕಾಗಿ ಮಾಡುವಂತಹ ಗೂಂಡಾಗಿರಿ,ಕೊಲೆಗಳಂತಹ ಘೋರ ಅಪರಾಧ ಕೃತ್ಯಗಳು ಸಮಾಜವನ್ನು ವಿಭಜಿಸುವುದಲ್ಲದೇ, ಜನರ ನೆಮ್ಮದಿ, ಶಾಂತಿ-ಸೌಹಾರ್ದತೆಯನ್ನು ಕೆಡಿಸುತ್ತದೆ. ಸ್ವಸ್ಥ ಸಮಾಜಕ್ಕಾಗಿ ಮಾನವತಾ ವಾದಿಗಳಾದ ನಾವೆಲ್ಲರೂ ಇದನ್ನು ಕಠಿಣ ಶಬ್ಧಗಳಲ್ಲಿ ಖಂಡಿಸುತ್ತೇವೆ, ಮತ್ತು ಸರಕಾರ ಪರಿಹಾರ ನೀಡುವುದರಲ್ಲಿ ತಾರತಮ್ಯ ಮಾಡಬಾರದು. ಮೃತರ ಕುಟುಂಬಸ್ಥರು ಆರ್ಥಿಕವಾಗಿ ಹಿಂದುಳಿದವರಾಗಿರುವುದರಿಂದ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!